
ಬೆಂಗಳೂರು: ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದೆ. ಪಕ್ಷಗಳು ಯಾವ್ಯಾವ ಕ್ಷೇತ್ರದಲ್ಲಿ ಯಾವ್ಯಾವ ಅಭ್ಯರ್ಥಿಗಳಿಗೆ ಟಿಕೆಟ್ ನೀಡುವುದು ಎಂಬುದೇ ನಾಯಕರಿಗೆ ದೊಡ್ಡ ತಲೆ ನೋವಾಗಿದೆ. ಯಾಕಂದ್ರೆ ಟಿಕೆಟ್ ಆಕಾಂಕ್ಷಿಗಳ ಪಟ್ಟಿ ಹನುಮಂತನ ಬಾಲದಂತೆ ಬೆಳೆದು ಹೋಗ್ತಾ ಇದೆ. ಅದರಲ್ಲಿ ಅಳೆದು ತೂಗಿ, ಸಮಾಧಾನ ಮಾಡುವವರಿಗೆ ಸಮಾಧಾನ ಮಾಡಿ ಟಿಕೆಟ್ ಹಂಚಿಕೆ ಮಾಡಬೇಕಾಗುತ್ತದೆ.

ಇದೀಗ ಬಿಜೆಪಿಯಿಂದ ಒಂದಷ್ಟು ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಫೈನಲ್ ಮಾಡಿದ್ದಾರೆ ಎನ್ನಲಾಗಿದೆ. ಆ ಪಟ್ಟಿ ಇಂತಿದೆ. ಮೂರು ಹಂತಗಳಲ್ಲಿ ಅಭ್ಯರ್ಥಿಗಳ ಪಟ್ಟಿಯನ್ನು ರಿಲೀಸ್ ಮಾಡಲಿದ್ದಾರೆ. ಸದ್ಯ ಘಟಾನುಘಟಿ ನಾಯಕರ ಹೆಸರುಗಳನ್ನು ಈಗ ಬಿಡುಗಡೆ ಮಾಡಲಿದ್ದಾರೆ. ಸಿಎಂ ಬಸವರಾಜ್ ಬೊಮ್ಮಾಯಿ ಅವರು ಶಿಗ್ಗಾಂವಿಯಿಂದಾನೇ ಸ್ಪರ್ಧೆ ಮಾಡಲಿದ್ದಾರೆ.
* ಚಿಕ್ಕಮಗಳೂರು – ಸಿಟಿ ರವಿ
* ಗೋಕಾಕ್ – ರಮೇಶ್ ಜಾರಕಿಹೊಳಿ
* ಬೀಳಗಿಯಿಂದ – ಮುರುಗೇಶ್ ನಿರಾಣಿ
* ವಿಜಯನಗರ / ಹೊಸಪೇಟೆಯಿಂದ – ಆನಂದ್ ಸಿಂಗ್
* ಬಳ್ಳಾರಿ ಗ್ರಾಮೀಣ – ಶ್ರೀರಾಮುಲು
* ಚಿಕ್ಕಬಳ್ಳಾಪುರ – ಸುಧಾಕರ್
* ಹಾಸನ – ಪ್ರೀತಂ ಗೌಡ
* ಗೋವಿಂದರಾಜನಗರ – ವಿ ಸೋಮಣ್ಣ
* ಯಲಹಂಕ – ಎಸ್ ಆರ್ ವಿಶ್ವನಾಥ್
* ಕೆ ಆರ್ ಪೇಟೆ – ಕೆಸಿ ನಾರಾಯಣಗೌಡ
* ಯಶವಂತಪುರ – ಎಸ್ ಟಿ ಸೋಮಶೇಖರ್
* ಆರ್ ಆರ್ ನಗರ- ಮುನಿರತ್ನ
* ಪದ್ಮನಾಭನಗರ – ಆರ್ ಅಶೋಕ್ ಸೇರಿದಂತೆ ಹಲವರ ಪಟ್ಟಿ ರಿಲೀಸ್ ಮಾಡಿದೆ.
GIPHY App Key not set. Please check settings