ಬೆಂಗಳೂರು: ಮಾಜಿ ಸಿಎಂ ಎಸ್ ಎಂ ಕೃಷ್ಣ ಅವರು ಈಗಾಗಲೇ ರಾಜಕೀಯ ನಿವೃತ್ತಿ ಪಡೆಯುತ್ತಿರುವುದಾಗಿ ಘೋಷಣೆ ಮಾಡಿದ್ದಾರೆ. ಇದೀಗ ಮತ್ತೊಮ್ಮೆ ಅದನ್ನು ಸ್ಪಷ್ಟಪಡಿಸಿದ್ದಾರೆ. 90 ವರ್ಷಕ್ಕೆ 50ರಂತೆ ವರ್ತಿಸೋದಕ್ಕೆ ಆಗುವುದಿಲ್ಲ. 50 ವರ್ಷ ಇದ್ದಾಗ ಓಡಾಡಿದೆ. ಈಗ ವಯಸ್ಸಿಗೆ ಬೆಲೆ ಕೊಟ್ಟು ಹೆಚ್ಚು ಕಾಣಿಸಿಕೊಳ್ಳುತ್ತಿಲ್ಲ ಎಂದರೆ, ವಯಸ್ಸಿನ ಬಗ್ಗೆ ಎಲ್ಲರಿಗೂ ಅರಿವಿರಬೇಕಾಗುತ್ತದೆ ಎಂದಿದ್ದಾರೆ.
ನಾನೇ ಸ್ವಯಂ ಪ್ರೇರಿತರಾಗಿ ನಿವೃತ್ತಿಯಾಗುತ್ತಿದ್ದೇನೆ. ನಾನೇ ನಿವೃತ್ತಿಯಾಗುತ್ತಿರುವಾಗ ಪಕ್ಷ ಕಡೆಗಣನೆ ಮಾಡುತ್ತಿದೆ ಎಂದು ಹೇಳಲು ಆಗುವುದಿಲ್ಲ. ಈ ಬಗ್ಗೆ ಹೈಕಮಾಂಡ್ ಬಗ್ಗೆ ಹೈಕಮಾಂಡ್ ಗಮನಕ್ಕೆ ತರುವ ಪ್ರಶ್ನೆಯೇ ಇಲ್ಲ. ಅವರೇನು ನನಗೆ ಪೆನ್ಶನ್ ಕೊಡಲ್ಲ. ಹೀಗಾಗಿ ಅವರ ಗಮನಕ್ಕೆ ತರುವ ಅವಶ್ಯಕತೆ ಇಲ್ಲ ಎಂದಿದ್ದಾರೆ.
ಹಳೆ ಮೈಸೂರು ಭಾಗ ಈ ಬಾರಿ ಬಿಜೆಪಿಯ ಟಾರ್ಗೆಟ್ ಆಗಿದೆ. ಅದಕ್ಕೆಂದೆ ಎಸ್ ಎಂ ಕೃಷ್ಣ ಅವರ ನೇತೃತ್ವವನ್ನು ಬಿಜೆಪಿ ಬಯಸಿತ್ತು. ಇದೀಗ ಆ ಬಗ್ಗೆ ಎಸ್ ಎಂ ಕೃಷ್ಣ ಅವರೇ ಮಾತನಾಡಿದ್ದು, ಆ ಪ್ರಯತ್ನ ಮುಂದಿನ ದಿನಗಳಲ್ಲಿ ಎಷ್ಟರಮಟ್ಟಿಗೆ ವರ್ಕೌಟ್ ಆಗುತ್ತೆ ಎಂಬುದನ್ನು ಜಾದು ನೋಡುತ್ತೇನೆ. ಯಾವ ವಿಚಾರ ಸಂಘಟನೆಗೆ ಪೂರಕ ಎಂಬುದನ್ನು ಜವಬ್ದಾರಿ ಸ್ಥಾನದಲ್ಲಿ ಇರುವವರು ಯೋಚನೆ ಮಾಡಬೇಕು. ಪಕ್ಷ ಸಂಘಟನೆ ಬಗ್ಗೆ ನಾನು ಮೇಲೆ ಬಿದ್ದು ಸಲಹೆ ಕೊಡುವುದಕ್ಕೆ ಹೋಗಲ್ಲ ಎಂದಿದ್ದಾರೆ.