ನವದೆಹಲಿ : ರಾಜ್ಯ ರಾಜಕೀಯದಲ್ಲಿ ಬಾರೀ ಕುತೂಹಲ ಮೂಡಿಸಿದ್ದ ಕರ್ನಾಟಕ ವಿಧಾನಸಭಾ ಚುನಾವಣೆಗೆ ಬಿಜೆಪಿ ಮೊದಲ ಪಟ್ಟಿಯಲ್ಲಿ 189 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದೆ.
ಚಿತ್ರದುರ್ಗದಿಂದ ಜಿ.ಹೆಚ್. ತಿಪ್ಪಾರೆಡ್ಡಿ, ಹಿರಿಯೂರಿನಿಂದ ಪೂರ್ಣಿಮಾ ಶ್ರೀನಿವಾಸ, ಹೊಸದುರ್ಗದಿಂದ ಎಸ್. ಲಿಂಗಮೂರ್ತಿ, ಹೊಳಲ್ಕೆರೆಯಿಂದ ಚಂದ್ರಪ್ಪ, ಚಳ್ಳಕೆರೆಯಿಂದ ಅನಿಲ್ ಕುಮಾರ್, ಮೊಳಕಾಲ್ಮೂರಿನಿಂದ ತಿಪ್ಪೇಸ್ವಾಮಿ ಯವರಿಗೆ ಟಿಕೆಟ್ ಘೋಷಣೆಯಾಗಿದ್ದು, ಕಾರ್ಯಕರ್ತರ ಆತಂಕಕ್ಕೆ ತೆರೆ ಬಿದ್ದಿದೆ.
ಬಿಜೆಪಿಯಲ್ಲಿ ಮೊದಲ ಪಟ್ಟಿ ಬಿಡುಗಡೆಗೆ ಸಾಕಷ್ಟು ಯೋಚನೆ ಮಾಡಲಾಗಿತ್ತು. ಈ ಬಾರಿ ಗೆಲ್ಲುವವರು ಯಾರು ಎಂಬುದನ್ನು ಸಾಕಷ್ಟು ಸರ್ವೇ ಮಾಡಿ ವರದಿ ಬಿಡಲಾಗಿದೆ.