ಆಂಧ್ರಪ್ರದೇಶ: ತಿರುಪತಿ ತಿಮ್ಮಪ್ಪ ಪ್ರಪಂಚದಲ್ಲಿಯೇ ಅತ್ಯಂತ ಶ್ರೀಮಂತ ದೇವರು ಅನ್ನೋದು ಯಾವಾಗಲೂ ಪ್ರೂವ್ ಆಗ್ತಾನೆ ಇರುತ್ತೆ. ದರ್ಶನಕ್ಕೆ ಹೋಗುವ ಭಕ್ತರ ಸಂಖ್ಯೆಯೂ ದಿನೇ ದಿನೇ ಜಾಸ್ತಿಯಾಗುತ್ತಾ ಇದೆ. ಇದೀಗ ದೇಗುಲದ ಬಾಗಿಲನ್ನು ಸುಮಾರು ಎಂಟು ತಿಂಗಳ ಕಾಲ ಮುಚ್ಚಲಾಗುತ್ತೆ ಎನ್ನಲಾಗುತ್ತಿದೆ. ಇದು ಭಕ್ತಗಣಕ್ಕೆ ಶಾಕಿಂಗ್ ವಿಚಾರ ಆಗಿದೆ.
ಇತ್ತಿಚೆಗೆ ನಡೆದ ಟಿಟಿಡಿ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎನ್ನಲಾಗಿದೆ. 3 ಮಹಡಿಯ ಆನಂದ ನಿಲಯಂ ಹೆಸರಿನ 37.8ಅಡಿ ಎತ್ತರದ ಗೋಪುರವನ್ನು ಕಟ್ಟಿಸಲಾಗಿದೆ. ಇದಕ್ಕೆ ಚಿನ್ನದ ಲೇಪನ ಮಾಡುವ ಕೆಲಸವಿರುವ ಕಾರಣ ಗರ್ಭಗುಡಿಯನ್ನು ಮುಚ್ಚಲಾಗುತ್ತದೆ ಎಂದು ಹೇಳಲಾಗುತ್ತಿದೆ.
ಆದರೆ ಇದರ ನಡುವೆ ಭಕ್ತರಿಗೆ ಬೇರೆ ರೀತಿಯಾಗಿ ದರ್ಶನ ಭಾಗ್ಯ ನೀಡಲಾಗುತ್ತದೆ. ನೇರ ದರ್ಶನಕ್ಕೆ ಅವಕಾಶವಿರುವುದಿಲ್ಲ. ಆದರೆ ತಾತ್ಕಾಲಿಕವಾಗಿ ಗರ್ಭಗುಡಿ ಸ್ಥಾಪಿಸಿ, ಅಲ್ಲಿ ವೆಂಕಟೇಶ್ವರನ ಪ್ರತಿಕೃತಿ ಸೃಷ್ಟಿಸಿ, ಗೋಪುರಕ್ಕೆ ಲೇಪನ ಮುಗಿಯುವ ತನಕ ಅಲ್ಲಿ ಭಕ್ತರಿಗೆ ದರ್ಶನ ಭಾಗ್ಯ ನೀಡಲಾಗುವುದು ಎಂದು ತಿಳಿಸಿದ್ದಾರೆ. ಫೆಬ್ರವರಿಯಲ್ಲಿ ಚಿನ್ನದ ಲೇಪನ ಕಾರ್ಯ ಆರಂಭವಾಗಲಿದೆ. ವಿಧಿವಿಧಾನಗಳು ಮುಗಿದ ಬಳಿಕ ಭಕ್ತರಿಗೆ ದರ್ಶನದ ಭಾಗ್ಯ ಕಲ್ಪಿಸಲಾಗುತ್ತದೆ.