ದಾವಣಗೆರೆ: ಅದೊಂದು ಹಾಸ್ಯಾಸ್ಪದ. ಅವರು ಬಚಾವ್ ಆಗೋದಕ್ಕೆ, ಅವರಿಗೆ ಲೆಕ್ಕ ಕೊಡಿ ಅಂತ ಹೇಳಿ ಭಕ್ತರು ಕೇಳ್ತಾ ಇದ್ದರು. ಅವರು ಏನು ಮಾಡಿದರು ನಮ್ಮನ್ನ ಟಾರ್ಗೆಟ್ ಮಾಡಿದರು. ಸ್ವಾಮಿಗಳೇ ಹೋಗಿ ಬಿಟ್ಟರೆ ಪ್ರಶ್ನೆ ಕೇಳೋದು ಯಾರು..? ಪೀಠ ಅಂದರೆ ಸೆಂಟರ್. ಇವರು ಸಾಕಷ್ಟು ಏನೇನೋ ಮಾಡಿದ್ದಾರೆ. ಈಗ ಭಕ್ತರು ಲೆಕ್ಕ ಕೊಡಿ ಅಂತ ಕೇಳಿದಾಗ ಕೊಡೋದಕ್ಕೆ ರೆಡಿ ಇಲ್ಲ ಅಂತ ಆಡಳಿತ ಮಂಡಳಿ ವಿರುದ್ಧವೇ ವಚನಾನಂದ ಶ್ರೀಗಳು ಆಕ್ರೋಶ ಹೊರ ಹಾಕಿದ್ದಾರೆ.
ಹಿಂಗೆನೆ ಹಿಂದೊಬ್ಬ ಸ್ವಾಮೀಜಿ ಮಾಡಿದ್ದರು. ವ್ಯವಸ್ಥಿತವಾಗಿ ಷಡ್ಯಂತ್ರ ಮಾಡ್ತಾ ಇದ್ದಾರೆ. ಸ್ವಾಮಿಗಳಿಗೆ ಬಹಳ ಮುಖ್ಯ ಅಂದ್ರೆ ಕೈ ಬಹಳ ಅಚ್ಚುಕಟ್ಟಾಗಿ ಇರಬೇಕು. ಅದಕ್ಕಿಂತ ರೀತಿ ನೀತಿ ಬೇರೆ ಯಾವ್ದು ಇಲ್ಲ. ಯಾರಾದ್ರೂ ದಾನಿಗಳು ಹಣ ಕೊಟ್ಟರು ಅಲ್ಲಿನೆ ದಾನ ಮಾಡಿ ಬರ್ತೇನೆ. ಹೋಗಿ ಬೇಕಾದ್ರೆ ಚೆಕ್ ಮಾಡಿಕೊಳ್ಳಿ. ಆ 12 ಜನಗಳು ಟ್ರಸ್ಟಿಗಳಲ್ಲ. ಕಾನೂನುಬಾಹಿರ ಅವರು ಮಾಡಿದ್ದಾರೆ.

ನಮಗೊಂದು ನೋಟೀಸ್ ಕೊಡಬೇಕು ಅಲ್ವಾ. ಸಂಸ್ಥಾಪಕ ಧರ್ಮದರ್ಶಿ ಅವರೇ ಎಷ್ಟು ಅವ್ಯವಹಾರ ಮಾಡಿದ್ದಾರೆ ಅನ್ನೋದನ್ನ ಹೇಳಿದ್ದಾರೆ. ಪ್ರಧಾನ ಧರ್ಮದರ್ಶಿ, ಇನ್ನೊಬ್ಬ ಧರ್ಮದರ್ಶಿನೆ ಅನ್ಯಾಯ ಮಾಡಿರೋದು ಎಂಬುದನ್ನ ಹೇಳಿದ್ದಾರೆ. 2008 ನೇ ಇಸವಿಯಲ್ಲಿ 8 ಕೋಟಿ ರೂಪಾಯಿ ಹಣ ಬಂತು. ಅದರಲ್ಲಿ ಎರಡೂವರೆ ಕೋಟಿ ಖರ್ಚಾಯ್ತು, ಐದು ಕೋಟಿ ರೂಪಾತಿ ತಿಂದ್ರು ಅಂತ ಹೇಳಿದ್ದಾರೆ. ಅದಕ್ಕೆ ಲೆಕ್ಕ ಕೇಳಿದ್ದಕ್ಕೆ ಪ್ರಧಾನ ಕಾರ್ಯದರ್ಶಿ ನಮ್ಮ ಜೊತೆಗೆ ಮಾತಾಡ್ಲಿಲ್ಲ ಅಂತ ಹೇಳಿದ್ದಾರೆ. ಫೋರ್ಜರಿ ಮಾಡಿದ್ದಾರೆ ಅಂತ ಅವರೇ ಹೇಳಿದ್ದಾರೆ ಎಂದು ತಿಳಿಸಿದ್ದಾರೆ.












