ಚಿಕ್ಕಮಗಳೂರು: ಕಾಡಾನೆ ದಾಳಿಯಿಂದಾಗಿ ಮಹಿಳೆ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಶವವಿಟ್ಟು ಪ್ರತಿಭಟನೆ ನಡೆಸುತ್ತಿದ್ದರು. ಆ ಪ್ರತಿಭಟನೆ ವೇಳೆ ಮೂಡಿಗೆರೆ ಶಾಸಕ ಎಂ ಪಿ ಕುಮಾರಸ್ವಾಮಿ ಅವರ ಬಟ್ಟೆಯನ್ನೆಲ್ಲ ಹರಿದು ಹಾಕಿದ್ದರು. ಈ ಸಂಬಂಧ ಮಾತನಾಡಿರುವ ಶಾಸಕ ಕುಮಾರಸ್ವಾಮಿ, ಹುಚ್ಚು ನಾಯಿಯ ರೀತಿ ಓಡಿಸಿಕೊಂಡು ಬಂದು ಹೊಡೆದಿದ್ದಾರೆ ಎಂದಿದ್ದಾರೆ.
ಆ ಜಾಗದಲ್ಲಿ ತುಂಬಾ ಜನ ದೊಣ್ಣೆ ಹಿಡಿದುಕೊಂಡು ನಿಂತಿದ್ದರು. ನಂಗೆ ಚಪ್ಪಲಿಯಲ್ಲಿ ಹೊಡೆದರು. ಒಳ್ಳೆ ಕಳ್ಳನಿಗೆ ಹೊಡೆದಂತೆ ಹುಚ್ಚು ನಾಯಿಗೆ ಹೊಡೆದಂತೆ ಹೊಡೆದಿದ್ದಾರೆ. ಅಲ್ಲಿಂದ ಹೇಗೋ ತಪ್ಪಿಸಿಕೊಂಡು ಓಡಿ ಬಂದು ಕಾರಿನಲ್ಲಿ ಕುಳಿತೇ. ಬಳಿಕ ಪೊಲೀಸರ ಜೀಪಿನ ಮೇಲೂ ಕಲ್ಲು ತೂರಾಟ ನಡೆಸಿದರು.
ಕಾಡಾನೆ ದಾಳಿಯಿಂದ ಮಾಡಿದ್ದಲ್ಲ. ಇದು ರಾಜಕೀಯ ದಾಳಿ ಎಂಬುದು ಅರ್ಥವಾಗುತ್ತಿದೆ. ಬಟ್ಟೆ ಹರಿದರೆ ಹರಿಯಲಿ. ಇನ್ನು ನೂರು ಬಟ್ಟೆ ತೆಗೆದುಕೊಳ್ಳಬಹುದು. ಆದ್ರೆ ಈ ಘಟನೆಯಲ್ಲಿ ಕಣ್ಣೋ, ಕೈ ಕಾಲೋ ಹೋಗಿದ್ದರೆ ಏನು ಮಾಡಬೇಕಿತ್ತು. ನನಗೆ ಮಾತ್ರವಲ್ಲ ನನ್ನ ಜೊತೆಗಿದ್ದ ಪೊಲೀಸರ ಮೇಲೂ ದಾಳಿಯಾಗಿದೆ. ರಾಜಕೀಯವಾಗಿ ನಾನು ಚುನಾವಣೆಗೆ ನಿಲ್ಲಬಾರದು ಎಂದು ವ್ಯವಸ್ಥಿತ ಹಲ್ಲೆ ನಡೆಸಿದ್ದಾರೆ. ಚುನಾವಣೆಗೆ ನಿಲ್ಲಲೇಬಾರದು ಎಂದು ಸಂಚು ರೂಪಿಸಿದ್ದಾರೆ. ನಾನು ಒಂದೇ ಒಂದು ಮಾತನ್ನು ಆಡಿಲ್ಲ. ಬಹಳ ಸಂಚು ರೂಪಿಸಿ ಈ ರೀತಿ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.