RCB ಮಾರ್ಕೆಟಿಂಗ್ ಹೆಡ್ ಸೇರಿ ಮೂವರು ಅರೆಸ್ಟ್..!

1 Min Read

 

ಬೆಂಗಳೂರು; ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕಷ್ಟು ಬೆಳವಣಿಗೆ ನಡೆಯುತ್ತಿದೆ. ಇದೀಗ ಆರ್ಸಿಬಿ ಮಾರ್ಕೆಟಿಂಗ್ ಹೆಡ್ ಸೇರಿ ಮೂವರನ್ನು ಅರೆಸ್ಟ್ ಮಾಡಲಾಗಿದೆ. ಆರ್ಸಿಬಿ ಮಾರ್ಕೆಟಿಂಗ್ ಹೆಡ್ ನಿಖಿಲ್ ಸೋಸಲೆ ಹಾಕಿದ್ದ ಪೋಸ್ಟ್ ನಿಂದಾಗಿ ಬಂಧಿಸಲಾಗಿದೆ.

ಆರ್ಸಿಬಿ ಮಾರ್ಕೆಟಿಂಗ್ ಹೆಡ್ ಆಗಿರುವ ನಿಖಿಲ್ ಸೋಸಲೆ, ಬೆಂಗಳೂರಿನಲ್ಲಿ ವಿಕ್ಟರಿ ಪರೇಡ್ ಅಂತ ಪೋಸ್ಟ್ ಹಾಕಿದ್ದರು. ಮೊದಲೇ ಬೆಂಗಳೂರಿನಲ್ಲಿ ದೊಡ್ಡ ಅನಾಹುತವೇ ಆಗಿದೆ. ಇಂಥ ಸಮಯದಲ್ಲಿ ಈ ರೀತಿಯ ಪೋಸ್ಟ್ ಹಾಕಿದ್ದಾರೆ. ಪೊಲೀಸರಿಂದ ಅನುಮತಿಯನ್ನು ಪಡೆಯದೆ ಈ ರೀತಿ ಪೋಸ್ಟ್ ಹಾಕಿರೋದಕ್ಕೆ ಅರೆಸ್ಟ್ ಮಾಡಲಾಗಿದೆ. ಇವರ ಜೊತೆಗೆ ಡಿಎನ್ಎ ಸಂಸ್ಥೆಯ ಇಬ್ಬರು ಮುಖ್ಯಸ್ಥರನ್ನು ಬಂಧಿಸಲಾಗಿದೆ. ಕಿರಣ್ ಮತ್ತು ಸುಮಂತ್ ಬಂಧಿತರಾಗಿದ್ದಾರೆ.

ನಿಖಿಲ್ ಸೋಸಲೆ ಆರ್ಸಿಬಿ ಮ್ಯಾನೇಜ್ಮೆಂಟ್ ಮಾರ್ಕೆಟಿಂಗ್ ಹೆಡ್ ಆಗಿದ್ದರು. ಕಮಿಷನರ್ ಪರೆಡ್ ಡಿಲೀಟ್ ಮಾಡಿದ ಬಳಿಕವೂ ಆ ಪೋಸ್ಟ್ ಅನ್ನ ಡಿಲೀಟ್ ಮಾಡಿರಲಿಲ್ಲ. ಸ್ಟೇಡಿಯಂಗೆ ಸೆಲೆಬ್ರೇಷನ್ ಗಾಗಿ ಉಚಿತ ಟಿಕೆಟ್ ಅಂತ ಕೂಡ ಘೋಷಣೆ ಮಾಡಿದ್ದರು. ಗೇಟ್ 9 ಮತ್ತು 10ರ ಬಳಿ 1 ಗಂಟೆಗೆ ಟಿಕೆಟ್ ಸಿಗುತ್ತೆ ಅಂತ ಹೇಳಿದ್ದರು. ಉಚಿತ ಪೋಸ್ಟ್ ಅಂತ ಹಾಕಿದ್ದಕ್ಕೆ ಅಷ್ಟೆಲ್ಲ ಜನ ಸೇರಿದ್ದರು. ಅದರಿಂದ ಅನಾಹುತವಾಗಿದೆ. ಈ ಹಿನ್ನೆಲೆ ಅವರನ್ನು ಬಂಧಿಸಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *

Enable Notifications OK No thanks