ಈಗ ತಾನೇ ಐಪಿಎಲ್ ನಿಂದ ಆರ್ಸಿಬಿ ಟೀಂ ಹೊರ ಬಿದ್ದಿದೆ. ಪ್ಲೇ ಆಫ್ ಕನಸು ನನಸು ಮಾಡಿದ್ದ ಆರ್ಸಿಬಿ, ಇದ್ದಕ್ಕಿದ್ದ ಹಾಗೇ ಎಲಿಮಿನೇಟರ್ ಪಂದ್ಯದಿಂದ ಹೊರ ಬಿದ್ದಿದೆ. ಈ ಬೇಸರದ ನಡುವೆಯೇ ಕೊಹ್ಲಿ ಬಗ್ಗೆ ಶಾಕಿಂಗ್ ವಿಚಾರವೊಂದು ವೈರಲ್ ಆಗುತ್ತಿದೆ. ಅದುವೆ ನಿವೃತ್ತಿಯ ವಿಚಾರ. ಕೆಲವೇ ದಿನಗಳಲ್ಲಿ ವೆಸ್ಟ್ ಇಂಡೀಸ್ ಹಾಗೂ ಯುಎಸ್ಎ ನಲ್ಲಿ ಟಿ20 ವಿಶ್ವಕಪ್ ಸಮರ ಆರಂಭವಾಗಲಿದೆ. ರೋಹಿತ್ ನೇತೃತ್ವದ ಟೀಂ ಇಂಡಿಯಾ ಶೀಘ್ರದಲ್ಲಿಯೇ ವಿಂಡೀಸ್ ಗೆ ಹಾರಲಿದೆ. ಆದರೆ ಇದರ ನಡುವೆಯೇ ಕೊಹ್ಲಿ ಬಗ್ಗೆ ಹೀಗೊಂದು ಸುದ್ದಿ ಹಬ್ಬಿದೆ.
ಕೊಹ್ಲಿ ನಿವೃತ್ತಿಯ ವಿಚಾರಕ್ಕೆ ಆ ಎರಡು ಕಾರಣಗಳು ಪುಷ್ಠಿ ನೀಡುತ್ತಿವೆ. ಫ್ಯಾಮಿಲಿಗೆ ಈಗ ಆದ್ಯತೆ ನೀಡುವ ನಿರ್ಧಾರ ಮಾಡಿದ್ದಾರೆ ಎನ್ನಲಾಗಿದ್ದು ಹೀಗಾಗಿ ನಿವೃತ್ತಿಯ ನಿರ್ಧಾರ ಮಾಡಿದ್ದಾರೆ. ತಂದೆಯ ಸಾವಿನ ನೋವಿದ್ದರೂ ಕೊಹ್ಲಿ ಪಂದ್ಯವನ್ನಾಡಿದ್ದರು. ಟೀಂ ಇಂಡಿಯಾದ ಬ್ಯುಸಿ ಶೆಡ್ಯೂಲ್ ಹಂಗಿದೆ. ವರ್ಷವಿಡೀ ಆಟಗಳನ್ನೇ ಆಡಬಢಕಾದ ಅನಿವಾರ್ಯತೆ. ಈಗ ಕೊಹ್ಲಿಗೆ ಎರಡು ಮಕ್ಕಳು. ಹೀಗಾಗಿ ಕುಟುಂಬಕ್ಕೆ ಸಮಯ ಕೊಡಬೇಕೆಂಬ ಕಾರಣಕ್ಕೆ ನಿವೃತ್ತಿ ಪಡೆಯಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಇನ್ನೊಂದು ಮೇಜರ್ ಸಮಸ್ಯೆ ಎಂದರೆ ಕೊಹ್ಲಿಗೆ ಹೈ ಸೈಟ್ ಸಮಸ್ಯೆ ಇದೆ. ಈ ಸಮಸ್ಯೆಯಿಂದ ಕೊಹ್ಲಿ ಫಿಟ್ ಆಗಿದ್ರು ನಿವೃತ್ತಿ ಹೊಂದುವ ಯೋಚನೆ ಮಾಡಿದ್ದಾರೆ ಎನ್ನಲಾಗಿದೆ. ಕೊಹ್ಲಿ ಕ್ರೇಜ್ ದೊಡ್ಡ ಮಟ್ಟದಲ್ಲಿದೆ. ಅವೆ ಅದ್ಭುತ ಬ್ಯಾಟಿಂಗ್, ಸಾಲಿಡ್ ಫೀಲ್ಡಿಂಗ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಅಷ್ಟೇ ಅಲ್ಲ ಅವೆ ಫಿಟ್ನೆಸ್ ಸಲಾಂ ಎಮ್ನುತ್ತಾರೆ. ಆದರೆ ಕೆಲವೊಂದು ಆದ್ಯತೆಯ ಮೇರೆಗೆ ರಿಟೈರ್ಮೆಂಟ್ ತೆಗೆದುಕೊಳ್ಳುತ್ತಿದ್ದಾರೆ ಎಂಬ ಮಾತಿದೆ.