50ಕ್ಕೂ ಹೆಚ್ಚು ಮಕ್ಕಳ ತಂದೆ ಮತ್ತೊಂದು ಸಂಗಾತಿ ಹುಡುಕುತ್ತಿದ್ದಾನಂತೆ..!

ಇಂಥ ಆಶ್ಚರ್ಯಕರ ಸಂಗತಿಗಳನ್ನು ಆಗಾಗ ಕೇಳುತ್ತಲೆ ಇರುತ್ತೀವಿ. ಕೆಲವೊಮ್ಮೆ ನಂಬುವುದಕ್ಕೆ ಆಗದೆ ಹೋದರು ಅದು ಸತ್ಯವೇ ಆಗಿರುತ್ತದೆ. ಈತನಿಗೆ ಈಗಾಗಲೇ 50ಕ್ಕೂ ಹೆಚ್ಚು ಮಕ್ಕಳಿದ್ದಾರಂತೆ. ಆದರು ಮತ್ತಷ್ಟು ಮಕ್ಕಳು ಬೇಕಂತೆ. ಅದಕ್ಕೆ ಅಂತ ಹೊಸ ಸಂಗಾತಿಯನ್ನು ಹುಡುಕುತ್ತಿದ್ದಾರೆ.

50 ಮಕ್ಕಳಿದ್ದಾರೆಂದರೆ ವಯಸ್ಸು ತುಂಬಾ ಹೆಚ್ಚೇನು ಅಲ್ಲ. ಜಸ್ಟ್ 30 ಅಷ್ಟೆ ಆಗಿರುವುದು. ಈತನ ಹೆಸರು ಕೈಲ್ ಕಾರ್ಡಿ ಅಂತ. ಕ್ಯಾಲಿಫೋರ್ನಿಯಾದ ನಿವಾಸಿ. ಇಷ್ಟು ದಿನ ತನ್ನ ವೀರ್ಯ ದಾನ ಮಾಡಿ ತಂದೆಯಾಗುತ್ತಿದ್ದ ಕೈಲ್ ಇದೀಗ ಸ್ವಂತ ಸಂಗಾತಿಯನ್ನು ಬಯಸುತ್ತಿದ್ದಾನೆ. ಆದರೆ ಆತನಿಗೆ ಮೆಚ್ಚುವ ಸಂಗಾತಿ ಸಿಗುತ್ತಿಲ್ಲ. ಈ ಬಗ್ಗೆ ಆತನೇ ಹೇಳುವಂತೆ ನನ್ನನ್ನು ಅರ್ಥ ಮಾಡಿಕೊಳ್ಳುವ ಒಪ್ಪಿ ನಡೆಯುವ ಸಂಗಾತಿ ಸಿಗುತ್ತಿಲ್ಲ ಎಂದಿದ್ದಾರೆ.

ವಿಶ್ವದಾದ್ಯಂತ ಪ್ರವಾಸದಲ್ಲಿದ್ದೇನೆ. ನನ್ನ ಮಕ್ಕಳನ್ನು ಭೇಟಿಯಾಗಿ, ಫೋಟೋ ತೆಗೆಸಿಕೊಳ್ಳುತ್ತೇನೆ. ಅದು ತುಂಬಾ ಸಂತೋಷ ಕೊಡುತ್ತದೆ. ಮಕ್ಕಳನ್ನು ನೋಡುವುದು ಖುಷಿ ನೀಡುತ್ತೆ ಎಂದಿದ್ದಾರೆ. ಇನ್ನು ಕೈಲ್ ವೀರ್ಯ ದಾನ ಮಾಡಲು ಶುರು ಮಾಡಿ ಎಂಟು ವರ್ಷಗಳಾಗಿದೆ.

Share This Article
Leave a Comment

Leave a Reply

Your email address will not be published. Required fields are marked *