ಚಿತ್ರದುರ್ಗ, (ಜ.03) : ದೇಶದಲ್ಲಿ ಆಲ್ಪ ಸಂಖ್ಯಾತರ ಸೌಹಾರ್ದಯುತವಾಗಿ ಬಾಳ್ವೆ ನಡೆಸುತ್ತಿದ್ದು ಕೆಲವರು ಇದನ್ನು ಹಾಳು ಮಾಡಲು ಪ್ರಯತ್ನವನ್ನು ಮಾಡುತ್ತಿದ್ದಾರೆ ಇಂತಹ ವ್ಯಕ್ತಿಗಳ ವಿರುದ್ದ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿ ಇಂದು ನಗರದಲ್ಲಿ ಜಿಲ್ಲಾ ಆಲ್ಪ ಸಂಖ್ಯಾತರ ಘಟಕದವತಿಯಿಂದ ಪ್ರತಿಭಟನೆಯನ್ನು ನಡೆಸಲಾಯಿತು.
ಹರಿದ್ವಾರದಲ್ಲಿ ನಡೆದ ಸಂಸತ್ ಸಭೆಯಲ್ಲಿ ನರಸಿಂಹನ್ ಮತ್ತು ಅಶ್ವಿನಿ ಉಪಾಧ್ಯಾಯ ರವರು ತಮ್ಮ ರಾಜಕೀಯ ಲಾಭಕ್ಕಾಗಿ ದೇಶದಲ್ಲಿ ವಾಸ ಮಾಡುವ ಅಲ್ಪಸಂಖ್ಯಾತರನ್ನು ಕಡಿತಿವಿ-ಬಡಿತಿವಿ ಎಂದು ಹೇಳಿದ್ದಾರೆ. ಇದರ ಬಗ್ಗೆ ಪ್ರಧಾನ ಮಂತ್ರಿಗಳಾಗಲೀ, ಗ್ರಹ ಮಂತ್ರಿಗಳಾಗಳಿ ಯಾವುದೇ ರೀತಿಯ ಚಕಾರವನ್ನು ಎತ್ತಿಲ್ಲ ಈ ನಾಯಕರನ್ನು ಗೂಂಡಾ ಕಾಯ್ದೆಯಡಿ ಬಂಧಿಸಿ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಲಾಯಿತು.
ತೇಜಸ್ವಿ ಸೂರ್ಯರವರು ಪದೇ ಪದೇ ಸಮಾಜದ ಸಾರ್ವಭೌಮತೆಗೆ ಧಕ್ಕೆಯನ್ನು ತರು ಮಾತುಗಳನ್ನಾಡುತ್ತಿದ್ದಾರೆ. ಇದು ಖಂಡನೀಯವಾದದು, ಮಂಡ್ಯ ಜಿಲ್ಲೆಯ ಪಾಂಡಪುರದಲ್ಲಿ ಕ್ರಿಸ್ ಮಸ್ ಆಚರಣೆಯ ಸಮಯದಲ್ಲಿ ಏಕಾ-ಏಕಿ ನುಗ್ಗಿದ ಗುಂಪೂಂದು ಮತಾಂತರ ಮಾಡುತ್ತಿದ್ದಾರೆ ಎಂದು ಶಿಕ್ಷಕಿಯರನ್ನು ಮನ ಬಂದತೆ ಆವಾಚ್ಯ ಶಬ್ದಗಳಿಂದ ನಿಂದಿಸಿ ಗಲಾಟೆ ಮಾಡಿದ್ದಾರೆ ಇದು ಸಹಾ ಖಂಡನೀಯ ಎಂದು ಪ್ರತಿಭಟನಾಕಾರರು ತಿಳಿಸಿದ್ದಾರೆ.
ಕ್ರೈಸ್ತ ಸಮುದಾಯದ ಮೇಲೆ ನಿರಂತರವಾಗಿ ಹಲ್ಲೆ ನಡೆಯುತ್ತಿದ್ದು, ಇದ್ದಲ್ಲದೆ ಚರ್ಚೆಗಳ ಮೇಲೆಯೂ ಸಹಾ ಧಾಳಿ ಮಾಡುತ್ತಿದ್ದಾರೆ. ಇದರಿಂದ ಚರ್ಚಗಳಿಗೆ ಸೂಕ್ತವಾದ ಭದ್ರತೆಯನ್ನು ನೀಡಬೇಕು, ದೌರ್ಜನ್ಯ ತಡೆಯಬೇಕು, ಏಸು ಕ್ರಸ್ತರ ಪ್ರತಿಮೆಗಳನ್ನು ಭಗ್ನ ಮಾಡುತ್ತಿದ್ದು, ಅಂತಹವರನ್ನು ಗೂಂಡಾ ಕಾಯ್ದೆಯಡಿ ಬಂಧಿಸಿ ಶಿಕ್ಷೆಯನ್ನು ಕೂಡಿಸುವಂತೆ ಆಗ್ರಹಿಸಲಾಯಿತು.
ಮಂಡ್ಯ ಮತ್ತು ಚಿಕ್ಕಬಳಾಪುರದ ಚರ್ಚಗಳಿಗೆ ಬೀಗವನ್ನು ಹಾಕಿ ದೌರ್ಜನ್ಯ ಎಸಗಿರುವ ಅಧಿಕಾರಿಗಳ ಮೇಲೆ ಶಿಸ್ತಿನ ಕ್ರಮ ತೆಗೆದುಕೊಳ್ಳಬೇಕು, ಮುಸ್ಲಿಂ ಮತ್ತು ಕ್ರೈಸ್ತ ಪಾದ್ರಿಗಳ ಮೇಲೆ ಆಧಾರ ರಹಿತವಾಗಿ ಆರೋಪ ಹಾಗೂ ಕೇಸ್ ಗಳನ್ನು ದಾಖಲಿಸುವುದನ್ನು ನಿಲ್ಲಿಸಬೇಕು, ಸಂವಿಧಾನ ವಿರೋಧಿ ಮತಾಂತರ ನಿಷೇಧ ಕಾನೂನನ್ನು ನಾವು ಖಂಡಿಸುತ್ತೇವೆ ಎಂದಿದ್ದಾರೆ.
ಈ ಪ್ರತಿಭಟನೆಯಲ್ಲಿ ಜಿಲ್ಲಾ ಡಿಸಿಸಿ ಅಧ್ಯಕ್ಷ ತಾಜ್‍ಪೀರ್, ಮಹಿಳಾ ಘಟಕ ಅಧ್ಯಕ್ಷ ಶ್ರೀಮತಿ ಗೀತಾ ನಂದಿನಿಗೌಡ, ಜಿಲ್ಲಾ ಅಲ್ಪಸಂಖ್ಯಾಂತರ ಘಟಕದ ಅಧ್ಯಕ್ಷ ಅಬ್ದುಲ್, ಮುಖಂಡರುಗಳಾದ ಪ್ರಕಾಶ್, ಲಕ್ಷ್ಮೀಕಾಂತ್, ಮೈಲಾರಪ್ಪ, ಮೋಹನ್ ಪೂಜಾರಿ, ಶಕೀಲ್, ಮುಜೀಬ್ ಸಂಪತ್, ಮಾಜಿ ಅಧ್ಯಕ್ಷ ಫಾತ್ಯರಾಜನ್ ಸೇರಿದಂತೆ ಚರ್ಚ್ ನ ಫಾದರ್ ಗಳು ಭಾಗವಹಿಸಿದ್ದರು.