ಇಂದು ಸಂಜೆ ಡಾ. ರಾಜಶೇಖರಪ್ಪನವರಿಂದ ಉಪನ್ಯಾಸ ಕಾರ್ಯಕ್ರಮ

1 Min Read

 

ಸುದ್ದಿಒನ್, ಚಿತ್ರದುರ್ಗ, ನವೆಂಬರ್. 30 : ನಗರದ ಎಸ್.ಆರ್.ಬಿ.ಎಂ.ಎಸ್. ಬಾಲಭವನದಲ್ಲಿ (ಡಿ.ಸಿ. ಸರ್ಕಲ್, ರೋಟರಿ ಸ್ಕೂಲ್) ರೋಟರಿ ಕ್ಲಬ್ ಚಿನ್ಮೂಲಾದ್ರಿ ಚಿತ್ರದುರ್ಗ ಹಾಗೂ ಸಂಸ್ಕಾರ ಭಾರತೀ (ರಿ.) ಚಿತ್ರದುರ್ಗ ಜಿಲ್ಲಾ ಸಮಿತಿಯ ಸಂಯುಕ್ತಾಶ್ರಯದಲ್ಲಿ ನಾಡಿನ ಸುಪ್ರಸಿದ್ಧ ಇತಿಹಾಸ ಸಂಶೋಧಕರೂ, ಸಾಹಿತಿಗಳೂ ಆದ ಡಾ. ಬಿ. ರಾಜಶೇಖರಪ್ಪ ಜೀ ಯವರಿಂದ “ಭಾರತೀಯ ಸಾಹಿತ್ಯಕ್ಕೆ ಕನ್ನಡ ಸಾಹಿತ್ಯದ ಕೊಡುಗೆ”* ಎಂಬ ಮಹತ್ವಪೂರ್ಣ ವಿಷಯದ ಕುರಿತಾಗಿ ಕನ್ನಡ ರಾಜ್ಯೋತ್ಸವ ಮಾಹೆ ನವೆಂಬರ್ ಸಂಧ್ಯಾಕಾಲದ ಸುಸಂದರ್ಭದಲ್ಲಿ ಉಪನ್ಯಾಸ ಕಾರ್ಯಕ್ರಮ ನೆರವೇರಲಿದೆ.

ಘನವಿದ್ವಾಂಸರ ಪ್ರೌಢ ಉಪನ್ಯಾಸವನ್ನು ಆಲಿಸಲು ಸಕಾಲಿಕವಾಗಿ ಆಗಮಿಸಲು ಸಾಹಿತ್ಯಾಸಕ್ತರೆಲ್ಲರಿಗೂ ಹೃತ್ಪೂರ್ವಕ ಆಹ್ವಾನವನ್ನು ರೋಟರಿ ಕ್ಲಬ್ ಚಿನ್ಮೂಲಾದ್ರಿ ಅಧ್ಯಕ್ಷರು ರೋ. ಶ್ರೀಮತಿ ದಿಲ್ಷದ್ ಉನ್ನೀಸಾ, ಕಾರ್ಯದರ್ಶಿ ರೋ. ಶ್ರೀಮತಿ ಅಮೃತಾ ಸಂತೋಷ್, ನಿಕಟಪೂರ್ವ ಅಧ್ಯಕ್ಷರು ರೋ. ಮಂಜುನಾಥ್ ಭಾಗವತ್, ಸಂಸ್ಕಾರ ಭಾರತೀ (ರಿ.) ಚಿತ್ರದುರ್ಗ ಅಧ್ಯಕ್ಷರು ರೋ. ಉಮೇಶ್ ವೀರಣ್ಣ ತುಪ್ಪದ, ಪ್ರಧಾನ ಕಾರ್ಯದರ್ಶಿ ರೋ. ಶಶಿಧರ್ ರಾವ್ ಹಾಗೂ ಉಭಯ ಸಂಸ್ಥೆಗಳ ಕಾರ್ಯಕಾರಿ ಸಮಿತಿಯವರು ನೀಡಿದ್ದಾರೆ.

Share This Article
Enable Notifications OK No thanks