ಪ್ರತಿದಿನ ಬೆಳಗ್ಗೆ ಎದ್ದ ತಕ್ಷಣ ಇಂದು ಏನೇನು ಕೆಲಸ ಮಾಡಬೇಕು ಎಂದು ಮನನ ಮಾಡಿಕೊಳ್ಳಿ. ಪ್ರತಿಯೊಂದನ್ನೂ ಪಟ್ಟಿ ಮಾಡಿಕೊಳ್ಳದೆ ಇದ್ದರೂ ಸರಿ, ಮನಸಿನಲ್ಲಿ ಅಂದುಕೊಂಡು ನಿರ್ಧರಿಸಿಕೊಂಡರೆ ಸಾಕು ನಿಮಗೇ ತಿಳಿಯದಂತೆ ಅಂದೊಕೊಂಡಂತೆ ಒಂದರ ನಂತರ ಒಂದು ಕೆಲಸ ಆಗುತ್ತಾ ಹೋಗುತ್ತದೆ.
ನಮಗೆ ನಾವು ಮಾಡುವ ಕೆಲಸದ ಬಗ್ಗೆ ಸ್ಪಷ್ಟತೆ ಇಲ್ಲದಿದ್ದಾಗ ಕೆಲಸದಲ್ಲಿ ವಿಳಂಬವಾಗುತ್ತದೆ. ವಿಳಂಬ ಹೆಚ್ಚಾದಂತೆ ಸ್ವಲ್ಪ ಸೋಮಾರಿತನ ಹೆಚ್ಚುತ್ತದೆ. ಆಗ ನಾವು ಏನು ಮಾಡಿದರೂ ಆ ಕೆಲಸ ನಮಗೆ ತೃಪ್ತಿ ತರುವುದಿಲ್ಲ.
ನಾವು ಏನು ಮಾಡಲಿ, ಮಾಡದಿರಲಿ, ನಮ್ಮ ಮೇಲೆ ನಮಗೆ ನಂಬಿಕೆ ಇರಬೇಕು. ನಾವು ಏನು ಬೇಕಾದರೂ ಮಾಡಬಹುದು ಎಂದು ನಮಗೆ ವಿಶ್ವಾಸವಿರಬೇಕು. ಭಯಪಡಬೇಡಬಾರದು, ಅನೇಕ ಜನರು ಹೊಸದನ್ನು ಪ್ರಯತ್ನಿಸಲು ಹೆದರುತ್ತಾರೆ. ಈ ಕೆಲಸ ಆಗುತ್ತದೋ ಇಲ್ಲವೋ ಎಂದು ಹೆದರಿದರೆ ಸರಳವಾದ ಕಾರ್ಯಗಳನ್ನು ಸಹ ಮಾಡಲು ಕಷ್ಟವಾಗುತ್ತದೆ. ಆದ್ದರಿಂದ ಅಂದುಕೊಂಡ ಕೆಲಸವನ್ನು ಮಾಡುತ್ತೇವೆ ಎಂಬ ದೃಢಸಂಕಲ್ಪವಿರಬೇಕು. ಆ ಕೆಲಸ ಮಾಡಬಹುದು ಎಂದು ನಿಮ್ಮನ್ನು ನಂಬಿರಿ. ಕನಿಷ್ಠ ನಿಮ್ಮ ಪ್ರಯತ್ನವು ನಿಮಗೆ ಉತ್ತಮ ಅನುಭವವನ್ನು ನೀಡುತ್ತದೆ. ನೀವು ಮೊದಲೇ ಭಯಪಟ್ಟರೆ ಪ್ರಯತ್ನಿಸಲು ಸಹ ನೀವು ಹಿಂದೆ ಮುಂದೆ ನೋಡಬೇಕಾಗುತ್ತದೆ. ಆಗ ನಾವು ಕನಿಷ್ಠ ಪ್ರಯತ್ನವಾದರೂ ಮಾಡಬೇಕಿತ್ತು ಎಂದು ದುಃಖಿಸುತ್ತೇವೆ. ಎಂದಿಗೂ ಪ್ರಯತ್ನಿಸುವ ಮೊದಲು ಸೋಲನ್ನು ಒಪ್ಪಿಕೊಳ್ಳಬಾರದು.
ಜೀವನದಲ್ಲಿ ನಾವು ವಾಸ್ತವಕ್ಕೆ ಎಷ್ಟು ಹತ್ತಿರವಾಗಿರುತ್ತೀರೋ ಅಷ್ಟು ಉತ್ತಮ ಫಲಿತಾಂಶಗಳು ಲಭಿಸುತ್ತವೆ. ಆಸೆಗಳು ಹೆಚ್ಚಾದಂತೆ ಒತ್ತಡವೂ ಹೆಚ್ಚುತ್ತದೆ. ಆಲೋಚನೆಗಳು ಹೆಚ್ಚು ಆಗುತ್ತವೆ. ಆಗ ಕೆಲಸದ ಬಗ್ಗೆ ಆಸಕ್ತಿ ಕಡಿಮೆಯಾಗುತ್ತದೆ. ಕೆಲಸವು ನಿಮಗೆ ಹೊರೆಯಾಗುತ್ತದೆ. ನಾವೇನು ಮಾಡುತ್ತಿದ್ದೇವೆ, ಏನು ಬೇಕು, ಅದಕ್ಕೆ ಏನು ಮಾಡಬೇಕು ಎಂದು ಅರ್ಥ ಮಾಡಿಕೊಳ್ಳಬೇಕು. ಬೆಳಗ್ಗೆ ಈ ಬಗ್ಗೆ ಸ್ಪಷ್ಟತೆ ಸಿಕ್ಕರೆ.. ಆ ದಿನ ಖಂಡಿತಾ ನಿಮಗೆ ಧನಾತ್ಮಕವಾಗಿರುತ್ತದೆ.
ಸ್ವಯಂ ಪ್ರೇರಣೆ ಎನ್ನುವುದು ನಿಮ್ಮಲ್ಲಿ ಆತ್ಮವಿಶ್ವಾಸವನ್ನು ಮೂಡಿಸುತ್ತದೆ. ಆದ್ದರಿಂದ ನೀವು ಪ್ರತಿದಿನ ಬೆಳಿಗ್ಗೆ ಎದ್ದ ತಕ್ಷಣ ನೀವು ಏನು ಬೇಕಾದರೂ ಮಾಡಬಹುದು ಎಂದು ನಂಬಿರಿ. ಆಗ ನಿಮ್ಮ ಕೆಲಸವು ಸುಲಭವಾಗಿ ಮತ್ತು ತ್ವರಿತವಾಗಿ ಮಾಡಲಾಗುತ್ತದೆ. ಇದಲ್ಲದೆ, ಬೆಳಿಗ್ಗೆ ಅಂತಹ ಆಲೋಚನೆಗಳು ನಿಮ್ಮ ಸಕಾರಾತ್ಮಕತೆಯನ್ನು ಹೆಚ್ಚಿಸುತ್ತದೆ.
ಅದರಿಂದ ಉಂಟಾದ ಅನೇಕ ಸಮಸ್ಯೆಗಳನ್ನು ನಿಭಾಯಿಸಲು ನಿಮಗೆ ಸಾಧ್ಯವಾಗುತ್ತದೆ. ನಿಮ್ಮ ಆಲೋಚನಾ ಕ್ರಮ ಬದಲಾಗುತ್ತದೆ. ಇದರಿಂದಾಗಿ ಎಂತಾ ಕೆಲಸವಾದರೂ ಮಾಡುತ್ತೇನೆ ಎಂಬ ವಿಶ್ವಾಸ ಹೆಚ್ಚುತ್ತದೆ. ನೀವು ಮಾಡುವ ಎಲ್ಲದರಲ್ಲೂ ಸಂತೋಷವನ್ನು ಕಂಡುಕೊಳ್ಳಲು ಪ್ರಯತ್ನಿಸಿ. ಆದರೆ ವಾಸ್ತವವನ್ನು ಮರೆಯಬೇಡಿ. ನಿಮ್ಮನ್ನು ನೀವೇ ಪ್ರೇರೇಪಿಸಿಕೊಳ್ಳಿ. ಯಾವುದೇ ಪರಿಸ್ಥಿತಿಯಲ್ಲೂ ಒಳ್ಳೆಯದನ್ನೇ ಯೋಚಿಸಿ. ಮಾಡಬೇಕಿರುವ ಕೆಲಸವನ್ನು ಎಂದಿಗೂ ಲಘುವಾಗಿ ತೆಗೆದುಕೊಳ್ಳಬೇಡಿ.