ಈ ಬಾರಿ ಈಡೇರುತ್ತಾ ದಲಿತ ಸಿಎಂ ಆಸೆ : ಮಲ್ಲಿಕಾರ್ಜುನ ಖರ್ಗೆ ಒಮ್ಮೆ ಅಲ್ಲ ಮಿಸ್ ಆಗಿದ್ದು ಎಷ್ಟು ಬಾರಿ ಸಿಎಂ ಸ್ಥಾನ..?

2 Min Read

ರಾಜ್ಯ ರಾಜಕಾರಣದಲ್ಲಿ ಸದ್ಯ ಸಿಎಂ ಖುರ್ಚಿಯಲ್ಲಿ ನೆಕ್ಸ್ಟ್ ಕೂರುವುದು ಯಾರು ಎಂಬ ಚರ್ಚೆಯೇ ಜೋರಾಗಿ ಆಗ್ತಾ ಇದೆ. ಇತ್ತ ಸಿದ್ದರಾಮಯ್ಯ ಅವರು ಐದು ವರ್ಷ ನಾನೇ ಸಿಎಂ ಅಂತಿದ್ದಾರೆ. ಅತ್ತ ಕಡೆ ಸಿಎಂ ಸ್ಥಾನ ಮಿಸ್ ಆಗಿರುವ ಬಗ್ಗೆ ಮಲ್ಲಿಕಾರ್ಜುನ ಖರ್ಗೆ ಅವರು ನೋವನ್ನ ವ್ಯಕ್ತಪಡಿಸ್ತಾ ಇದ್ದಾರೆ. ಮತ್ತೊಂದು ಕಡೆ ಈ ಅವಧಿಯಲ್ಲಿಯೇ ನಾನು ಸಿಎಂ ಆಗ್ಬೇಕು ಅಂತ ಡಿಸಿಎಂ ಡಿಕೆ ಶಿವಕುಮಾರ್ ಅಪವರು ಕೂಡ ದೇವರ ಮೊರೆ ಹೋಗಿದ್ದಾರೆ. ಅತ್ತ ರಾಜಣ್ಣ ಸೆಪ್ಟೆಂಬರ್ ಕ್ರಾಂತಿ ಹುಳ ಬಿಟ್ಟಿದ್ದಾರೆ. ಈ ಎಲ್ಲಾಪ ಬೆಳವಣಿಗೆ ನೋಡ್ತಾ ದಶಕಗಳ ದಲಿತ ಸಿಎಂ ಕೂಗು ಈ ಬಾರಿ ಈಡೇರಬಹುದಾ ಎಂಬ ನಿರೀಕ್ಷೆ ಹಲವರಿಗೆ ಮೂಡಿದೆ. ಈ ರೀತಿ ಅನ್ನಿಸೋದಕ್ಕೂ ಒಂದು ಸ್ಟ್ರಾಂಗ್ ರೀಸನ್ ಇದೆ.

ಮಲ್ಲಿಕಾರ್ಜುನ ಖರ್ಗೆ ಅವರು ಬಹಳ ತೂಕದ ವ್ಯಕ್ತಿತ್ವ ಇರುವಂತವರು. ಹಳೆಯದ್ದೆಲ್ಲ ನೆನೆದು ಸಿಂಪತಿ ಗಿಟ್ಟಿಸಿಕೊಳ್ಳುವ ರಾಜಕಾರಣ ಮಾಡಲ್ಲ. ಸುಮ್ಮ ಸುಮ್ಮನೆ ಏನೇನೋ ಮಾತಾಡಲ್ಲ. ಆದರೆ ಈಗ ಸಿಎಂ ಸ್ಥಾನ ಮಿಸ್ ಆಗಿದ್ದರ ಬಗ್ಗೆ ಒತ್ತಿ ಒತ್ತಿ ಹೇಳ್ತಿದ್ದಾರೆ. ಇದನ್ನ ನೋಡಿದ್ರೆ ಹೈಕಮಾಂಡ್ ನಿಂದ ಸಿಎಂ ಮಾಡುವ ಸೂಚನೆ ಏನಾದ್ರು ಸಿಕ್ತಾ ಅಂತ. ಯಾಕಂದ್ರೆ ಖರ್ಗೆ ಅವರಿಗೂ ಸಿಎಂ ಆಗಬೇಕೆಂಬ ಬಯಕೆ ಈಗಲು ಹಸಿರಾದಂತೆ ಕಾಣಿಸುತ್ತಿದೆ.

ಈ ಮೊದಲೆ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸಿಎಂ ಆಗುವ ಯೋಗ ಇತ್ತು. ಅದು 1999ರ ಕಾಲವದು. ಖರ್ಗೆ ಅವರು ರಾಜಕಾರಣದಲ್ಲಿ ಸಕ್ರೀಯವಾಗಿದ್ದರು. ಆದರೆ ಚುನಾವಣಾ ಸಮಯಕ್ಕೆ ರಾಷ್ಟ್ರ ರಾಜಕಾರಣದಿಂದ ಎಸ್ ಎಂ ಕೃಷ್ಣ ಅವರು ರಾಜ್ಯ ರಾಜಕಾರಣಕ್ಕೆ ಬಂದ ಕಾರಣ ಮೊದಲ ಬಾರಿಗೆ ಸಿಎಂ ಸ್ಥಾನ ಮಿಸ್ ಆಗಿತ್ತು. ನಂತರ 2004ರಲ್ಲಿ ಕಾಂಗ್ರೆಸ್ ಗೆ ಬಹುಮತ ಸಿಗದ ಕಾರಣ ಜೆಡಿಎಸ್ ಜೊತೆಗೆ ಮೈತ್ರಿ ಮಾಡಿಕೊಂಡಿತ್ತು. ಸಿಎಂ ಸ್ಥಾನಕ್ಕೆ ಎಲ್ಲರ ಒಲವು ಮಲ್ಲಿಕಾರ್ಜುನ ಖರ್ಗೆ ಅವರ ಮೇಲಿದ್ದರು ಜೆಡಿಎಸ್ ಧರ್ಮಸಿಂಗ್ ಹೆಸರನ್ನ ಸೂಚಿಸಿತ್ತು. ಅಲ್ಲಿಯೂ ಮಿಸ್ ಆಯ್ತು. ಬಳಿಕ ಅವರು ರಾಷ್ಟ್ರ ರಾಜಕಾರಣಕ್ಕೆ ಹೋದ್ರು, 2013ರಲ್ಲಿ ಕಾಂಗ್ರೆಸ್ ಪರಿಪೂರ್ಣ ಮತದಿಂದ ಬಂದರು, ಸಿದ್ದರಾಮಯ್ಯ ಅವರು ಸಿಎಂ ಆದರೂ. ಹೀಗೆ ಹಲವು ಬಾರಿ ಕೈತಪ್ಪಿರುವ ಸಿಎಂ ಸ್ಥಾನ ಈ ಬಾರಿ ಸಿಗುತ್ತಾ ನೋಡಬೇಕಿದೆ.

Share This Article
Leave a Comment

Leave a Reply

Your email address will not be published. Required fields are marked *

Enable Notifications OK No thanks