ಬೆಂಗಳೂರು: ಇಂದು 2022-23ರ ಕೇಂದ್ರ ಸರ್ಕಾರದ ಬಜೆಟ್ ಮಂಡನೆಯಾಗಿದೆ. ಈ ಬಜೆಟ್ ಬಗ್ಗೆ ಹಲವು ಪರ ವಿರೋಧ ಸಹಜವಾಗಿಯೇ ವ್ಯಕ್ತವಾಗಿದೆ. ರೈತ ಪರವಾಗಿ ಇಲ್ಲ ಈ ಬಜೆಟ್ ಅನ್ನೋದು ಕೆಲವರ ವಾದ. ಈ ಬಗ್ಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮಾತನಾಡಿದ್ದು, ಬರೀ ಮಾತಲ್ಲಿ ಅಲ್ಲ. ಬಜೆಟ್ ನಲ್ಲೂ ರೈತ ಪರ ಎಂದಹ ತೋರಿಸಿಕೊಟ್ಟಿದ್ದೇವೆ ಎಂದಿದ್ದಾರೆ.
ಇಂದು ಮಂಡಿಸಿರುವ ಬಜೆಟ್ ಅತ್ಯುತ್ತಮವಾಗಿದೆ. ರೈತರಿಗೆ ಇಂದು ಕೇಂದ್ರ ಸರ್ಕಾರ 1.32 ಲಕ್ಷ ಕೋಟಿ ಹಣವನ್ನ ಮೀಸಲಿಟ್ಟಿದೆ. ಸಿರಿ ಧಾನ್ಯಕ್ಕೆ ಅಂತರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ ಸಿಕ್ಕಿದೆ. ಮುಂದಿನ ವರ್ಷ ಸಿರಿಧಾನ್ಯಗಳ ಅಂತರಾಷ್ಟ್ರೀಯ ಮೇಳವನ್ನು ಆಯೋಜನೆ ಮಾಡಲಾಗುತ್ತಿದೆ.
ಬಜಟೆ್ ರೂಪದಲ್ಲೂ ನಾವುಹ ರೈತರ ಪರವಾಗಿದ್ದೇವೆ. ಕೃಷಿಯನ್ನು ಖುಷಿಯಿಂದ ಮಾಡುವಂತೆ ಪ್ರಧಾನಿ ಮೋದಿ ಮಾಡಿದ್ದಾರೆ. ನದಿ ಜೋಡಿಸುವ ಕೆಲಸಕ್ಕೂ ಕೇಂದ್ರ ಸರ್ಕಾರ ಯೋಜನೆ ರೂಪಿಸಿದೆ. ರೈಲ್ವೆ, ಸಾರಿಗೆ ಸೇರಿ ಮೂಲಭೂತ ಸೌಕರ್ಯಗಳಿಗೆ ಕೇಂದ್ರ ಸರ್ಕಾರ ಆದ್ಯತೆ ನೀಡಿದೆ ಎಂದು ಸಚಿವೆ ಶೋಭಾ ಕರಂದ್ಲಾಜೆ ಬಜೆಟ್ ಅನ್ನು ಹಾಡಿ ಹೊಗಳಿದ್ದಾರೆ.