Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಯಶಸ್ವಿನಿ ಕಾರ್ಡ್ ಯೋಜನೆಗೆ ಸಮಯ ವಿಸ್ತರಣೆ : ಅಪ್ಲೈ ಮಾಡಲು ಕಡೆ ದಿನಾಂಕ ಯಾವ್ದು..?

Facebook
Twitter
Telegram
WhatsApp

 

ಬೆಂಗಳೂರು: ರಾಜ್ಯ ಸರ್ಕಾರದ ಯೋಜನೆಯಾಗಿರುವ ಯಶಸ್ವಿನಿ ಯೋಜನೆಗೆ ಯಾರಾದರೂ ಇನ್ನು ಅರ್ಜಿ ಹಾಕಿಲ್ಲ ಎಂದರೆ ಅರ್ಜಿ ಹಾಕಲು ಸಮಯಾವಕಾಶವನ್ನು ನೀಡಲಾಗಿದೆ. ಹೊಸದಾಗಿ ಅರ್ಜಿ ಸಲ್ಲಿಸುವವರಿಗೆ ಮಾರ್ಚ್ ತಿಂಗಳ ಕೊನೆಯವರೆಗೂ ಅವಕಾಶ ನೀಡಲಾಗಿದೆ. ಹೀಗಾಗಿ ಇದರ ಲಾಭ ಪಡೆಯಲು ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಯಶಸ್ವಿನಿ ಕಾರ್ಡ್ ಮಾಡಿಸದೆ ಇರುವವರು ಮಾರ್ಚ್ 31ರ ತನಕ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬಹುದು. ರಾಜ್ಯ ಸರ್ಕಾರದ ಈ ಹಿಂದೆ ಇದ್ದ ಯಶಸ್ವಿನಿ ಆರೋಗ್ಯ ಯೋಜನೆಯನ್ನು ಸಹಕಾರ ಸಂಘದ ಅಡಿಯಲ್ಲಿ, ಮರುಜಾರಿಗೊಳಿಸಿದೆ. 2023-24ನೇ ಸಾಲಿಗೆ ಈಗಾಗಲೇ ಸದಸ್ಯರ ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ. ಸದಸ್ಯರ ನೋಂದಣಿಗೆ ಫೆಬ್ರವರಿ ತಿಂಗಳು ಕೊನೆಯಾಗಿತ್ತು. ಆದರೆ ಇನ್ನಷ್ಟು ಜನರಿಗೆ ಅನುಕೂಲವಾಗಲೆಂದೇ ಈ ಯೋಜನೆಯನ್ನು ವಿಸ್ತರಣೆ ಮಾಡಲಾಗಿದೆ.

ಈ ಯೋಜನೆಯ ಫಲಾನುಭವಿಯಾಗಲು ಕನಿಷ್ಟ 3 ತಿಂಗಳು ಮುಂಚಿತ ಅರ್ಹ ಗ್ರಾಮೀಣ ಸಹಕಾರ ಸಂಘವೊಂದರ ಸದಸ್ಯರಾಗಿರಬೇಕು. ಅಲ್ಲದೇ ಗ್ರಾಮೀಣ ಸಹಕಾರ ಸಂಘ/ಬ್ಯಾಂಕುಗಳೊಡನೆ ವ್ಯವಹರಿಸುತ್ತಿರುವ ಗ್ರಾಮೀಣ ಸ್ತ್ರೀಶಕ್ತಿ ಗುಂಪು, ಸ್ವ-ಸಹಾಯ ಗುಂಪಿನ ಸದಸ್ಯರು ಮತ್ತು ಅವರ ಕುಟುಂಬದ ಎಲ್ಲಾ ಸದಸ್ಯರು ಯೋಜನೆಯ ಫಲಾನುಭವಿ ಆಗಬಹುದಾಗಿದೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಮೃತ ನೇಹಾ ಮನೆಗೆ ಮುಸ್ಲಿಂ ಮುಖಂಡರ ಭೇಟಿ : ನಿರಂಜನ ದೇಶಪಾಂಡೆಗೆ ಸಾಂತ್ವನ

ಹುಬ್ಬಳ್ಳಿ: ನೇಹಾ ಎಂಬ ಎಂಸಿಎ ವಿದ್ಯಾರ್ಥಿನಿಯನ್ನು ಫಯಾಜ್ ನಿನ್ನೆ ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿದ್ದಾನೆ. ಈಗಾಗಲೇ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ತನಿಖೆಯನ್ನು ನಡೆಸುತ್ತಿದ್ದಾರೆ. ಜಿಲ್ಲೆಯಲ್ಲಿ ಹೋರಾಟಗಳು ಕೂಡ ನಡೆದಿವೆ. ಇದೀಗ ಮುಸ್ಲಿಂ ಮುಖಂಡರು

ಚಿತ್ರದುರ್ಗ-ಹೊಳಲ್ಕೆರೆ ಹೆದ್ದಾರಿಯಲ್ಲಿ ಅಪಘಾತ | ಓರ್ವ ಮೃತ

ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್. 20 : ಕಾರು ಪಲ್ಟಿಯಾಗಿ ಕಾರಿನಲ್ಲಿದ್ದ ಮಂಜುನಾಥ (36) ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಚಿತ್ರದುರ್ಗ ಹೊಳಲ್ಕೆರೆ ಹೆದ್ದಾರಿಯ ಕಣಿವೆ ಬಳಿ ಶನಿವಾರ ಸಂಜೆ ನಡೆದಿದೆ. ಬೆಂಗಳೂರಿನಿಂದ ಉಡುಪಿ ಕಡೆಗೆ ಹೋಗುತ್ತಿದ್ದ

ಈ ವರ್ಷ ಒಳ್ಳೆಯದ್ದಕ್ಕಿಂತ ಕೆಟ್ಟದೇ ಹೆಚ್ಚು : ಭವಿಷ್ಯ ನುಡಿದ ವಿಜಯಪುರ ಬಸವೇಶ್ವರ ಕಾರ್ಣಿಕಾ

ವಿಜಯಪುರ: ಕಾರ್ಣಿಕಾ ನುಡಿಯನ್ನು ರಾಜ್ಯದ ಜನತೆ ಹೆಚ್ಚಾಗಿ ನಂಬುತ್ತಾರೆ. ಇದೀಗ ವಿಜಯಪುರದ ಕೊಡೆಕಲ್ ಬಸವೇಶ್ವರ ದೇವಸ್ಥಾನದ ಶೂನ್ಯ ಶಂಕರಲಿಂಗ ದಿಂಡವಾರ ಶರಣರು ಮಳೆ ಬೆಳೆ ಬಗ್ಗೆ ಕಾರ್ಣಿಕಾ ನುಡಿದಿದ್ದಾರೆ‌. ಜಾತ್ರೆಯಿದ್ದ ಹಿನ್ನೆಲೆ ಪುರಾಣ ಮುಕ್ತಾಯ,

error: Content is protected !!