ಬೆಂಗಳೂರು: ಕಳೆದ ಕೆಲವು ದಿನಗಳಿಂದ ಗಣೇಶೋತ್ಸವ ವಿಚಾರವಾಗಿ ಈದ್ಗಾ ಮೈದಾನ ಟಾರ್ಗೆಟ್ ಆಗಿತ್ತು. ಬೆಂಗಳೂರಿನ ಚಾಮರಾಜಪೇಟೆ ಈದ್ಗಾ ಮೈದಾನ ಹಾಗೂ ಹುಬ್ಬಳ್ಳಿಯಲ್ಲಿರುವ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆ ಮಾಡಲೇಬೇಕೆಂದುಕೊಂಡಿದ್ದರು. ಇದೇ ವಿಚಾರಕ್ಕೆ ನ್ಯಾಯಲಯದ ಮೊರೆ ಹೋಗಲಾಗಿತ್ತು. ಇದೀಗ ಹೈಕೋರ್ಟ್ ನಿಂದ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆಗೆ ಗ್ರೀನ್ ಸಿಗ್ನಲ್ ಸಿಕ್ಕಿದೆ.
ಜೊತೆಗೆ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆ ಮಾಡಲು ಅನುಮತಿ ನೀಡುವ ನಿರ್ಧಾರವನ್ನು ಪಾಲಿಕೆ ಆಯುಕ್ತರುಗೆ ಬಿಟ್ಟಿದೆ. ಈಗಾಗಲೇ ಪಾಲಿಕೆಯಿಂದ ಹಿಂದೂ ಸಂಘಟನೆಗಳಿಗೆ ಮೂರು ದಿನಗಳ ಗಣೇಶ ಉತ್ಸವ ಮಾಡಲು ಅನುಮತಿ ಸಿಕ್ಕಿತ್ತು. ಅದನ್ನು ಪ್ರಶ್ನಿಸಿ ಅಂಜುಮನ್ ಸಂಸ್ಥೆ ಅರ್ಜಿ ಸಲ್ಲಿಸಿತ್ತು. ಈ ಅರ್ಜಿ ಪರಿಶೀಲಿಸಿದ ಹೈಕೋರ್ಟ್ ಇದೀಗ ಹಿಂದೂ ಸಂಘಟನೆಗಳ ಪರವಾಗಿ ಅನುಮತಿ ನೀಡಿದೆ.
ನ್ಯಾ.ಅಶೋಕ್ ಕಿಣಗಿ ಪೀಠದಲ್ಲಿ ಇಂದು ಅರ್ಜಿ ವಿಚಾರಣೆ ನಡೆದು ಅಂತಿಮವಾಗಿ ಪೀಠ ಗಣೇಶೋತ್ಸವ ಆಚರಣೆಗೆ ಅನುಮತಿ ನೀಡುವ ನಿರ್ಧಾರವನ್ನು ಆಯುಕ್ತರಿಗೆ ನೀಡಿ ಆದೇಶ ಪ್ರಕಟಿಸಿದೆ.