ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 02 : ದುಬೈನಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಪರಿಸ್ಥಿತಿ ತಿಳಿಯದೆ ಪ್ರವಾಸಕ್ಕೆ ಹೋದವರು ಸಂಕಟ ಪಡುವಂತೆ ಆಗಿದೆ. ಇದರ ಮಧ್ಯೆ ಚಿತ್ರದುರ್ಗದಿಂದ ದುಬೈ ಪ್ರವಾಸಕ್ಕೆ ಹೋಗಿದ್ದರು ಸೇಫ್ ಆಗಿದ್ದೇವೆ ಎಂದು ಸುದ್ದಿಒನ್ ಗೆ ವಿಡಿಯೋ ಸಂದೇಶ ಕಳುಹಿಸಿದ್ದಾರೆ.
ಚಿತ್ರದುರ್ಗ ನಗರದ ವಿದ್ಯಾನಗರ ನಿವಾಸಿ ರಾಮಾಂಜನೇಯ ಅವರು ನಿನ್ನೆ ರಾತ್ರಿ ದೂರವಾಣಿ ಮೂಲಕ ಮಾತನಾಡಿದ್ದರು. ಇದೀಗ ವಿಡಿಯೋ ಸಂದೇಶವನ್ನು ಕಳುಹಿಸಿದ್ದಾರೆ.
ಜಗಳೂರಿನಿಂದ 15 ಜನ ಮತ್ತು ಬಳ್ಳಾರಿಯಿಂದ 35 ಜನ ಪ್ರವಾಸಕ್ಕೆ ಬಂದಿದ್ದೆವು. ಕಳೆದ ತಿಂಗಳು 24ರಂದು ಬೆಂಗಳೂರು ಬಿಟ್ಟು ದುಬೈ ಪ್ರವಾಸ ಕೈಗೊಳ್ಳಲಾಗಿತ್ತು. ಐದು ದಿನಗಳ ಪ್ರವಾಸ ಪೂರ್ತಿ ಮಾಡಿ, ಇನ್ನೇನು ಹೊರಬೇಕು ಎನ್ನುವಷ್ಟರಲ್ಲಿ ಪ್ರಯಾಣಿಕರ ವಿಮಾನ ರದ್ದಾಗಿವೆ. ಆ ಪರಿಸ್ಥಿತಿ ಕಂಡು ಸಹಜವಾಗಿಯೇ ಎಲ್ಲರಲ್ಲೂ ಆತಂಕ ಶುರುವಾಗಿದೆ.
https://www.facebook.com/share/v/1CM59PYvMG/
ರಾಮಾಂಜನೇಯ ಸೇರಿದಂತೆ ಅಷ್ಟು ಜನರನ್ನು ಬಳ್ಳಾರಿಯ ಟೂರ್ ಮ್ಯಾನೇಜರ್ ರೇಣುಕಾ ಪ್ರಸಾದ್ ಅವರು ಹೊಟೇಲ್ ರೂಮ್ ಗಳನ್ನ ಬುಕ್ ಮಾಡಿ, ಒಂದೇ ಕಡೆ ಇರುವಂತೆ ವ್ಯವಸ್ಥೆ ಮಾಡಿದ್ದಾರೆ. ವಿಮಾನ ಕ್ಯಾನ್ಸಲ್ ಆಗಿದ್ದು, ಯುದ್ಧದ ವಾತಾವರಣ ಪ್ರವಾಸಿಗರನ್ನ ಆತಂಕಕ್ಕೆ ಈಡು ಮಾಡಿತ್ತು. ಆದರೆ ನಂತರ ಅಲ್ಲಿನ ಕನ್ನಡಪರ ಸಂಘಟನೆಗಳು, ಮಾಜಿ ಸಚಿವ ನಾಗೇಂದ್ರ ಅವರ ಕಡೆಯವರು, ಉದ್ಯಮಿ ಮಾಧವ್ ಕಿರಣ್ ಹಾಗೂ ಸ್ನೇಹಿತರೆಲ್ಲಾ ಸೇರಿ ಅವರಿಗೆ ಧೈರ್ಯ ತುಂಬಿದ್ದಾರೆ. ನೀವಿರುವ ತನಕ ಹೊಟೇಲ್ ವ್ಯವಸ್ಥೆ, ಊಟದ ವ್ಯವಸ್ಥೆ ಮಾಡ್ತೀವಿ ಅಂತ ಹೇಳಿದ್ದಾರೆ.
ನಾವೀಗ ಸೇಫ್ ಆಗಿದ್ದೀವಿ. ಹೊಟೇಲ್ ನಲ್ಲಿ ಆರಾಮವಾಗಿದ್ದೀವಿ. ಯಾವುದೇ ತೊಂದರೆ ಇಲ್ಲ. ವಿಮಾನಗಳ ಹಾರಾಟ ಶುರುವಾಗುವ ತನಕ ಕಾಯಬೇಕಾಗಿದೆ. ಯಾರೂ ಆತಂಕ ಪಡುವ ಅಗತ್ಯವಿಲ್ಲ. ನಾವೂ ಸೇಫಾಗಿದ್ದೇವೆ. ಯಾವುದೇ ರೀತಿಯ ಆತಂಕ ಪಡುವ ಅಗತ್ಯವಿಲ್ಲ ಎಂದು ರಾಮಾಂಜನೇಯ ಅವರು ವಿಡಿಯೋ ಮಾಡುವ ಮೂಲಕ ತಿಳಿಸಿದ್ದಾರೆ.




