ಲಕ್ನೋ: ಕೇಂದ್ರ ಸರ್ಕಾರದಿಂದ ರೈತ ವಿರೋಧಿ ಮೂರು ಕೃಷಿ ಕಾಯ್ದೆಗಳನ್ನ ವಾಪಾಸ್ ಪಡೆದುಕೊಂಡಿದೆ. ಆ ಕಾಯ್ದೆಗಳನ್ನ ವಾಪಾಸ್ ಪಡೆಯಲು ಒತ್ತಾಯಿಸಿ, ಮಳೆ, ಗಾಳಿ, ಚಳಿ ಎನ್ನದೇ ವರ್ಷದಿಂದಲೂ ರೈತರು ಧರಣಿ ಕುಳಿತಿದ್ದರು. ಆದ್ರೆ ಕೇಂದ್ರ ಸರ್ಕಾರ ಆ ಕಾಯ್ದೆಗಳನ್ನೇನೋ ವಾಪಾಸ್ ಪಡೆದಿದೆ. ಆದ್ರೆ ರೈತರು ಪ್ರತಿಭಟನೆಯಿಂದ ಮಾತ್ರ ಹಿಂದೆ ಸರಿದಿಲ್ಲ.
ಭಾರತೀಯ ಕಿಸಾನ್ ಯೂನಿಯನ್ ಮುಖಂಡ ರಾಕೇಶ್ ಟಿಕಾಯತ್ ಈ ಬಗ್ಗೆ ಮಾತನಾಡಿದ್ದು, ರೈತರಿಗೆ ಸಂಪೂರ್ಣ ಪರಿಹಾರ ಸಿಗಬೇಕು. ಅಲ್ಲಿವರೆಗೂ ಪ್ರತಿಭಟನೆ ಕೈಬಿಡಲ್ಲ ಎಂದಿದ್ದಾರೆ. ಈ ಸಂಬಂಧ ಲಕ್ನೋದ ಇಕೋ ಗಾರ್ಡನ್‍ನಲ್ಲಿ 100ಕ್ಕೂ ಹೆಚ್ಚು ಮಂದಿ ಸಭೆ ನಡೆಸಿದ್ದಾರೆ.
Lucknow | Owaisi & BJP share a bond of 'chacha-bhatija' (uncle-nephew). He should not talk about this on TV, he can just ask directly: BKU Leader Rakesh Tikait, on Asaduddin Owaisi's demand of repealing CAA & NRC pic.twitter.com/R8iIZKoRnI
— ANI UP/Uttarakhand (@ANINewsUP) November 22, 2021
ಈ ವೇಳೆ ರೈತರ ಮೇಲೆ ಕಾರು ಹತ್ತಿಸಿ ಅವರ ಸಾವಿಗೆ ಕಾರಣವಾದ ಕೇಂದ್ರ ಸಚಿವರ ಮಗ ಎಂಬ ಆರೋಪ ಇದೆ. ಹೀಗಾಗಿ ಈ ಸಭೆಯ ಬಳಿಕ ಮಾತನಾಡಿದ ಅವರು, ಕೇಂದ್ರ ಸಚಿವ ಅಜಯ್ ಮಿಶ್ರಾ ಟೆನಿ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕು. ರೈತರಿಗೆ ಕನಿಷ್ಠ ಬೆಂಬಲ ಬೆಲೆಯನ್ನು ಖಾತರಿ ಪಡಿಸಬೇಕು, ಕಬ್ಬುಗಾರರಿಗೆ ಬಾಕಿ ಹಣ ಪಾವತಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಲು ಎಂದು ಸಂಯುಕ್ತ ಕಿಸಾನ್ ಮೋರ್ಚಾದಿಂದ ಒತ್ತಾಯಿಸಲಾಯಿತು.