ಬಳ್ಳಾರಿ: ನಿನ್ನೆ ಮಂಗಳೂರಿನ ಕಂಕನಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಚಲಿಸುತ್ತಿದ್ದ ಆಟೋದಲ್ಲಿ ಬಾಂಬ್ ಬ್ಲಾಸ್ಟ್ ಆಗಿತ್ತು. ಇದರ ತನಿಖೆಯನ್ನು ಪೊಲೀಸರು ಗಂಭೀರವಾಗಿ ನಡೆಸುತ್ತಿದ್ದು, ಇದೊಂದು ಉಗ್ರರು ನಡೆಸಿರುವ ಕೃತ್ಯ ಎಂದೇ ಪ್ರಾಥಮಿಕ ತನಿಖೆಯಲ್ಲಿ ಸ್ಪಷ್ಟವಾಗುತ್ತಿದೆ.
ಈ ಬಗ್ಗೆ ಸಿಎಂ ಬೊಮ್ಮಾತಿ ಅವರು ಪ್ರತಿಕ್ರಿಯೆ ನೀಡಿದ್ದು, ಇದೊಂದು ಉಗ್ಋ ಕೃತ್ಯ ಎಂಬುದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ಸ್ಪೋಟದ ಬಗ್ಗೆ ಎಲ್ಲಾ ಆಯಾಮಗಳಿಂದಲೂ ತನಿಖೆ ನಡೆಸಲಾಗುತ್ತಿದೆ. ನಕಲಿ ಐಡಿ ಕಾರ್ಡ್, ನಕಲಿ ವಿಳಾಸವನ್ನು ಬಳಸಿ ಈ ಕೃತ್ಯ ನಡೆಸಲಾಗಿದೆ. ಆ ನಕಲಿ ವಿಳಾಸ ಹುಬ್ಬಳ್ಳಿಯದ್ದಾಗಿದೆ. ಎನ್ಐಎ, ಐಬಿ ಅಧಿಕಾರಿಗಳು ಸ್ಥಳದಲ್ಲಿಯೇ ಬೀಡು ಬಿಟ್ಟಿದ್ದಾರೆ.
ಇದೊಂದು ವ್ಯವಸ್ಥಿತ ಜಾಲವಾಗಿದೆ. ಆ ಜಾಲ ಯಾವುದೆಂದು ಪತ್ತೆ ಮಾಡುತ್ತೇವೆ. ಪ್ರಕರಣದ ಆರೋಪಿಗಳು ಮಂಗಳೂರು-ಕೊಯಮತ್ತೂರಿನಲ್ಲಿ ಓಡಾಡಿಕೊಂಡು ಓಡಾಡುತ್ತಿರುವ ಸಂಖ್ಯೆ ವ್ಯಕ್ತವಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆರೋಪಿಗಳನ್ನು ಆದಷ್ಟು ಬೇಗ ವಶಕ್ಕೆ ಪಡೆಯುತ್ತಾರೆ ಎಂದಿದ್ದಾರೆ.