ಧಾರವಾಡ: ಕಳ್ಳರಿಗೆ ಕಳ್ಳತನ ಮಾಡುವುದಕ್ಕೆ ದೇವಸ್ಥಾನವಾದರೂ ಸರಿ ಅಲ್ಲಿ ದೇವರ ಭಯವಿರುವುದಿಲ್ಲ. ಇನ್ನು ಸಚಿವರಿಗೆ ಸಂಬಂಧಿಸಿದ ಬ್ಯಾಂಕ್ ಆದರೂ ಸರಿ ಕಳ್ಳರಿಗೆ ಕದಿಯುವುದೊಂದೆ ಕೆಲಸವಾಗಿರುತ್ತದೆ. ಸಚಿವೆ ಶಶಿಕಲಾ ಜೊಲ್ಲೆ ಅವರ ಒಡೆತನದ ಬ್ಯಾಂಕ್ ಗೆ ಕಳ್ಳರು ಕನ್ನ ಹಾಕಿದ್ದಾರೆ. ಜನವರಿ 1ರ ರಾತ್ರಿ ಕಳ್ಳತನ ನಡೆದಿದೆ. ಬ್ಯಾಂಕ್ ನಲ್ಲಿ 20 ಲಕ್ಷ ಮೌಲ್ಯದ ನಗದು ಹಾಗೂ 40 ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನವಾಗಿದೆ.
ಧಾರವಾಡದ ಕೋರ್ಟ್ ವೃತ್ತದ ಬಳಿ ಬೀರೇಶ್ವರ ಬ್ಯಾಂಕ್ ಇದೆ. ಇದು ಸಚಿವೆ ಶಶಿಕಲಾ ಜೊಲ್ಲೆ ಹಾಗೂ ಸಂಸದ ಅಣ್ಣಾಸಾಹೇಬ್ ಅವೆ ಒಡೆತನದ ಬ್ಯಾಂಕ್ ನಲ್ಲಿ ಕಳ್ಳತನವಾಗಿದೆ. ಖದೀಮರು ತಮ್ಮ ಗುರುತು ಸಿಗದಂತೆ ಮಾಡುವುದಕ್ಕೆ ಬ್ಯಾಂಕ್ ನಲ್ಲಿದ್ದ ಸಿಸಿಟಿವಿಯನ್ನು ಹಾಳು ಮಾಡಿದ್ದಾರೆ. ಜೊತೆಗೆ ಬ್ಯಾಂಕ್ ನಲ್ಲಿದ್ದ ಹಲವು ದಾಖಲೆಗಳನ್ನು ಹಾಳು ಮಾಡಿ ಬಂದಿದ್ದಾರೆ.