ಬೆಂಗಳೂರು: 2023-24ರ ಬಜೆಟ್ ನಲ್ಲಿ ಬಿಜೆಪಿ ಸರ್ಕಾರದಿಂದ ಸೂರು ಇಲ್ಲದವರಿಗೆ ಸೂರು ಒದಗಿಸುವ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಅತಿವೃಷ್ಟಿಯಿಂದ ಹಾನಿಯಾದ ಮನೆಗಳ ಪುನರ್ ನಿರ್ಮಾಣ ಮಾಡುವ ಯೋಜನೆ ಹಾಕಿಕೊಳ್ಳಲಾಗಿದೆ.
2627 ಕೋಟಿ ವೆಚ್ಚದಲ್ಲಿ ಮನೆಗಳ ಪುನರ್ ನಿರ್ಮಾಣ. ಹೊಸ 5 ಲಕ್ಷ ಮನೆಗಳ ನಿರ್ಮಾಣಕ್ಕೆ 5 ಸಾವಿರ ಕೋಟಿ. ಸರ್ಕಾರಿ ಜಾಗದಲ್ಲಿರುವ ಕೊಳಗೇರಿ ವಾಸಿಗಳಿಗೆ ಹಕ್ಕು ಪತ್ರ. 3.36 ಲಕ್ಷ ಜನರಿಗೆ ಹಕ್ಕು ಪತ್ರ ವಿತರಣೆ ವ್ಯವಸ್ಥೆ.
ಬೆಂಗಳೂರಿನಲ್ಲಿ 20 ಸಾವಿರ ಮನೆಗಳ ಹಂಚಿಕೆ. ಅಭಿವೃದ್ಧಿ ಆಕಾಂಕ್ಷಿ ತಾಲೂಕಿನಲ್ಲಿ ವಸತಿ ಯೋಜನೆಗೆ ಕ್ರಮ. ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಬಂಪರ್ ಆಫರ್. ಅಮರ್ ಜ್ಯೋತಿ ಯೋಜನೆಯಡಿ ಉಚಿತ ವಿದ್ಯುತ್. ಮಠ ಮಂದಿರಗಳ ಅಭಿವೃದ್ದಿಗೆ ಅನುದಾನ ನೀಡಲಾಗಿದೆ. 3328 ಎಕರೆ ಪ್ರದೇಶದಲ್ಲಿ 48 ಸಾವಿರ ನಿವೇಶನ ಹಂಚಿಕೆ. ‘ನಮ್ಮ ನೆಲೆ’ ಎಂಬ ಹೊಸ ಯೋಜನೆ ಘೋಷಣೆ.