ನವದೆಹಲಿ: ಸ್ವಯಂ ಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್, ಮುಸ್ಲಿಂ ಬಗ್ಗೆ ಹೇಳಿಕೆಯೊಂದನ್ನು ನೀಡಿದ್ದರು. ದೇಶದಲ್ಲಿ ಮುಸ್ಲಿಂರು ಭಯ ಪಡುವ ಅಗತ್ಯವಿಲ್ಲ. ತಮ್ಮ ಶ್ರೇಷ್ಠತೆಯನ್ನು ಕೈಬಿಡಲಿ ಎಂದಿದ್ದರು. ಇದೀಗ ಮೋಹನ್ ಭಾಗವತ್ ಅವರ ಹೇಳಿಕೆಗೆ ಎಐಎಂಐಎಂ ಮುಖ್ಯಸ್ಥ ಅಸಾದುದ್ಧೀನ್ ಓವೈಸಿ ರಿಯಾಕ್ಟ್ ಮಾಡಿದ್ದಾರೆ.
ಭಾರತದಲ್ಲಿ ಮುಸ್ಲಿಂರು ಜೀವಿಸುವುದಕ್ಕೆ ಅನುಮತಿ ಕೊಡುವುದಕ್ಕೆ ಮೋಹನ್ ಭಾಗವತ್ ಯಾರು..? ಇದು ನಮ್ಮ ದೇಶ. ನಮಗೆ ಜೀವಿಸುವ ಹಕ್ಕು ಇದೆ. ಭಾರತ ದೇಶ ನಮ್ಮದು. ನಾವೂ ಯಾವುದೇ ಶ್ರೇಷ್ಠತೆಯ ವ್ಯಸನದಲ್ಲಿ ಬದುಕುತ್ತಿಲ್ಲ. ರಾಷ್ಟ್ರೀಯ ಸ್ವಯಂ ಸಂಘದ ಜೊತೆಗೆ ಗುರುತಿಸಿಕೊಂಡಿರುವವರೇ ನಾವೇ ಶ್ರೇಷ್ಠರು ಎಂದು ಹೇಳಿಕೊಂಡು ಬರುತ್ತಿರುವುದು. ನಿಮ್ಮಿಂದ ನಮಗೆ ದೇಶ ಪ್ರೇಮದ ಪಾಠದ ಅಗತ್ಯವಿಲ್ಲ ಎಂದು ಟ್ವೀಟ್ ಮಾಡುವ ಮೂಲಕ ಆಕ್ರೋಶ ಹೊರ ಹಾಕಿದ್ದಾರೆ.
ಇದೇ ವೇಳೆ ಪ್ರಧಾನಿ ಮೋದಿ ಅವರಿಗೆ ಪ್ರಶ್ನೆ ಕೇಳಿರುವ ಓವೈಸಿ, ಪ್ರಧಾನಿ ನರೇಂದ್ರ ಮೋದಿಯವರು ಬೇರೆ ದೇಶದ ಮುಸ್ಲಿಂರನ್ನು ತಬ್ಬಿಕೊಳ್ಳುತ್ತಾರೆ. ಆದರೆ ನಮ್ಮದೇ ದೇಶದ ಮುಸ್ಲಿಂರನ್ನು ಯಾಕೆ ಅಪ್ಪಿಕೊಳ್ಳುವುದಿಲ್ಲ. ನಾವೂ ಅಲ್ಲಾಹುವಿನಲ್ಲಿ ನಂಬಿಕೆ ಇಟ್ಟಿದ್ದೇವೆ. ಮೋಹನ್ ಭಾಗವತ್ ಅವರೇ ನೀವೂ ವಸುದೈವ ಕುಟುಂಬಕಂ ಎಂದು ಹೇಳುವ ಹಕ್ಕಿಲ್ಲ ಎಂದಿದ್ದಾರೆ.