ನವದೆಹಲಿ: ಅಹ್ಮದ್ ಪಟೇಲ್ ಹೆಸರು ಈಗಲೂ ಎಲ್ಲರಿಗೂ ನೆನಪಿದೆ. ಸೋನಿಯಾಗಾಂಧಿ ಅವರ ಆಪ್ತ ಸಹಾಯಕರಾಗಿದ್ದರು. ಆದರೆ 2020ರಲ್ಲಿ ನಿಧನ ಹೊಂದಿದರು. ಆದ್ರೆ ಇದೀಗ ಅವರ ಮಗ ಕಾದು ಕಾದು ಸುಸ್ತಾಗಿದ್ದೇನೆ ಎಂದು ಹೇಳಿದ್ದಾರೆ.
ಪೈಸಲ್ ಪಟೇಲ್ ಔಪಚಾರಿಕವಾಗಿ ಕಾಂಗ್ರೆಸ್ ಸೇರುವುದನ್ನು ಖಚಿತಪಡಿಸಿಲ್ಲ. ಆದರೆ ಅಸಮಾಧಾನವಿರುವ ಬಗ್ಗೆ ಇಂದು ಟ್ವೀಟ್ ಮಾಡಿದ್ದಾರೆ. ಹಿರಿಯ ಅಧಿಕಾರಿಗಳ್ಯಾರ ಪ್ರೋತ್ಸಾಹವೂ ನನಗಿಲ್ಲ. ಕಾದು ಕಾದು ಸುಸ್ತಾಗಿದ್ದೇನೆ. ನನ್ನ ಆಯ್ಕೆಗಳನ್ನು ಇನ್ನು ಮುಂದೆ ತೆರೆದುಡಿತ್ತೇನೆ ಎಂಬುದಾಗಿ ಟ್ವೀಟ್ ಮಾಡಿದ್ದಾರೆ. ಇದು ಹಲವು ಚರ್ಚೆಗಳನ್ನು ಹುಟ್ಟು ಹಾಕಿದೆ.
ಏಪ್ರಿಲ್ 1 ರಿಂದ ನಾನು ಭರೂಚ್ ಮತ್ತು ನರ್ಮದಾ ಜಿಲ್ಲೆಗಳ 7 ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರವಾಸ ಮಾಡಲಿದ್ದೇನೆ. ನನ್ನ ತಂಡವು ಪ್ರಸ್ತುತ ರಾಜಕೀಯ ಪರಿಸ್ಥಿತಿಯ ವಾಸ್ತವತೆಯನ್ನು ಮೌಲ್ಯಮಾಪನ ಮಾಡುತ್ತದೆ. ನಮ್ಮ ಪ್ರಮುಖ ಗುರಿಯನ್ನು ಸಾಧಿಸಲು ಅಗತ್ಯವಿದ್ದರೆ ಪ್ರಮುಖ ಬದಲಾವಣೆಗಳನ್ನು ಮಾಡುತ್ತದೆ. ದೇವರು ಒಪ್ಪಿದರೆ ಎಲ್ಲಾ 7 ಸ್ಥಾನಗಳನ್ನು ಗೆಲ್ಲುತ್ತೇವೆ ಎಂದು ಕೂಡ ಟ್ವೀಟ್ ಮಾಡಿದ್ದರು.
ಇದೀಗ ಅವರ ಇಂದಿನ ಟ್ವೀಟ್ ಹಲವು ಚರ್ಚೆಗೆ ಕಾರಣವಾಗಿದೆ. ಗುಜರಾತ್ ನಲ್ಲಿ ವರ್ಷಾಂತ್ಯದಲ್ಲಿ ಚುನಾವಣೆ ಕೂಡ ನಡೆಯಲಿದೆ. ಹೀಗಾಗಿ ಬೇರೆ ಪಕ್ಷಕ್ಕೆ ಸೇರುವ ಯೋಜನೆಯನ್ನೇನಾದರೂ ಹಾಕಿಕೊಂಡಿದ್ದಾರಾ ಎಂಬ ಪ್ರಶ್ನೆಗಳು ಹುಟ್ಟಿಕೊಂಡಿವೆ.