ಚಿತ್ರದುರ್ಗ,(ಜೂನ್ 3) : ಜಿಲ್ಲೆಯಲ್ಲಿ ನೀರಾವರಿ ಮುಸುಕಿನ ಜೋಳ 25-45 ದಿನಗಳ ಬೆಳವಣಿಗೆ ಹಂತದಲ್ಲಿರುತ್ತದೆ.
ಜೂನ್ 1 ರಂದು ಸಂಚಾರಿ ಸಸ್ಯ ಆರೋಗ್ಯ ಚಿಕಿತ್ಸಾಲಯ ಕೃಷಿ ಸಂಜೀವಿನಿ ವಾಹನವು ಚಳ್ಳಕೆರೆ ತಾಲ್ಲೂಕಿನ ತಳಕು ಹೋಬಳಿಯ ಹೊಸಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ ನೀರಾವರಿ ಮುಸುಕಿನಜೋಳ ಬೆಳೆಯನ್ನು ಪರೀಕ್ಷಿಸಿದೆ.
ಈ ಸಂದರ್ಭದಲ್ಲಿ ಗುಲಾಬಿ ಕಾಂಡ ಕೊರೆಯುವ ಹುಳುವಿನ ಬಾದೆ ಕಂಡುಬಂದಿದೆ. ಇದೇ ರೀತಿ ಸುತ್ತಮುತ್ತ ಪ್ರದೇಶದಲ್ಲಿ ಹಾಗೂ ಮುಸುಕಿನಜೋಳ ಬೆಳೆದಂತಹ ಉಳಿದ ಎಲ್ಲಾ ತಾಲ್ಲೂಕುಗಳಲ್ಲಿಯೂ ಕಂಡುಬರುವ ಸಾಧ್ಯತೆ ಇರುತ್ತದೆ. ಹಾಗಾಗಿ ಹುಳುವಿನ ಹತೋಟಿಗಾಗಿ ಕ್ಲೋರಂಟ್ರಾನೀಲಿಪ್ರೋಲ್ 0.2 ಮಿ.ಲೀ ಪ್ರತಿ ಲೀಟರ್‍ಗೆ ಬೆರೆಸಿ ಸಿಂಪಡಿಸುವುದರಿಂದ ಈ ಹುಳುವಿನ ಬಾದೆಯನ್ನು ಹತೋಟಿಗೆ ತರಬಹುದು ಎಂದು ರೈತರಿಗೆ ಜಂಟಿ ಕೃಷಿ ನಿರ್ದೇಶಕರ ಕಚೇರಿಯ ಸಹಾಯಕ ಕೃಷಿ ನಿರ್ದೇಶಕರು, ವಿಷಯ ತಜ್ಞರಾದ ಶ್ರೀ ಎನ್.ಎ.ಪ್ರವೀಣ್ ಚೌಧರಿ ತಿಳಿಸಿದ್ದಾರೆ.