9 ತಿಂಗಳು ಪಿಜ್ಹಾ, ಹುರಿದ ಕೋಳಿ ಮಾಂಸ ತಿಂದು ಬದುಕುತ್ತಿದ್ದರು ; ಹೇಗಿತ್ತು ಜೀವನ..?

suddionenews
1 Min Read

ಕಡೆಗೂ ಇಡೀ ಭಾರತೀಯರೆಲ್ಲ ನಿರೀಕ್ಷೆ ಮಾಡುತ್ತಿದ್ದ ದಿನ ಬಂದೇ ಬಿಟ್ಟಿದೆ. ಸುನೀತಾ ವಿಲಿಯಮ್ಸ್ ಭೂಮಿಗೆ ಬರೋದಕ್ಕೆ ಕ್ಷಣಗಣನೆ ಶುರುವಾಗಿದೆ. ಕೇವಲ 8 ದಿನಕ್ಕೆ ಎಂದು ಬಾಹ್ಯಾಕಾಶಕ್ಕೆ ಹೋದದ್ದು, ಆದರೆ ಒಂಭತ್ತು ತಿಂಗಳು ಅಲ್ಲಿಯೇ ಉಳಿದುಕೊಳ್ಳಬೇಕಾದ ಪರಿಸ್ಥಿತಿ ಎದುರಾಯ್ತು. ಆದರೆ ಈ ಒಂಭತ್ತು ತಿಂಗಳು ಬಾಹ್ಯಾಕಾಶದಲ್ಲಿ ಏನು ತಿಂದರು ಎಂಬ ಪ್ರಶ್ನೆ ಎದುರಾಗಿತ್ತು. ಅದಕ್ಕೆ ಉತ್ತರ ಇಲ್ಲಿದೆ.

ದಿ ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿರುವ ಪ್ರಕಾರ, ನಾಸಾ ಗಗನಯಾತ್ರಿಗಳು ಬಾಹ್ಯಾಕಾಶ ನಿಲ್ದಾಣದಲ್ಲಿ ಪಿಜ್ಜಾ, ಹುರಿದ ಕೋಳಿಮಾಂಸ, ಸೀಗಡಿ ಕಾಕ್ಟೈಲ್ ಸೇವಿಸುತ್ತಿದ್ದರಂತೆ. ಅವರು ತಿನ್ನುವುದಕ್ಕೆ ಹಲವು ರೀತಿಯ ಆಹಾರಗಳನ್ನು ತೆಗೆದುಕೊಂಡು ಹೋಗಿದ್ದರಂತೆ. ಜೊತೆಗೆ ಪ್ರೋಟೀನ್ ಸೇರಿದಂತೆ ಇತರೆ ಮಾತ್ರೆಗಳನ್ನು ತೆಗೆದುಕೊಂಡು ಹೋಗಿದ್ದರಂತೆ. ನಾಸಾ ಬಿಡುಗಡೆ ಮಾಡಿದ ಚಿತ್ರಗಳಲ್ಲಿ ಕೆಲವು ಆಹಾರ ಉತ್ಪನ್ನಗಳನ್ನು ತೋರಿಸಲಾಗಿದೆ. ಸೆಪ್ಟೆಂಬರ್ 9ರಂದು ಇಬ್ಬರು ಗಗನಯಾತ್ರಿಗಳು ಆಹಾರ ಸೇವಿಸುತ್ತಿರುವುದು ಕೂಡ ಕಂಡು ಬಂದಿತ್ತು.

ಹೋಗುವಾಗಲೇ ಹಣ್ಣುಗಳನ್ನು ತೆಗೆದುಕೊಂಡು ಹೋಗಿದ್ದರು. ಮೂರು ತಿಂಗಳ ಬಳಿಕ ಅವು ಮುಗಿಯುತ್ತವೆ. ಪ್ಯಾಕ್ ಮಾಡಿದ ಹಣ್ಣು, ಬೇಯಿಸಿದ ಮಾಂಸ, ಮೊಟ್ಟೆಗಳನ್ನು ತೆಗೆದುಕೊಂಡು ಹೋಗಿರುತ್ತಾರೆ. ಬಾಹ್ಯಾಕಾಶದಲ್ಲಿ ಶುದ್ಧ ನೀರಿನ ಟ್ಯಾಂಕ್ ನಿಂದ ಸೂಪ್ ಗಳು, ಸ್ಟ್ಯೂಗಳು ಮತ್ತು ಶಾಖರೋಧ ಪಾತ್ರೆಗಳನ್ನು ಪೂರೈಸಲಾಗುತ್ತದೆ. ಹೀಗಾಗಿ ಸ್ವಲ್ಪ ದಿನದ ಮಟ್ಟಿಗೆ ತೆಗೆದುಕೊಂಡು ಹೋಗಿದ್ದ ಆಹಾರವನ್ನ ತಿಂದು ಜೀವಿಸಿದರು. ಅದು ಖಾಲಿಯಾದ ದಿನದಿಂದ ಪ್ರೋಟೀನ್ ಮಾತ್ರೆಗಳನ್ನೇ ತಿಂದು ಬದುಕುತ್ತಿದ್ದಾರೆ. ಇದರಿಂದ ತೂಕವೂ ಸಿಕ್ಕಾಪಟ್ಟೆ ಇಳಿಕೆಯಾಗಿದೆ. ಸದ್ಯ ಭೂಮಿಗೆ ಬರುತ್ತಿರುವ ಸುನೀತಾ ವಿಲಿಯಮ್ಸ್ ಅವರನ್ನು ಮಗುವಿನಂತೆ ನೋಡಿಕೊಳ್ಳಬೇಕಾಗಿದೆ.

Share This Article
Leave a Comment

Leave a Reply

Your email address will not be published. Required fields are marked *