ನಳೀನ್ ಕುಮಾರ್ ಕಟೀಲ್ ಗೆ ಟಿಕೆಟ್ ಮಿಸ್ : ಮೊದಲೇ ಎಚ್ಚರಿಕೆ ನೀಡಿತ್ತಾ ದೈವ..?

suddionenews
1 Min Read

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಹಲವರಿಗೆ ಟಿಕೆಟ್ ಕೈತಪ್ಪಿದೆ. ಎರಡನೇ ಪಟ್ಟಿಯಲ್ಲೂ ಹಾಲಿ ಸಂಸದರಿಗೆ ಟಿಕೆಟ್ ಸಿಕ್ಕಿಲ್ಲ. ಇದು ಹಿರಿಯರ ಬೇಸರಕ್ಕೆ ಕಾರಣವಾಗಿದೆ. ಅದರಲ್ಲೂ ಟಿಕೆಟ್ ಸಿಗುವ ನಿರೀಕ್ಷೆಯಲ್ಲಿದ್ದ ನಳೀನ್ ಕುಮಾರ್ ಕಟೀಲ್ ಅವರಿಗೂ ಈ ಅಬರಿ ಟಿಕೆಟ್ ಮಿಅ್ ಆಗಿದೆ. ನಳೀನ್ ಕುಮಾರ್ ಕಟೀಲು ಅವರ ರಾಜಕೀಯ ಜೀವನದಲ್ಲಿ ಹಿಂಗೆ ಆಗುತ್ತೆ ಎಂಬುದಾಗಿ ದೈವ ಈ ಮೊದಲೇ ಭವಿಷ್ಯ ನುಡಿದಿತ್ತು. ಇದೀಗ ಆ ವಿಡಿಯೋ ವೈರಲ್ ಆಗಿದೆ.

 

ನಳೀನ್ ಕುಮಾರ್ ಕಟೀಲು ಸುಮಾರು ಹದಿನೈದು ವರ್ಷಗಳಿಂದ ರಾಜಕೀಯ ಜೀವನವನ್ನು ಸಾಗಿಸುತ್ತಾ ಬರುತ್ತಿದ್ದಾರೆ. ಅವರ ರಾಜಕೀಯ ಜೀವನದಲ್ಲಿ ಬದಲಾವಣೆಗಳಾಗಲಿವೆ ಎಂದು ಅಂದು ದೈವ ನುಡಿದಿತ್ತು. ಒಂದು ವಾರಗಳ ಹಿಂದಷ್ಟೇ ರಾಜಕೀಯ ಜೀವನ ಏನಾಗಲಿದೆ ಎಂಬುದರ ಕುರಿತು ಎಚ್ಚರಿಕೆ ನೀಡಿತ್ತು. ಅಷ್ಟಕ್ಕೂ ದೈವ ನುಡಿದ ಭವಿಷ್ಯವೇನಾಗಿತ್ತು..? ನಳೀನ್ ಕುಮಾರ್ ಅವರು ಯಾವ ಎಚ್ಚರಿಕೆಯನ್ನು ಪಾಲನೆ ಮಾಡಬೇಕಿತ್ತು..? ಎಂಬ ವರದಿ ಇಲ್ಲಿದೆ‌

ನಳೀನ್ ಕುಮಾರ್ ಕಟೀಲ್ ಅವರು ನೇಮೋತ್ಸವದಲ್ಲಿ ಭಾಗಿಯಾಗಿದ್ದರು. ವಯನಾಟ್ ಕುಲವನ್ ದೈವದ ನೇಮೋತ್ಸವದ ವಿಷ್ಣುಮೂರ್ತಿ ದೈ ವ ಸೂಚನೆ ನೀಡಿತ್ತು. ‘ನಿನಗೆ ವೈರಿಗಳು ಇದ್ದಾರೆ. ವೈರಿಗಳು ಎಷ್ಟಿದ್ದರೇನು..? ಕಿನೆಗೆ ಸತ್ಯ, ಧರ್ಮ ಮಾತ್ರ ಗೆಲ್ಲುವುದು. ನೀನು ಹಿಂತಿರುಗಿ ನೋಡಬೇಡ. ನಿನಗೆ ಮುಂದೊಂದು ದಿನ ಜಯವಿದೆ’ ಎಂದು ದೈವ ನುಡಿದಿತ್ತು.

ಆದರೆ ನಳೀನ್ ಕುಮಾರ್ ಕಟೀಲು ಬಗ್ಗೆ ಬಿಜೆಪಿ ಕಾರ್ಯಕರ್ತರಲ್ಲಿಯೇ ಅಸಮಾಧಾನದ ಹೊಗೆಯಾಡುತ್ತಿತ್ತು. ನಳೀನ್ ಕುಮಾರ್ ಗೆ ಟಿಕೆಟ್ ನೀಡಬಾರದು ಎಂದೇ ಮನವಿ ಮಾಡಿದ್ದರು. ಜೊತೆಗೆ ಪ್ರವೀಣ್ ನೆಟ್ಟಾರು ಹತ್ಯೆಯ ಬಳಿಕ ನಳೀನ್ ಕುನಾರ್ ಕಟೀಲು ವಿರೋಧ ಅಲೆ ಜೋರಾಗಿತ್ತು. ಇದೆಲ್ಲವನ್ನು ಗಮನದಲ್ಲಿಟ್ಟುಕೊಂಡು ಟಿಕೆಟ್ ನಿರಾಕರಣೆ ಮಾಡಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *