ಚಿತ್ರದುರ್ಗದ ಸ್ತಬ್ಧ ಚಿತ್ರಕ್ಕೆ ತೃತೀಯ ಬಹುಮಾನ

suddionenews
1 Min Read

ಚಿತ್ರದುರ್ಗ, ಸುದ್ದಿಒನ್, (ಅ.07) : ನಾಡಹಬ್ಬ ಮೈಸೂರು ದಸರಾಗೆ ಅದ್ದೂರಿ ತೆರೆ ಬಿದ್ದಿದೆ. ನಿನ್ನೆ ನಡೆದ ಜಂಬೂ ಸವಾರಿಯಲ್ಲಿ ರಾಜ್ಯದ ವಿವಿಧೆಡೆಯ ಸ್ತಬ್ಧಚಿತ್ರಗಳು ಪ್ರವಾಸಿಗರನ್ನು ಮನಸೂರೆಗೊಳಿಸಿದ್ದವು.

ಮೆರವಣಿಗೆಯಲ್ಲಿ ಭಾಗವಹಿಸಿದ್ದ ಸ್ತಬ್ಧಚಿತ್ರಗಳಿಗೆ ಮೈಸೂರು ದಸರಾ ಉತ್ಸವ 2022, ಸ್ಥಬ್ದ ಚಿತ್ರ ಉಪಸಮಿತಿಯು ಬಹುಮಾನ ಘೋಷಣೆ ಮಾಡಿದ್ದು ಈ ಬಾರಿ ಚಿತ್ರದುರ್ಗ ಜಿಲ್ಲೆಯಿಂದ ಪ್ರತಿನಿಧಿಸಿದ್ದ ಸ್ತಬ್ಧಚಿತ್ರಕ್ಕೆ ಮೂರನೇ ಬಹುಮಾನ ದೊರಕಿದೆ‌.

ಎರಡು ವರ್ಷಗಳ ಕರೋನಾದಿಂದ ಕಳೆಗುಂದಿದ್ದ  ವಿಶ್ವ ವಿಖ್ಯಾತ ನಾಡಹಬ್ಬ ದಸರಾ ಈ ಬಾರಿ ಬಹಳ ಆಕರ್ಷಣೀಯವಾಗಿತ್ತು ಮತ್ತು ವೀಕ್ಷಿಸಲು ಜನ ಸಾಗರವೇ ಹರಿದು ಬಂದಿತ್ತು.
ಮೈಸೂರು ದಸರಾದಲ್ಲಿ ಪ್ರಮುಖ ಆಕರ್ಷಣೆ ಜಂಬೂ ಸವಾರಿ, ಜನಪದ ಕಲಾತಂಡಗಳ ಮೆರವಣಿಗೆ ಅಷ್ಟೇ ಪ್ರಾಮುಖ್ಯತೆ ಎಂದರೆ ಸ್ತಬ್ಧ ಚಿತ್ರಗಳ ಮೆರವಣಿಗೆ.

ಚಿತ್ರದುರ್ಗ ಜಿಲ್ಲೆಯ ಸ್ಥಬ್ಧಚಿತ್ರದ ಮುಂಭಾಗದಲ್ಲಿ ವಾಣಿವಿಲಾಸ ಜಲಾಶಯದ ನಿರ್ಮಾಣಕ್ಕೆ ಕಾರಣರಾದ ಕೆಂಪನಂಜಮಣಿ ವಾಣಿವಿಲಾಸ ರಾಣಿಯವರು, ಸರ್.ಎಂ ವಿಶ್ವೇಶ್ವರಯ್ಯ ನವರ ಭಾವಚಿತ್ರ ಮತ್ತು ಕಹಳೆ ಊದುತ್ತಿರುವ ಕಾವಲುಗಾರ, ಹಿಂಭಾಗದಲ್ಲಿ ಒನಕೆ ಓಬವ್ವ, ಅಶ್ವರೂಢರಾದ ರಾಜವೀರ ಮದಕರಿ ನಾಯಕ, ದೀಪಸ್ಥಂಭವನ್ನೊಳಗಿಂಡಿತ್ತು. ಈ ಸ್ಥಬ್ದ ಚಿತ್ರಕ್ಕೆ ಮೂರನೇ ಬಹುಮಾನ ಬಂದಿರುವುದು ಕೋಟೆ ನಾಡಿನ ಜನರ ಸಂತಸಕ್ಕೆ ಪಾರವೇ ಇಲ್ಲದಂತಾಗಿದೆ.ಇತ್ತೀಚೆಗಷ್ಟೇ ಸುದೀರ್ಘ 89 ವರ್ಷಗಳ ನಂತರ ಜಲಾಶಯ ತುಂಬಿದ ಖುಷಿಯಲ್ಲಿದ್ದ  ಜನತೆಗೆ ಈ ಬಾರಿ ಜಿಲ್ಲೆಯಿಂದ ಪ್ರತಿನಿಧಿಸಿದ್ದ ಸ್ತಬ್ಧ ಚಿತ್ರವು ಮೂರನೇ ಬಹುಮಾನವನ್ನು ಹೊತ್ತು ತಂದಿರುವುದು ಜಿಲ್ಲೆಯ ಜನರು ಮತ್ತಷ್ಟು ಸಂತಸ ಪಡುವಂತಾಗಿದೆ.

ವರದಿ : ಅರ್ಜಿತ್ ಗೋವಿಂಧನ್, ಮೊ : 9741738979

Share This Article
Leave a Comment

Leave a Reply

Your email address will not be published. Required fields are marked *