ಕಲಬುರಗಿ: ಶಾಸಕ ಪ್ರಿಯಾಂಕ್ ಖರ್ಗೆ ಆಗಾಗ ಬಿಜೆಪಿ ಮಾಡಿದ ಭ್ರಷ್ಟಾಚಾರದ ಬಗ್ಗೆ ಸಾಕ್ಷಿ ಸಮೇತ ಅಖಾಡಕ್ಕೆ ಇಳಿಯುತ್ತಾರೆ. ಇದೀಗ ಮತ್ತೆ ಬಿಜೆಪಿ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಬಿಜೆಪಿ ಬಂದ ಮೇಲೆ ಭ್ರಷ್ಟಾಚಾರದ ರಾಜ್ಯ ಎಂಬ ಬಿರುದು ಸಿಕ್ಕಿದೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಬಿಜೆಪಿ ಎಂದರೆ ಬ್ರೋಕರ್ ಜನತಾ ಪಕ್ಷವಾಗಿದೆ. ವಿಧಾನಸೌಧವನ್ನೇ ಶಾಪಿಂಗ್ ಕಾಂಪ್ಲೆಕ್ಟ್ ಮಾಡಿಕೊಂಡಿದ್ದಾರೆ. ಈ ಮಾಲ್ ನಲ್ಲಿ ವರ್ಗಾವಣೆ, ಪೋಸ್ಟಿಂಗ್, ಕಾಮಗಾರಿ, ಉದ್ಯೋಗ ಖರೀದಿ ಮಾಡಬಹುದು. ರಾಜ್ಯದ ಉತ್ತಮ ಸೇಲ್ಸ್ ಮನ್ ಗಳು ಅಲ್ಲಿದ್ದಾರೆ ಎಂದಿದ್ದಾರೆ.
ಅಧಿಕಾರಿಗಳು, ಮಂತ್ರಿಗಳು, ಶಾಸಕರೇ ಹೆಚ್ಚು ಸೇಲ್ಸ್ ಮನ್ ಗಳಾಗಿದ್ದಾರೆ. ಪಿಡಬ್ಯ್ಲೂಡಿ ಜೆಇ 10.5 ಲಕ್ಷ ಹಣದಿಂದ ಸಿಕ್ಕಿಬಿದ್ದಿದ್ದಾನೆ. ವಿಧಾನಸೌಧದಲ್ಲಿ ಯಾರು ಈ ಹಣವನ್ನು ತೆಗೆದುಕೊಳ್ಳಲು ಕೂತಿದ್ದರು..? ಯಾರಿಗೆ ಹಣ ತೆಗೆದುಕೊಳ್ಳಲು ಹೋಗಿದ್ದರು ಎಂಬುದನ್ನು ತನಿಖೆ ಮಾಡಿ ಹೊರ ತೆಗೆಯಬೇಕು.
ಹೈಕಮಾಂಡ್ ಗೆ ಸಿಎಂ ಮಧ್ಯವರ್ತಿ, ಸಿಎಂಗೆ ಸಚಿವರು ಮಧ್ಯವರ್ತಿ. ಇನ್ನು ಕೆಲ ಪ್ರಕರಣದಲ್ಲಿ ರೌಡಿಶೀಟರ್ ಗಳು ಕೂಡ ಮಧ್ಯವರ್ತಿಯಾಗಿದ್ದಾರೆ. ಈ ಸರ್ಕಾರವನ್ನು ಸಿಎಂ ನಡೆಸುತ್ತಿಲ್ಲ. ಆಡಳಿತ ಮೋರ್ಚಾದಲ್ಲಿ ರೌಡಿಶೀಟರ್ ಓಪನ್ ಮಾಡಿದ್ದಾರೆ. ಸ್ಯಾಂಟ್ರೋ ರವಿಗೆ ಹೋಂ ಮಿನಿಸ್ಟರ್ ಗಿಂತ ಹೆಚ್ಚಿನ ಮಾಹಿತಿ ಇದೆಯಂತೆ ಎಂದಿದ್ದಾರೆ.