ಟಿಕ್ ಟಾಕ್ ಬ್ಯಾನ್ ಆದರೂ, ಅದಕ್ಕೆ ಪರ್ಯಾಯವಾಗಿ ಸಾಕಷ್ಟು ಆ್ಯಪ್ ಗಳು ಮೊಬೈಲ್ ನಲ್ಲಿ ಲಗ್ಗೆ ಇಟ್ಟಿವೆ. ಜೊತೆಗೆ ರೀಲ್ಸ್ ಬಳಕೆ ಜಾಸ್ತಿಯಾಗಿದೆ. ವಿಡಿಯೋಗಳಿಗಾಗಿ ಸಾಕಷ್ಟು ಜನ ರಿಸ್ಕ್ ಕೂಡ ತೆಗೆದುಕೊಳ್ಳುತ್ತಾರೆ. ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ವಿಡಿಯೋಗೆ ನೆಟ್ಟಿಗರು ಗರಂ ಆಗಿದ್ದಾರೆ.
ಪಾಕಿಸ್ತಾನದ ಟಿಕ್ ಟಾಕ್ ಸ್ಟಾರ್ ಹುಮೈರಿ ಅಸ್ಗರ್ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆ್ಯಕ್ಟೀವ್ ಆಗಿದ್ದಾಳೆ. ಅಷ್ಟೆ ಅಲ್ಲ ಅವ್ಳಿಗೆ 11 ಮಿಲಿಯನ್ ಗಿಂತಲೂ ಹೆಚ್ಚು ಫಾಲೋವರ್ಸ್ ಇದ್ದಾರೆ. ಹೀಗಾಗಿ ವೆರೈಟಿ ವೆರೈಟಿ ವಿಡಿಯೋ ಗಳನ್ನು ಹಾಕುತ್ತಿರುತ್ತಾಳೆ. ಆದ್ರೆ ಇತ್ತೀಚೆಗೆ ಶೇರ್ ಮಾಡಿರುವ ಆ ಒಂದು ವಿಡಿಯೋಗೆ ಸಿಕ್ಕಾಪಟ್ಟೆ ವಿರೋಧ ವ್ಯಕ್ತವಾಗಿದೆ.
ಅದು 15 ಸೆಕೆಂಡಿನ ವಿಡಿಯೋ. ಬೆಟ್ಟದ ಮೇಲೆ, ಬಿಳಿಬಣ್ಣದ ಡ್ರೆಸ್ ನಲ್ಲಿ ಮಾಡಿರುವ ವಿಡಿಯೋ. ಅದರ ಹಿಂದೆ ಬೆಂಕಿ ಕಾಣಿಸಿಕೊಂಡಿದೆ. ನಾನು ಎಲ್ಲಿಯೇ ಹೋದರು ಅಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತದೆ ಎಂದು ಹುಮೈರಾ ಕ್ಯಾಪ್ಶನ್ ಹಾಕಿದ್ದಾಳೆ. ವಿಡಿಯೋಗಾಗಿ ಈಕೆಯೇ ಗುಡ್ಡಕ್ಕೆ ಬೆಂಕಿ ಹಚ್ಚಿದ್ದಾಳೆಂದು ಹಲವರು ಆರೋಪಿಸಿದ್ದು, ಆಕೆಯ ಮೇಲೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.