ಹಿರಿಯೂರು : ಮನೆಯಲ್ಲಿ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಹಿರಿಯೂರು ಗ್ರಾಮಾಂತರ ಪೋಲಿಸರು ಬಂಧಿಸಿ 25,950 ರೂಗಳನ್ನು ವಶಪಡಿಸಿಕೊಂಡಿದ್ದಾರೆ.
ತಾಲ್ಲೂಕಿನ ಮೇಟಿಕುರ್ಕೆ ಭೋವಿ ಕಾಲೋನಿಯ ಬಸವರಾಜ (20) ಬಧಿತ ಆರೋಪಿ. ಮೇಟಿಕುರ್ಕೆ ಗ್ರಾಮದ ಕೆ.ಎಂ. ಶಿವಕುಮಾರ್ ಎಂಬುವವರ ಮನೆಯಲ್ಲಿ ನವೆಂಬರ್ 12 ಹಾಗೂ 23 ರಂದು ಒಟ್ಟು 1,02,000 ರೂಪಾಯಿ ಕಳ್ಳತನ ಮಾಡಿದ್ದ.
ಈ ಕುರಿತು ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣವನ್ನು ಕೈಗೆತ್ತಿಕೊಂಡ ಪೋಲಿಸರು ಆರೋಪಿಯನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಆರೋಪಿಯನ್ನು ಪತ್ತೆ ಹಚ್ಚಲು ಸಹಕರಿಸಿದ ಡಿವೈಎಸ್ಪಿ ರೋಷರ್ ಜಮೀರ್, ವೃತ್ತ ನಿರೀಕ್ಷಕ ಆನಂದ್ ನೇತೃತ್ವದಲ್ಲಿ ಪಿಎಸ್ಐ ಪರಮೇಶ್, ಹಾಗೂ ಶಶಿಕಲಾ ಮತ್ತು ಸಿಬ್ಬಂದಿಯ ಕಾರ್ಯವನ್ನು ಚಿತ್ರದುರ್ಗ ಅಧೀಕ್ಷಕರಾದ ಜಿ ರಾಧಿಕಾ ಶ್ಲಾಘಿಸಿರುತ್ತಾರೆ.