ಕಡೆಗೂ ಫಲಿಸಿತು ರೈತರ ಹೋರಾಟ : 3 ಕೃಷಿ ಕಾಯ್ದೆ ವಾಪಾಸ್ ಪಡೆದ ಕೇಂದ್ರ ಸರ್ಕಾರ..!

ನವದೆಹಲಿ: ಕೆಂದ್ರ ಸರ್ಕಾರ ಜಾರಿಗೆ ತಂದಿದ್ದಂತ ಮೂರು ಕೃಷಿ ಕಾನೂನುಗಳಿಗೆ ರೈತರ ವಿರೋಧವಿತ್ತು. ಅಂದಿನಿಂದಲೂ ಹೋರಾಟ ಮಾಡಿಕೊಂಡೆ ಬಂದ ರೈತರಿಗೆ ಇಂದು ಜಯ ಲಭಿಸಿದೆ. ಆ ಮೂರು ಕೃಷಿ ಕಾನೂನುಗಳನ್ನು ಹಿಂಪಡೆಯಲು ನರೇಂದ್ರ ಮೋದಿ ಸರ್ಕಾರ ನಿರ್ಧರಿಸಿದೆ.

ಈ ಬಗ್ಗೆ ಮಾತನಾಡಿರುವ ಪ್ರಧಾನಿ‌ ಮೋದಿ, ಮೂರು ಕೃಷಿ ಕಾನೂನುಗಳನ್ನು ವಾಪಾಸ್ ಪಡೆಯಲು ಸರ್ಕಾರ ನಿರ್ಧರಿಸಿದೆ. ನಮ್ಮ ಸರ್ಕಾರ ಯಾವಾಗಲೂ ರೈತರ ಪರ. ಅದರಲ್ಲೂ ಸಣ್ಣ ರೈತರ ಕಲ್ಯಾಣಕ್ಕಾಗಿ ನಮ್ಮ ಸರ್ಕಾರ ಸದಾ ಮುಂದು ಎಂದಿದ್ದಾರೆ.

ಆ ಮೂರು ಕೃಷಿ ಕಾಯ್ದೆಗಳೆಂದರೆ..?

* ರೈತರ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ ಕಾಯ್ದೆ 2020

* ರೈತರ ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಕಾಯ್ದೆ 2020

* ಅಗತ್ಯ ಸರಕುಗಳ ತಿದ್ದುಪಡಿ ಕಾಯ್ದೆ 2020

Share This Article
Leave a Comment

Leave a Reply

Your email address will not be published. Required fields are marked *