ಡಿಸೆಂಬರ್ ನಲ್ಲಿ ಗುಜರಾತ್ ಚುನಾವಣೆ ನಡೆಯಲಿದೆ. ಎರಡು ಹಂತದಲ್ಲಿ ನಡೆಯಲಿರುವ ಚುನಾವಣೆಯ ಫಲಿತಾಂಶ ಡಿಸೆಂಬರ್ 8ಕ್ಕೆ ಹೊರಬೀಳಲಿದೆ. ಆದ್ರೆ ಅದಕ್ಕೂ ಮುನ್ನ ಗೆಲುವು ಸಾಧಿಸುವ ಲೆಕ್ಕಚಾರದಲ್ಲಿವೆ ಮೂರು ಪಕ್ಷಗಳು. ಕಾಂಗ್ರೆಸ್ ಒಂದು ರೀತಿಯ ಭರವಸೆಗಳನ್ನು ನೀಡಿದರೆ, ಎಎಪಿ ಮತ್ತೊಂದು ರೀತಿಯ ಉಚಿತ ಸೌಕರ್ಯದ ಭರವಸೆ ನೀಡುತ್ತಿದ್ದಾರೆ. ಇದೆಲ್ಲದ ನಡುವೆ ಅದೊಂದು ಕ್ಷೇತ್ರದಲ್ಲಿ ನಾವೇ ಗೆಲ್ಲುವುದು ಅಂತ ಬಿಜೆಪಿ ಕಾನ್ಫಿಡೆನ್ಸ್ ನಲ್ಲಿದೆ. ಅದಕ್ಕೆಲ್ಲಾ ಕಾರಣ ಆ ಕ್ಷೇತ್ರದ ಅಭ್ಯರ್ಥಿ.
ಪಭುಬಾ ಮಾಣೆಕ್ ಕಳೆದ 35 ವರ್ಷದಿಂದ ದ್ವಾರಕಾ ಕ್ಷೇತ್ರದಿಂದ ಒಂದು ಬಾರಿಯೂ ಸೋತಿಲ್ಲ. ಅಂದ್ರೆ ಆ ನಾಯಕನ ನಾಯಕತ್ವ ಅಲ್ಲಿನ ಎಲ್ಲಾ ಸಮುದಾಯಕ್ಕೂ ಅದೆಷ್ಟು ಒಪ್ಪಿಗೆ ಆಗಿದೆ ಎಂಬುದು ಅರ್ಥವಾಗುತ್ತದೆ. ಮೊದಲಿಗೆ 3 ವರ್ಷ ಸ್ವತಂತ್ರ್ಯ ಅಭ್ಯರ್ಥಿಯಾಗಿ ನಿಂತು ಗೆಲುವು ಕಂಡಿದ್ದರು. ಬಳಿಕ ಕಾಂಗ್ರೆಸ್ ಸೇರಿ ಅಲ್ಲಿಯೂ ಗೆದ್ದಿದ್ದರು. ಬಿಜೆಪಿಗೆ ಬಂದ ನಂತರ ಬಿಜೆಪಿಯಿಂದಾನೂ ಗೆಲು ಸಾಧಿಸುತ್ತಿದ್ದಾರೆ. ಅಂದ್ರೆ ಮಾಣೆಕ್ ನನ್ನು ಸೋಲಲು ಅಲ್ಲಿನ ಜನ ಬಿಡುತ್ತಿಲ್ಲ. ಹೀಗಾಗಿ ದ್ವಾರಕ ಕ್ಷೇತ್ರಕ್ಕೆ ಮಾಣೆಕ್ ಅವರನ್ನೇ ಅಭ್ಯರ್ಥಿಯಾಗಿ ಬಿಜೆಪಿ ನಿಲ್ಲಿಸುತ್ತಿದೆ.
ಈ ಬಗ್ಗೆ ಮಾತನಾಡಿರುವ ಮಾಣೆಕ್, ಎಲ್ಲಾ ಸಮುದಾಯದವರ ಜೊತೆಗೂ ನನ್ನ ಬಾಂಧವ್ಯ ಚೆನ್ನಾಗಿದೆ. ಕಳೆದ ಎಂಟು ಅವಧಿಗಳಿಂದ ದ್ವಾರಕ ಕ್ಷೇತ್ರದಲ್ಲಿ ಗೆಲುವು ಸಾಧಿಸಿಕೊಂಡು ಬಂದಿದ್ದೇನೆ. ಈಗ ಬಿಜೆಪಿಯಲ್ಲಿದ್ದೇನೆ. ಈ ಬಾರಿಯೂ ಗೆಲ್ಲುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.