ಬೆಂಗಳೂರು: ಭಜರಂಗದಳ ಕಾರ್ಯಕರ್ತನಾಗಿದ್ದ ಹರ್ಷ ನಿನ್ನೆ ಕೊಲೆಯಾಗಿದ್ದಾರೆ. ಈ ಸಂಬಂಧ ಶಿವಮೊಗ್ಗದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಗಲಭೆ, ಗಲಾಟೆಗಳು ನಡೆದಿತ್ತು. ಇದೀಗ ಶಿವಮೊಗ್ಗ ಸಹಜ ಸ್ಥಿತಿಯತ್ತ ತಲುಪಿದೆ.

ಸದ್ಯ ರಾಜ್ಯದಲ್ಲಿ ಹಿಜಾಬ್ ವಿವಾದ ಕೂಡ ನಡೆಯುತ್ತಿದೆ. ಇದೇ ಬೆನ್ನಲ್ಲೇ ಇದೀಗ ಸಚಿವ ಆರ್ ಅಶೋಕ್ ಮಾತನಾಡಿದ್ದು, ಹಿಜಾಬ್ ಗಲಾಟೆಯಿಂದಲೇ ಈ ಒಂದು ಕೊಲೆ ನಡೆದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶಿವಮೊಗ್ಗದ ಘಟನೆ ನೋವಿನ ಸಂಗತಿ. ಹಿಜಾಬ್ ನಿಂದಾಗಿ ಈ ಗಲಾಟೆ ಶುರುವಾಯ್ತು. ಈ ಗಲಭೆಗೆ ಒಂದು ಕೊಲೆಯನ್ನ ಮಾಡಿದ್ದಾರೆ. ಅದು ಕೂಡ ಹಿಜಾಬ್ ಗೆ ಸಂಬಂಧವಿದೆ. ಎಸ್ಡಿಪಿಐ, ಪಿಎಫ್ಐ ಸೇರಿದಂತೆ ಹಲವು ಸಂಘಟನೆಗಳು ಆ್ಯಕ್ಟೀವ್ ಆಗಿದೆ. ಯಾವುದೇ ದೇಶದ್ರೋಹಿಯನ್ನು ಬಿಡಲ್ಲ ಮಟ್ಟ ಹಾಕ್ತೇವೆ.
ಈಗಾಗ್ಲೇ ಸಿಎಂ, ಗೃಹ ಸಚಿವರ ಜೊತೆ ಈ ಸಂಬಂಧ ಚರ್ಚೆ ಮಾಡಿದ್ದೇವೆ. ಜೊತೆಗೆ ಕೆಲವರನ್ನ ಬಂಧಿಸಿದ್ದಾರೆ. ಇನ್ನಷ್ಟು ಮಾಹಿತಿ ಕಲೆ ಹಾಕಲಾಗುತ್ತಿದೆ. ಈ ಥರ ಮತಾಂಧತೆ ಬೆಳೆಸುವವರನ್ನ ಸರ್ಕಾರ ಮಟ್ಟ ಹಾಕುತ್ತೆ ಎಂದಿದ್ದಾರೆ.

