ಬೆಂಗಳೂರು: ಮಾರ್ಚ್ 31ರ ಒಳಗೆ ಆಧಾರ್ ಮತ್ತು ಪ್ಯಾನ್ ಕಾರ್ಡ್ ಅನ್ನು ಲಿಂಕ್ ಮಾಡಲು ಕೊನೆಯ ಅವಕಾಶ ನೀಡಿತ್ತು ಸರ್ಕಾರ. ಅದು ಒಂದು ಸಾವಿರ ದಂಡದೊಂದಿಗೆ. ಏಪ್ರಿಲ್ 1ರಿಂದ ಪ್ಯಾನ್ ಕಾರ್ಡ್ ಯಾವುದೇ ರೀತಿಯ ಕಾರ್ಯ ನಿರ್ವಹಿಸೋದಿಲ್ಲ. ಮತ್ತೆ ಹೊಸದಾಗಿ ಮಾಡಿಸಲು 10 ಸಾವಿರ ದಂಡ ಎಂದು ಸೂಚನೆ ನೀಡಿತ್ತು. ಈ ಮಾಹಿತಿ ಗ್ರಾಮೀಣ ಭಾಗದಲ್ಲಿಯೂ ಹೆಚ್ಚಾಗಿ ತಿಳಿದಿರಲಿಲ್ಲ.
ಒಂದು ಸಾವಿರ ದಂಡ ಎಂದರೆ ಒಂದೊಂದು ಕುಟುಂಬದಲ್ಲು ನಾಲ್ಕೈದು ಕಾರ್ಡ್ ಇರುವವರು ಏನು ಮಾಡಬೇಕು ಎಂಬ ಪ್ರಶ್ನೆಗಳನ್ನು ಜನ ಸಾಮಾನ್ಯರು ಕೇಳುವುದಕ್ಕೆ ಶುರು ಮಾಡಿದರು. ಜನಾಕ್ರೋಶದ ಬೆನ್ನಲ್ಲೇ ಇದೀಗ ಜೂನ್ 30ರ ತನಕ ಅವಧಿಯನ್ನು ವಿಸ್ತರಿಸಲಾಗಿದೆ.
ಒಬ್ಬ ವ್ಯಕ್ತಿ ಒಂದಕ್ಕಿಂತ ಹೆಚ್ಚು ಪ್ಯಾನ್ ಕಾರ್ಡ್ ಹೊಂದಿರುವುದನ್ನು ತಡೆಯುವುದಕ್ಕಾಗಿ ಆಧಾರ್ ಮತ್ತು ಪ್ಯಾನ್ ಕಾರ್ಡ್ ಜೋಡಣೆ ಮಾಡಲು ತಿಳಿಸಲಾಗಿದೆ. ಗಡುವು ನೀಡಲು ಆದರೆ ಒಂದು ಸಾವಿರ ದಂಡ ಯಾಕೆ ಎಂಬ ಪ್ರಶ್ನೆಗಳು ಉದ್ಭವಿಸಿವೆ.





GIPHY App Key not set. Please check settings