in ,

ಚಿತ್ರದುರ್ಗ : ಈ ಬಾರಿಯ ಹಿಂದೂ ಮಹಾಗಣಪತಿಯ ಭಾಗವಾಧ್ವಜವನ್ನು ಪಡೆದವರು ಯಾರು ಮತ್ತು ಎಷ್ಟಕ್ಕೆ ? ಸಂಪೂರ್ಣ ಮಾಹಿತಿ !

suddione whatsapp group join

ಸುದ್ದಿಒನ್, ಚಿತ್ರದುರ್ಗ, (ಅ.02) : ಹಿಂದೂ ಮಹಾಗಣಪತಿಯ ಪೆಂಡಾಲ್‍ನಲ್ಲಿ ಶನಿವಾರ ನಡೆದ ‘ಭಾಗವಾಧ್ವಜ’ ಹರಾಜು ಈ ಭಾರಿ ತೀವ್ರ ಕೂತುಹಲ ಕೆರಳಿಸಿತು.

ಸಂಪ್ರದಾಯದಂತೆ ಬಜರಂಗದಳ ಹಾಗೂ ವಿಶ್ವ ಹಿಂದೂ ಪರಿಷತ್ ನೇತೃತ್ವದಲ್ಲಿ ಗಣಪತಿಯನ್ನು ಪ್ರತಿಷ್ಠಾಪಿಸಿ 21 ದಿನ ಪೂಜೆ ಸಲ್ಲಿಸಿ ವಿಸರ್ಜನೆ ನಡೆಸುವ ಮುನ್ನ ಭಾಗವಾಧ್ವಜ, ರಾಮಮಂದಿರದ ಪ್ರತಕೃತಿ ಹಾಗೂ ಹೂವಿನ ಹಾರಗಳನ್ನು ಹರಾಜು ಹಾಕಲಾಗುತ್ತದೆ.

ಈ ವರ್ಷ ‘ಭಾಗವಾಧ್ವಜ’ವನ್ನು ಹರಾಜು ಸ್ಥಳಕ್ಕೆ ಕೊನೆ ಕ್ಷಣದಲ್ಲಿ ಆಗಮಿಸಿದ ಉದ್ಯಮಿ, ಹಿರಿಯೂರು ಜೆಡಿಎಸ್ ಅಭ್ಯರ್ಥಿ ಕೆ.ಸಿ.ವೀರೇಂದ್ರ ಪಪ್ಪಿ 2 ಲಕ್ಷದ 1 ಸಾವಿರಕ್ಕೆ ಪಡೆದರು. 50 ಸಾವಿರದಿಂದ ಪ್ರಾರಂಭವಾದ ಹರಾಜು ಕೊನೆಗೆ 2 ಲಕ್ಷಕ್ಕೆ ಬಂದು ನಿಂತಿತು.

ಪ್ರಾರಂಭದಲ್ಲಿ ಉತ್ಸವ ಸಮಿತಿ ಅಧ್ಯಕ್ಷ ವಿಪುಲ್ ಜೈನ್ 1 ಲಕ್ಷದವರೆಗೂ ಕೂಗಿದರು. ಆ ಕ್ಷಣಕ್ಕೆ ಆಗಮಿಸಿದ ವೀರೇಂದ್ರ ಪಪ್ಪಿ ಒಮ್ಮೇಲೆ 1.50 ಲಕ್ಷ ಕೂಗಿದರು. ಬಳಿಕ ವಿಪುಲ್ ಜೈನ್ ಹಾಗೂ ಪಪ್ಪಿ ನಡುವೆ ಸ್ಪರ್ಧೆ ಏರ್ಪಟ್ಟು ಮೂರನೇ ಕೂಗಿಗೆ 2 ಲಕ್ಷ ಹೇಳುವ ಮೂಲಕ ‘ಭಾಗವಾಧ್ವಜ’ವನ್ನು ತಮ್ಮದಾಗಿಸಿಕೊಂಡರು.

What do you think?

-4 Points
Upvote Downvote

Written by suddionenews

Leave a Reply

Your email address will not be published. Required fields are marked *

GIPHY App Key not set. Please check settings

ಲಕ್ಷಾಂತರ ಭಕ್ತರ ನಡುವೆ ಸಾಗಿದ ಹಿಂದೂ ಮಹಾಗಣಪತಿ ವಿಸರ್ಜನಾ ಮೆರವಣಿಗೆ : ಸಂಭ್ರಮದ ಕ್ಷಣಗಳಿಗೆ ಸಾಕ್ಷಿಯಾದ ಅಪಾರ ಜನಸ್ತೋಮ

ಹಿಂದುತ್ವದ ದೃಷ್ಟಿಯಲ್ಲಿ ಸಾಗೋಣ, ಹಿಂದೂತ್ವಕ್ಕಾಗಿ  ಸೇರೋಣ ;ಆರ್ ಎಸ್‍ಎಸ್ ಕರ್ನಾಟಕ ದಕ್ಷಿಣ ಪ್ರಾಂತ ಘೋಷ್ ಪ್ರಮುಖ್ ಗಿರೀಶ್ ಹೇಳಿಕೆ