ಬೆಂಗಳೂರು: ಈ ಬಾರಿಯ ಚುನಾವಣೆಯಲ್ಲಿ ಹಳೆ ಮೈಸೂರು ಭಾಗವೇ ಟಾರ್ಗೆಟ್. ಜೆಡಿಎಸ್ ಭದ್ರಕೋಟೆಯನ್ನು ಹೊಡೆದು ತಮ್ಮ ಅಡ್ಡ ಮಾಡಿಕೊಳ್ಳಲು ಕಾಂಗ್ರೆಸ್ ಮತ್ತು ಬಿಜೆಪಿ ಎರಡು ಪಕ್ಷಗಳು ಹೊಂಚು ಹಾಕಿದೆ. ಆದ್ರೆ ಅಷ್ಟು ಸುಲಭವಲ್ಲ ಅಂತ ಕೂಡ ಗೊತ್ತಿದೆ. ಅದಕ್ಕಾಗಿ ಕಾಂಗ್ರೆಸ್ ರಮ್ಯಾ ಅವರನ್ನು ನಿಲ್ಲಿಸುವ ಯೋಜನೆಯಲ್ಲಿದೆ.
ಹಳೆ ಮೈಸೂರಿನ ಭಾಗದಲ್ಲಿ ಜೆಡಿಎಸ್ ಮಣಿಸಲು ಸಿದ್ದರಾಮಯ್ಯ ಹೊಸ ಫಾರ್ಮುಲಾ ಸಿದ್ಧ ಮಾಡಿದ್ದಾರೆ. ಅದನ್ನು ಈಗಾಗಲೇ ಹೈಕಮಾಂಡ್ ಮುಂದೆ ಇಟ್ಟಿದ್ದು, ರಾಮನಗರದಿಂದ ಡಿಕೆ ಸುರೇಶ್ ಅವರನ್ನು ಕಣಕ್ಕಿಳಿಸಿದರೆ, ಚನ್ನಪಟ್ಟಣದಿಂದ ನಟಿ, ಮಾಜಿ ಸಂಸದೆ ರಮ್ಯಾ ಅವರನ್ನು ಕಣಕ್ಕಿಳಿಸುವ ಯೋಜನೆ ಅದಾಗಿದೆ.
ಚನ್ನಪಟ್ಟಣದಿಂದ ರಮ್ಯಾ ಅವರನ್ನು ಕಣಕ್ಕೆ ಇಳಿಸಿದರೆ ಮಂಡ್ಯ ಭಾಗದಲ್ಲೂ ಪ್ರಭಾವ ಬೀರುತ್ತೆ ಎಂಬುದು ಸಿದ್ದರಾಮಯ್ಯ ಅವರ ಅಭಿಪ್ರಾಯವಾಗಿದೆ. ಆದ್ರೆ ರಮ್ಯಾ ಅವರು ಸಂಸದೆಯಾಗಿದ್ದಾಗ ಮಂಡ್ಯ ಕಡೆ ಹೆಚ್ಚಾಗಿ ತಿರುಗಿಯೂ ನೋಡುತ್ತಿರಲಿಲ್ಲ ಎಂಬ ಮಾತುಗಳು ಇರುವುದರಿಂದ ಜೆಡಿಎಸ್ ವೋಟುಗಳನ್ನು ಹೊಡೆಯುವುದು ಕಷ್ಟಸಾಧ್ಯ.