ಬೆಂಗಳೂರು: ಬಿಗ್ ಬಾಸ್ ನೋಡುವವರ ಸಂಖ್ಯೆ ಕಡಿಮೆ ಏನು ಇಲ್ಲ. ದಿನಕಳೆದಂತೆ ಬಿಗ್ ಬಾಸ್ ಕೂಡ ಟ್ವಿಸ್ಟ್ ಅಂಡ್ ಟರ್ನಿಂಗ್ ಪಾಯಿಂಟ್ ಗಳನ್ನ ಕೊಡ್ತಾನೆ ಇರುತ್ತೆ. ಮನೆಯಲ್ಲಿರುವ ಮಂದಿ ಬದಲಾಗ್ತಾ ಹೋಗ್ತಾರೆ, ಟಾಸ್ಕ್ ಗಳು ಜಾಸ್ತಿಯಾಗ್ತಾ ಹೋಗ್ತಾವೆ, ಜಗಳಗಳಂತು ಪೀಕ್ ಲೆವೆಲ್ ಗೆ ಹೋಗ್ತಾವೆ. ಇದರ ನಡುವೆ ಒಬ್ಬೊಬ್ಬರೆ ಹೊರಗೆ ಬರ್ತಾ ಇರ್ತಾರೆ. ಈ ವಾರ ಯಾರು ಬರಬಹುದು ಅಂತ ವೀಕ್ಷಕರು ಗೆಸ್ ಮಾಡೊದ್ದರೋ ಅವರು ಬರ್ತಾ ಇಲ್ಲ. ಊಹೆಗೂ ಮೀರಿದ ಸ್ಪರ್ಧಿ ಹೊರಗೆ ಬರ್ತಿದ್ದಾರೆ.
ವೀಕ್ ಡೇಸ್ ಎಪಿಸೋಡ್ ನೋಡುವುದಕ್ಕಿಂತ ಹೆಚ್ಚಾಗಿ ವೀಕೆಂಡ್ ಶೋ ನೋಡುಗರೆ ಜಾಸ್ತಿ. ಯಾಕಂದ್ರೆ ವೀಕೆಂಡ್ ನಲ್ಲಿ ಆದಂತ ಎಲ್ಲ ತಪ್ಪು ಗಳಿಗೂ ಕಿಚ್ಚ ಸುದೀಪ್ ತೆಗೆದುಕೊಳ್ಳುವ ಕ್ಲಾಸ್ ನೋಡೋದಕ್ಕೇನೆ ಕಾಯ್ತಾ ಇರ್ತಾರೆ. ಈ ವಾರವೂ ಅಂದ್ರೆ ಶನಿವಾರ ಸಕತ್ತಾಗಿಯೇ ಕ್ಲಾಸ್ ತೆಗೆದುಕೊಂಡಿದ್ದಾರೆ. ಭಾನುವಾರದ ಎಪಿಸೋಡ್ ನಲ್ಲಿ ಯಾರಾದರೊಬ್ಬರು ಮನೆಯಿಂದ ಹೊರ ನಡೆಯುತ್ತಾರೆ. ಅದರಂತೆ ವೀಕ್ಷಕರು ಕೂಎ ಗೆಸ್ ಮಾಡ್ತಾರೆ. ಆದರೆ ವೀಕ್ಷಕರ ಗೆಸ್ ಬಿಟ್ಟು ಬಿಗ್ ಬಾಸ್ ಮನೆಯೊಳಗೆ ಬೇರೆನೆ ನಡೆದಿದೆ.
ಕಳೆದ ಕೆಲವು ವಾರಗಳಿಂದ ಧ್ರುವಂತ್ ಆಟ ಅಷ್ಟಕ್ಕಷ್ಟೆ. ಹೀಗಾಗಿ ಧ್ರುವಂತ್ ಹೊರಗೆ ಬರ್ತಾರೆ ಅಂದುಕೊಂಡಿದ್ರೆ ಕಾಕ್ರೋಚ್ ಸುಧಿ ಹೊರಗೆ ಬಂದಿದ್ದಾರೆ. ನಿನ್ನೆಯಷ್ಟೇ ಇನ್ಮೇಲೆ ಚೆನ್ನಾಗಿ ಆಡ್ಬೇಕು ಸುಧೀ ಅಂತ ಕಿಚ್ಚ ಸುದೀಪ್ ಬುದ್ದಿ ಹೇಳಿದ್ದರು. ಆದರೆ ಕಾಕ್ರೋಚ್ ಬಿಗ್ ಬಾಸ್ ಮನೆಯ ಜರ್ನಿಯನ್ನ ಮುಗಿಸಿದ್ದಾರೆ. ಇಂದು ಮನೆಯಿಂದ ಹೊರಗೆ ಬಂದಿದ್ದಾರೆ ಎನ್ನಲಾಗ್ತಾ ಇದೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.











