ಕವಾಡಿಗರಹಟ್ಟಿಯಲ್ಲಿ ಮೂವರ ಸಾವಾಗಿದೆ, ಸುಮಾರು 80 ಮಂದಿ ಅಸ್ವಸ್ಥರಾಗಿದ್ದಾರೆ  ಈವರೆಗೂ ಶಾಸಕರು ಪತ್ತೆಯಿಲ್ಲ : ಕೆ.ಎಸ್. ನವೀನ್ ಆಕ್ರೋಶ

1 Min Read

ಸುದ್ದಿಒನ್, ಚಿತ್ರದುರ್ಗ, (ಆ.01) : ನಗರದ ಕವಾಡಿಗರಹಟ್ಟಿಯಲ್ಲಿ ಕಲುಷಿತ ನೀರು ಸೇವಿಸಿ ಈವರೆಗೂ ಮೂವರು ಸಾವನ್ನಪ್ಪಿದರೂ ಸ್ಥಳೀಯ ಶಾಸಕರು ಬಾರದೇ ಇರುವುದು ತೀವ್ರ ಬೇಸರ ತರಿಸಿದೆ ಎಂದು ವಿಧಾನ ಪರಿಷತ್ ಸದಸ್ಯ ಕೆ.ಎಸ್. ನವೀನ್ ಆಕ್ರೋಶ ವ್ಯಕ್ತಪಡಿಸಿದರು.

ಅವರು ಕವಾಡಿಗರಹಟ್ಟಿಗೆ ಭೇಟಿ ನೀಡಿ, ನೊಂದ ಕುಟುಂಬದವರಿಗೆ ವೈಯಕ್ತಿಕ ಪರಿಹಾರ ನೀಡಿ ಅಲ್ಲಿನ ಪರಿಸ್ಥಿತಿಯನ್ನು ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದರು.

ಚುನಾಯಿತ ಪ್ರತಿನಿಧಿಗಳು ಜನರ ಸಂಕಷ್ಟಕ್ಕೆ ಸ್ಪಂದಿಸಬೇಕು. ಅವರ ಸಂಕಷ್ಟದ ಸಮಯದಲ್ಲಿ ಅವರ ಜೊತೆಯಲ್ಲಿ ನಿಲ್ಲಬೇಕು.
ಎಷ್ಟೇ ಒತ್ತಡದಲ್ಲಿದ್ದರೂ ಇಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಇದೇನು ಅಪಘಾತದ ಸಾವಲ್ಲ, ಸಣ್ಣ ವಿಷಯವಲ್ಲ, ಸುಮಾರು70-80 ಜನರು ಆ್ವಸ್ವಸ್ಥರಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕವಾಡಿಗರಹಟ್ಟಿ ಚಿತ್ರದುರ್ಗ ನಗರಸಭೆ ವ್ಯಾಪ್ತಿಯಲ್ಲಿದೆ. ನಗರಸಭೆಯ ವಾರ್ಡ್ ಇದಾಗಿದ್ದು, ಇಂತಹ ಘಟನೆಗಳು ನಡೆದಾಗ ಸ್ಥಳಿಯ ಶಾಸಕರಾದವರು ಸಂಕಷ್ಟದಲ್ಲಿ ಇರುವ ಜನರ ನೆರವಿಗೆ ಧಾವಿಸಬೇಕು. ಪರಿಸ್ಥಿತಿ ನಿಭಾಯಿಸಬೇಕು, ನೊಂದವರಿಗೆ ಸಂತೈಸುವ ಕೆಲಸ ಮಾಡಬೇಕು.

ಮಕ್ಕಳು, ಮಹಿಳೆಯರು ಸೇರಿದಂತೆ ಸುಮಾರು ಜನರು ವಾಂತಿ ಭೇದಿ ಬಾಧೆಯಿಂದ ನರಳುತ್ತಿದ್ದಾರೆ.ವೈದರು ಸೇರಿದಂತೆ ವೈದ್ಯಕೀಯ ಸಿಬ್ಬಂದಿ ಮಕ್ಕಳಿಗೆ ಚಿಕಿತ್ಸೆ ನೀಡಲು ಹರಸಾಹಸ ಪಡುತ್ತಿದ್ದಾರೆ. ಇಂತಹ ಸಂದರ್ಭಗಳಲ್ಲಿ ಚುನಾಯಿತ ಪ್ರತಿನಿಧಿಗಳು ಪರಿಸ್ಥಿತಿ ನಿಭಾಯಿಸಬೇಕು. ಕೇವಲ ಚುನಾವಣೆಯಲ್ಲಿ ಮತ ಪಡೆದು ಗೆದ್ದು ಹೋಗುವುದಲ್ಲ.ಜನರು ಕಷ್ಟದಲ್ಲಿ ಇದ್ದಾಗ ಅವರ ಪರವಾಗಿ ನಿಲ್ಲುವುದು ಚುನಾಯಿತ ಪ್ರತಿನಿಧಿಗಳು ಮೊದಲ ಕರ್ತವ್ಯ. ವಿಧಾನಸೌಧಕ್ಕೆ ಹೋಗುವುದು, ಮೀಟಿಂಗ್ ಗೆ ಹೋಗುವುದಲ್ಲ. ಕಷ್ಟದಲ್ಲಿರುವ ಜನರ ಮಧ್ಯೆ ನಿಲ್ಲಬೇಕು ಇದು ಯಾವುದೇ ಜನಪ್ರನಿಧಿಯ ಮೊದಲ ಆದ್ಯತೆ ಎಂದು ಹೇಳಿದರು.

 

Share This Article
Leave a Comment

Leave a Reply

Your email address will not be published. Required fields are marked *