ಬೆಂಗಳೂರು: ಇಂದು ಗೃಹ ಸಚಿವ ಆರಗ ಜ್ಞಾನೇಂದ್ರ ನೇತೃತ್ವದಲ್ಲಿ ಶರಾವತಿ ಸಂತ್ರಸ್ತರ ಸಮಸ್ಯೆಗಳ ಸಭೆ ನಡೆದಿದೆ. ಈ ಸಭೆಯಲ್ಲಿ ಸಂತ್ರಸ್ತರ ಜಮೀನು ಹಕ್ಕಿನ ಬಗ್ಗೆ ಚರ್ಚೆ ನಡೆಸಲಾಗಿದೆ. ಚರ್ಚೆಯ ಬಳಿಕ ಮಾತನಾಡಿದ, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರು, ಶರಾವತಿ ಯೋಜನೆಯಿಂದ ಭೂಮಿ ಕಳೆದುಕೊಂಡವರಿಗೆ, ಜಮೀನು ಹಕ್ಕು ವಿತರಣೆ ಮಾಡುವ ಪ್ರಕ್ರಿಯೆ ಶುರುವಾಗಿದೆ. ಶರಾವತಿ ಸಂತ್ರಸ್ತರಿಗೆ ತಾವೂ ಉಳಿಮೆ ಮಾಡುವ ಜಮೀನು ಹಕ್ಕು ನೀಡುವುದು 60 ವರ್ಷದ ಸಮಸ್ಯೆಯಾಗಿದೆ.
ಇತ್ತಿಚೆಗೆ ಕೇಂದ್ರ ಅರಣ್ಯ ಸಚಿವರನ್ನು ಭೇಟಿ ಮಾಡಿದ್ದೀವಿ. ಅವರು ಕೂಡ ಎಲ್ಲಾ ಸರ್ವೇ ಪ್ರಪೋಸಲ್ ಕಳುಹಿಸಿ ಎಂದಿದ್ದಾರೆ. ಹೀಗಾಗಿ ಪ್ರಸ್ತಾವನೆ ಸಿದ್ಧಪಡಿಸಲಾಗಿದೆ. ಶರಾವತಿ ಯೋಜನೆಗೆ ಭೂಮಿ ಕೊಟ್ಟವರಿಗೆ ಈಗ ಭೂಮಿ ಇಲ್ಲದಂತೆ ಆಗಿದೆ.
ಈಗಾಗಲೇ ಜಿಲ್ಲಾಡಳಿತ ಸರ್ವೇ ಮಾಡಿ ಪ್ರಸ್ತಾವನೆ ಸಿದ್ದ ಪಡಿಸಿದೆ. ಸುಮಾರು 9 ಸಾವಿರ ಎಕರೆ ಜಮೀನು ಹಕ್ಕು ನೀಡುವುದಕ್ಕೆ ಕೇಂದ್ರಕ್ಕೆ ಪ್ರಸ್ತಾವನೆ ಕಳುಹಿಸುತ್ತೇವೆ. ಸಂತ್ರಸ್ತರ ಸಮಸ್ಯೆ ಪರಿಹಾರ ಮಾಡೋಕೆ ಕೆಲಸ ಮಾಡುತ್ತೇವೆ ಎಂದಿದ್ದಾರೆ.