ಹುಬ್ಬಳ್ಳಿ: ಈದ್ಗಾ ಮೈದಾನ ಕೆಲವು ದಿನಗಳಿಂದ ವಿವಾದದಲ್ಲಿ ಸಿಲುಕಿದೆ. ಈ ವರ್ಷ ಗಣೇಶ ಚತುರ್ಥಿಯನ್ನು ಈದ್ಗಾ ಮೈದಾನದಲ್ಲಿ ಮಾಡಿಯೇ ತೀರುತ್ತೀವಿ ಎಂದು ಹಿಂದೂ ಪರ ಸಂಘಟನೆಗಳು ಹಠ ತೊಟ್ಟಂತೆ ಆಚರಣೆ ಮಾಡಿದ್ದವು. ಇದೀಗ ಹಲವು ವಿವಾದದ ನಡುವೆ ಟಿಪ್ಪು ಜಯಂತಿಯನ್ನು ಆಚರಣೆ ಮಾಡಿದ್ದಾರೆ.
AIMIM ಜಿಲ್ಲಾ ಕಾರ್ಯದರ್ಶಿ ವಿಜಯ್ ನೇತೃತ್ವದಲ್ಲಿ ಇಂದು ಟಿಪ್ಪು ಜಯಂತಿ ಆಚರಣೆ ಮಾಡಲಾಗಿದೆ. ಟಿಪ್ಪು ಭಾವಚಿತ್ರವನ್ನು ಇಟ್ಟು, ಅದಕ್ಕೆ ಮಾಲಾರ್ಪಣೆ ಮಾಡುವ ಮೂಲಕ ಟಿಪ್ಪು ಜಯಂತಿಯನ್ನು ಆಚರಣೆ ಮಾಡಿದ್ದಾರೆ. ಜೊತೆಗೆ ಟಿಪ್ಪು ಬಗ್ಗೆ ಘೋಷಣೆಯನ್ನು ಕೂಗಿದ್ದಾರೆ. ಸಮತಾ ಸೈನಿಕ ಸಂಘಟನೆಯಿಂದಲು ಟಿಪ್ಪು ಜಯಂತಿ ಆಚರಣೆಗೆ ಬೆಂಬಲ ವ್ಯಕ್ತವಾಗಿದೆ.
ಕಾರ್ಯಕ್ರಮದ ನಡುವಲ್ಲಿ ಮಾತನಾಡಿದ ವಿಜಯ್, ಈದ್ಗಾ ಮೈದಾನದಲ್ಲಿ ಗಣೇಶ ಚತುರ್ಥಿ ಮಾಡಲು ಅನುಮತಿ ಕೊಟ್ಟಾಗ ನಾವೂ ಸುಮ್ಮನಿದ್ದೆವು. ಆದ್ರೆ ಟಿಪ್ಪು ಜಯಂತಿಗೆ ಅನುಮತಿ ಕೊಟ್ಟಾಗ ಯಾಕೆ ವಿರೋಧ ಮಾಡುತ್ತಾರೆ. ಪ್ರಮೋದ್ ಮುತಾಲಿಕ್ ಓರ್ವ ಮತಾಂಧ. ಜಯಂತಿ ಆಚರಣೆ ಹಿಂದೆ ಯಾವುದೇ ರಾಜಕೀಯ ಉದ್ದೇಶವಿಲ್ಲ. ಟಿಪ್ಪು ಅಪ್ರತಿಮ ಸ್ವಾತಂತ್ರ್ಯ ಸೇನಾನಿ ಎಂದಿದ್ದಾರೆ.