ನವದೆಹಲಿ: ಇತ್ತೀಚೆಗೆ ಸಚಿವೆ ಸ್ಮೃತಿ ಇರಾನಿ ಅವರ ಸೋಷಿಯಲ್ ಮೀಡಿಯಾ ನೋಡ್ತಾ ಇದ್ರೆ ನೀವೆಲ್ಲಾ ಸ್ವಲ್ಪ ಶಾಕ್ ಆಗೋ ಅಂತ ಫೋಟೋ ಕಣ್ಣಿಗೆ ಬಿದ್ದಿರುತ್ತೆ. ಕೇಂದ್ರ ಸಚಿವೆ ಸಿಕ್ಕಾಪಟ್ಟೆ ಸಣ್ಣ ಆಗಿರುವ ಫೋಟೋ ಅದು. ಡಯೆಟ್ ಅಂತೆಲ್ಲಾ ಮಾಡಿ ಸಿಕ್ಕಾಪಟ್ಟೆ ಸ್ಲಿಮ್ ಆಗಿದ್ದಾರೆ. ಆ ಫೋಟೋ ನೀವೊಮ್ಮೆ ನೋಡಿಲ್ಲ ಅಂದ್ರೆ ನೋಡ್ಕೊಬಿಡಿ.
ಕೇಂದ್ರ ಸಚಿವೆ ಸ್ಮೃತಿ ಇರಾನಿ ಸದ್ಯ ರಾಜಕಾರಣದಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಮೋದಿ ಅವರ ಸಂಪುಟದಲ್ಲಿ ಸಚಿವೆಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸ್ಮೃತಿ ಇರಾನಿ ಈ ಮುಂಚೆ ಕಿರುತೆರೆ ನಟಿಯಾಗಿದ್ದಾಗ ಸಾಕಷ್ಟು ಜನಪ್ರಿಯತೆ ಹೊಂದಿದ್ದರು. ಇದೀಗ ಮತ್ತೆ ನಟಿಮಣಿಯಂತೆ ಕಾಣುತ್ತಿದ್ದಾರೆ.
ಅವರ ಡಯೆಟ್ ಹೇಗಿರಲಿದೆ ಎಂಬುದನ್ನು ತಿಳಿಸಿದ್ದಾರೆ. ಡೈರಿ ಫುಡ್ ತಿನ್ನೋದ್ರಿಂದ ಸಾಕಷ್ಟು ತೊಂದರೆಗಳು ಎದುರಾಗೋದು ಸಹಜ. ಸ್ಮೃತಿ ಇರಾನಿ ಈ ಆಹಾರ ಉತ್ಪನ್ನಗಳನ್ನ ಬಿಟ್ಟಿರೋದ್ರಿಂದಾನೇ ಇಷ್ಟೊಂದು ಸ್ಲಿಮ್ ಆಗಿರೋದಂತೆ. ಆ ಬಗ್ಗೆ ಅವರೇ ಸೀಕ್ರೆಟ್ ರಿವೀಲ್ ಮಾಡಿದ್ದಾರೆ.
ಕೆಲವು ತಿಂಗಳಿನಿಂದ ಗ್ಲುಟನ್ ಪದಾರ್ಥ ತಿನ್ನುವುದನ್ನ ಬಿಟ್ಟಿದ್ದೇನೆ. ಹಾಲಿನಿಂದ ತಯಾರಿಸಲಾದ ಹಲವಾರು ಪದಾರ್ಥಗಳನ್ನ ಊಟದ ಪದ್ಧತಿಯಿಂದ ಕೈ ಬಿಟ್ಟಿದ್ದೇನೆ. ಡೈರಿ ಉತ್ಪನ್ನದಿಂದ ದೇಹದಲ್ಲಿ ಕೊಬ್ಬಿನಾಂಶ ಶೇಖರಣೆಯಾಗುತ್ತೆ. ಇನ್ನು ಕೆಲವರು ಸಕ್ಕರೆ ಮಿಶ್ರಿತ ಆಹಾರ ತ್ಯಜಿಸಿ ಡಯೆಟ್ ಮಾಡುತ್ತಾರೆ. ಯಾವುದಾದರೊಂದು ರೀತಿ ಡಯೆಟ್ ಮಾಡಬಹುದು ಎಂದಿದ್ದಾರೆ.
ಒಟ್ಟಾರೆ ಕೇಂದ್ರ ಸಚಿವೆ ಇಷ್ಟೊಂದು ಸಣ್ಣ ಆಗಿರುವುದು ಎಲ್ಲರಿಗೂ ಆಶ್ಚರ್ಯ ತಂದಿದೆ. ಈಗ ಸಾಕಷ್ಟು ಮಂದಿ ಅವರ ಡಯೆಟ್ ಅನ್ನೇ ಫಾಲೋ ಮಾಡಲು ಆರಂಭಿಸುತ್ತಿದ್ದಾರೆ.