ಕಾರಿನಲ್ಲಿ ಕುಳಿತು ಆಟವಾಡುವಾಗಲೇ 3 ಮಕ್ಕಳ ನಿಧನ..!

suddionenews
1 Min Read

 

ತಮಿಳುನಾಡು: ನಿಲ್ಲಿಸಿದ್ದ ಕಾರಿನೊಳಗೆ ಕೂತು ಆಟವಾಡುತ್ತಿದ್ದಾಗ ಮೂವರು ಮಕ್ಕಳು ಉಸಿರುಗಟ್ಟಿ ಸಾವನ್ನಪ್ಪಿರುವ ಘಟನೆ, ತಿರುನಲ್ವೇಲಿ ಜಿಲ್ಲೆಯ ಪನಗುಡಿ ಬಳಿಯ ಲೆಬ್ಬೈ ಕುಡಿಯಿರಿಪ್ಪು ಎಂಬಲ್ಲಿ ನಡೆದಿದೆ.

ಜೂನ್ 4 ರಂದು ರಾತ್ರಿ ಈ ಘಟಬೆ ನಡೆದಿದೆ. ದಿನಗೂಲಿ ಕಾರ್ಮಿಕ ನಾಗರಾಜ್ ಅವರ ಮಕ್ಕಳಾದ ನಿತೀಶಾ(7), ನಿತೀಶ್ (5) ಮತ್ತು ಕೂಲಿ ಕಾರ್ಮಿಕ ಸುಧನ್ ಅವರ ಮಗ ಕಬಿಶಾಂತ್(4) ಮೃತಪಟ್ಟ ಮಕ್ಕಳು ಎನ್ನಲಾಗಿದೆ. ನಾಗರಾಜ್ ಅವರ ಸಹೋದರ ಮಣಿಕಂದನ್ ಅವರಿಗೆ ಸೇರಿದ ಕಾರು ಇದಾಗಿದ್ದು, ಕೆಲವು ದಿನಗಳ ಹಿಂದೆ ಮನೆ ಬಳಿ ಕಾರ್ ನಿಲ್ಲಿಸಲಾಗಿತ್ತು.

ಶನಿವಾರ ಮಧ್ಯಾಹ್ನ ಊಟದ ನಂತರ ಮೂವರು ಮಕ್ಕಳು ಆಟವಾಡಲು ಮನೆಯಿಂದ ಹೊರಗೆ ಹೋಗಿ ಕಾರಿನ ಒಳಗೆ ಕುಳಿತಿದ್ದಾರೆ. ಮಕ್ಕಳು ನಾಪತ್ತೆಯಾಗಿರುವುದನ್ನು ಕಂಡು ಪೋಷಕರು ಹುಡುಕಾಟ ಆರಂಭಿಸಿದ್ದಾರೆ. ಕಾರು ಬಳಿ ಮಕ್ಕಳು ಆಟವಾಡುತ್ತಿದ್ದುದನ್ನು ಕಂಡ ದಾರಿಹೋಕರೊಬ್ಬರು ಪೋಷಕರಿಗೆ ವಿಷಯ ತಿಳಿಸಿದ್ದಾರೆ. ಬಳಿಕ ಸ್ಥಳಕ್ಕೆ ಹೋಗಿ ನೋಡಿದಾಗ ಕಾರಿನ ಒಳಗೆ ಮೂವರು ಮಕ್ಕಳು ಪ್ರಜ್ಞಾಹೀನ ಸ್ಥಿತಿಯಲ್ಲಿ ಮಲಗಿದ್ದರು.

ತಕ್ಷಣ ಕಾರಿನ ಬಾಗಿಲು ಮುರಿದು ಮಕ್ಕಳನ್ನು ಪನಗುಡಿ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದರು, ಆದ್ರೆ ವೈದ್ಯರು ಬರುವಷ್ಟರಲ್ಲೇ ಮಕ್ಕಳು ಸಾವನ್ನಪ್ಪಿದ್ದರು. ಈ ಸಂಬಂಧ ಮಾಹಿತಿ ನೀಡಿರುವ ತಿರುನಲ್ವೇಲಿ(ಗ್ರಾಮಾಂತರ) ಎಸ್ಪಿ ಪಿ. ಸರವಣನ್ ಮಾತನಾಡಿ, ಆಮ್ಲಜನಕ ಕೊರತೆಯಿಂದಾಗಿ ಮಕ್ಕಳು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ಅಸ್ವಾಭಾವಿಕ ಸಾವಿನ ಪ್ರಕರಣ ದಾಖಲಿಸಿಕೊಂಡು ಪಣಗುಡಿ ಪೊಲೀಸರು ತನಿಖೆ ನಡೆಸಲಿದ್ದಾರೆ ಎಂದು ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *