ಟೈಮ್ಸ್ ನೌ ಸಮೀಕ್ಷೆ : ಕೇಂದ್ರದಲ್ಲಿ ಮತ್ತೆ ಬಿಜೆಪಿಗೆ ಅಧಿಕಾರ

 

ಮುಂದಿನ ವರ್ಷ ಲೋಕಸಭೆ ಚುನಾವಣೆ ನಡೆಯುವುದು ಗೊತ್ತೇ ಇದೆ. ಕೇಂದ್ರದಲ್ಲಿ ಸತತ ಎರಡು ಬಾರಿ ಗೆದ್ದಿರುವ ಬಿಜೆಪಿ ಮೂರನೇ ಬಾರಿಯೂ ಕೇಂದ್ರದಲ್ಲಿ ಮತ್ತೆ ಅಧಿಕಾರಕ್ಕೆ ಬರಲಿದೆ. ಈಗ ಲೋಕಸಭೆ ಚುನಾವಣೆ ನಡೆದರೆ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಟೈಮ್ಸ್ ನೌ ನವಭಾರತ್ ಸಮೀಕ್ಷೆ ಭವಿಷ್ಯ ನುಡಿದಿದೆ. ಬಿಜೆಪಿ ಸ್ವಂತ ಬಲದಿಂದ 285 ರಿಂದ 325 ಸ್ಥಾನಗಳನ್ನು ಗೆಲ್ಲುವ ಅವಕಾಶವಿದೆ ಎಂದು ಸಮೀಕ್ಷೆ ಬಹಿರಂಗಪಡಿಸಿದೆ.

ಟೈಮ್ಸ್ ನೌ ಸಮೀಕ್ಷೆಯ ಪ್ರಕಾರ

►ಬಿಜಿಪಿ  285-325
►ಕಾಂಗ್ರಸ್ 111-149
►ತೃಣಮೂಲ ಕಾಂಗ್ರೆಸ್ 20-22
►ವೃಎಸ್ ಆರ್ ಸಿ ಪಿ 24-25
►ಬಿಜೆಡಿ 12-14
►ಬಿಆರ್ ಎಸ್  9-11
►ಅಮ್ ಆದ್ಮಿ ಪಕ್ಷ  4-7
►ಸಮಾಜವಾದಿ ಪಕ್ಷ.. 4-8
► ಇತರೆ.. 18-38 ಸ್ಥಾನಗಳು ಬರುವ ಸಾಧ್ಯತೆ ಇದೆ.

ಒಟ್ಟು 543 ಲೋಕಸಭಾ ಸ್ಥಾನಗಳಲ್ಲಿ ಅಧಿಕಾರಕ್ಕೆ ಬರಬೇಕಾದರೆ ಕನಿಷ್ಠ 272 ಸ್ಥಾನಗಳನ್ನು ಗೆಲ್ಲಬೇಕು. ಕಳೆದ ಎರಡು ಅವಧಿಗಳಲ್ಲಿ ಅಂದರೆ 2014 ಮತ್ತು 2019ರಲ್ಲಿ ಬಿಜೆಪಿ ಸ್ವಂತ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿತ್ತು. ಎನ್‌ಡಿಎ ಮಿತ್ರಪಕ್ಷಗಳಾಗಿ ಹೆಚ್ಚಿನ ಪಕ್ಷಗಳನ್ನು ಮುನ್ನಡೆಸಿತು. ಚುನಾವಣೆಗೆ ಇನ್ನೂ 10 ತಿಂಗಳು ಬಾಕಿ ಇದೆ. 9 ವರ್ಷಕ್ಕೂ ಹೆಚ್ಚು ಕಾಲ ಅಧಿಕಾರದಲ್ಲಿದ್ದರೂ.. ಮೋದಿ ಸರಕಾರ ಇನ್ನೂ ಬಲಿಷ್ಠವಾಗಿದೆ. ಟೈಮ್ಸ್ ನೌ ನವಭಾರತ್ ಸಮೀಕ್ಷೆಯ ಸಾರಾಂಶವೆಂದರೆ ಸರ್ಕಾರದ ವಿರೋಧಿ ಅಲೆಯ ಹೊರತಾಗಿಯೂ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ತಿಳಿಸಿದೆ.

ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಪಾದಯಾತ್ರೆ ಮಾಡಿದ ರಾಹುಲ್ ಗಾಂಧಿಗೆ ಕಾಂಗ್ರೆಸ್‌ಗೆ ಬೇಕಾದಷ್ಟು ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಗುವುದಿಲ್ಲ ಎಂದು ಸಮೀಕ್ಷೆ ಹೇಳಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಗೆದ್ದರೂ ರಾಹುಲ್ ಪ್ರಭಾವ ಇನ್ನೂ ದೇಶದ ರಾಜಕೀಯದಲ್ಲಿ ಬಂದಿಲ್ಲ ಎಂದಿದೆ. ಈಗಿಂದೀಗಲೇ ಚುನಾವಣೆ ನಡೆದರೆ ಕಾಂಗ್ರೆಸ್ 111 ರಿಂದ 149 ಸ್ಥಾನಗಳನ್ನು ಪಡೆಯಲಿದೆ ಎಂದು ಸಮೀಕ್ಷೆ ಭವಿಷ್ಯ ನುಡಿದಿದೆ.

Share This Article
Leave a Comment

Leave a Reply

Your email address will not be published. Required fields are marked *