Tirumala Laddu : ತಿರುಪತಿ ಲಡ್ಡುವಿನಲ್ಲಿ ಪ್ರಾಣಿಗಳ ಕೊಬ್ಬು : ಬಿಡುಗಡೆಯಾದ ಲ್ಯಾಬ್ ವರದಿಯಲ್ಲೇನಿದೆ ?

ಸುದ್ದಿಒನ್, ತಿರುಮಲ, ಸೆಪ್ಟೆಂಬರ್. 19 : ಆಂಧ್ರಪ್ರದೇಶದಲ್ಲಿ ತಿರುಮಲ ತಿರುಪತಿ ಲಡ್ಡು ವಿಚಾರ ಬಾರೀ ಸದ್ದು ಮಾಡುತ್ತಿದೆ. ವೈಸಿಪಿ ಆಡಳಿತದಲ್ಲಿ ಲಡ್ಡೂಗಳಿಗೆ ಪ್ರಾಣಿಗಳ ಕೊಬ್ಬನ್ನು ಬಳಸಲಾಗುತ್ತಿತ್ತು ಎಂಬ ಸಿಎಂ ಚಂದ್ರಬಾಬು ಹೇಳಿಕೆ ಸಂಚಲನ ಮೂಡಿಸಿತ್ತು. ವೈಸಿಪಿ ಆಡಳಿತಾವಧಿಯಲ್ಲಿ ತಿರುಪತಿ ಲಡ್ಡುಗೆ ಬಳಸುತ್ತಿದ್ದ ತುಪ್ಪದಲ್ಲಿ ಪ್ರಾಣಿಗಳ ಕೊಬ್ಬು ಇರುವುದನ್ನು NDDB CALF ಲ್ಯಾಬ್ ಖಚಿತಪಡಿಸಿದೆ.

ಜುಲೈ 8, 2024 ರಂದು ಲಡ್ಡುವನ್ನು ಪ್ರಯೋಗಾಲಯಕ್ಕೆ ಪರೀಕ್ಷೆಗೆ ಕಳುಹಿಸಲಾಗಿತ್ತು. NDDB CALF ಲ್ಯಾಬ್ ಜುಲೈ 17 ರಂದು ವರದಿಯನ್ನು ನೀಡಿತು. ಅದರಲ್ಲಿ ಬಳಸಲಾದ ವಸ್ತುಗಳನ್ನು ವರದಿಯಲ್ಲಿ ಬಹಿರಂಗಪಡಿಸಲಾಯಿತು. ಪ್ರಯೋಗಾಲಯದ ವರದಿಯ ಪ್ರಕಾರ, ಸೋಯಾಬೀನ್, ಸೂರ್ಯಕಾಂತಿ, ಆಲಿವ್, ಗೋಧಿ, ಜೋಳ, ಹತ್ತಿ ಬೀಜಗಳು, ಮೀನಿನ ಎಣ್ಣೆ, ಪ್ರಾಣಿಗಳ ಕೊಬ್ಬು, ತಾಳೆ ಎಣ್ಣೆ ಮತ್ತು ಹಂದಿಯ ಕೊಬ್ಬನ್ನು ಸಹ ಲಡ್ಡುಗಳಲ್ಲಿ ಬಳಸಲಾಗುತ್ತದೆ. ಆದರೆ NDDB CALF ಲ್ಯಾಬ್ ಕೇಂದ್ರ ಸರ್ಕಾರದಿಂದ ಮಾನ್ಯತೆ ಪಡೆದಿದೆ.

ಈ ಕುರಿತು ಟಿಡಿಪಿ ಹಿರಿಯ ನಾಯಕ ಆನಂ ವೆಂಕಟರಮಣ ರೆಡ್ಡಿ ಅವರು ಲ್ಯಾಬ್ ವರದಿಯನ್ನು ಮಾಧ್ಯಮಗಳಿಗೆ ಹಸ್ತಾಂತರಿಸಿದ್ದಾರೆ. ತಿರುಮಲ ತಿರುಪತಿ ಲಡ್ಡು ಪ್ರಸಾದದಲ್ಲಿ ಕಲಬೆರಕೆ ತುಪ್ಪದ ಬಗ್ಗೆ ಗಂಭೀರ ತನಿಖೆ ನಡೆಸಲಾಗುವುದು ಎಂದರು. ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಹಾಕಿ ದಂಧೆಯಲ್ಲಿ ತೊಡಗಿದವರು ಹಾಳಾಗಿ ಹೋಗುತ್ತಾರೆ ಎಂದರು. ಒಂದು ಕೆಜಿ ಗುಣಮಟ್ಟದ ತುಪ್ಪ ಖರೀದಿಸಲು ರೂ. 1000ಕ್ಕೂ ಹೆಚ್ಚು ವೆಚ್ಚವಾಗಲಿದ್ದು, ವೈಎಸ್ ಆರ್ ಸಿಪಿ ಸರಕಾರ 320 ರೂ.ಗೆ ತುಪ್ಪಕ್ಕೆ ಟೆಂಡರ್ ಕರೆದಿದೆ ಎಂದರು. ನಾಲ್ಕು ಮಂದಿಗೆ ತುಪ್ಪದ ಟೆಂಡರ್ ಗುತ್ತಿಗೆ ನೀಡಿದ್ದು, 320 ರೂ.ಗೆ ಗುಣಮಟ್ಟದ ತುಪ್ಪ ನೀಡುವವರು ಯಾರಾದರೂ ಇದ್ದಾರೆಯೇ ಎಂದು ಆನಂ ವೆಂಕಟರಮಣ ರೆಡ್ಡಿ ಪ್ರಶ್ನಿಸಿದರು.

Share This Article
Leave a Comment

Leave a Reply

Your email address will not be published. Required fields are marked *