ಲೋಕಸಭಾ ಚುನಾವಣೆಗೆ ಇನ್ನು ಕೆಲವೇ ತಿಂಗಳುಗಳು ಬಾಕಿ ಇದೆ. ಆದ್ರೆ ಈಗಾಗಲೇ ತಯಾರಿ, ರೂಪು, ರೇಷೆ ಶುರುವಾಗಿದೆ. ಅದರಲ್ಲೂ ಕಾಂಗ್ರೆಸ್ ಹೆಚ್ಚಿನ ಮುತುವರ್ಜಿವಹಿಸಿದ್ದು, ಬಿಜೆಪಿ ಮತ್ತು ಜೆಡಿಎಸ್ ನಲ್ಲಿದ್ದವರನ್ನು ಕಾಂಗ್ರೆಸ್ ಗೆ ತರುವ ಪ್ಲ್ಯಾನ್ ನಡೀತಾ ಇದೆ. ಇದರ ನಡುವೆ ಬಿಜೆಪಿ ಮತ್ತು ಜೆಡಿಎಸ್ ನಿಂದ ಕಾಂಗ್ರೆಸ್ ಗೆ ಬರುವುದಕ್ಕೂ ಹಲವರು ರೆಡಿಯಾಗಿದ್ದಾರೆ. ಯಾರೆಲ್ಲಾ ಬರಬಹುದು ಎಂಬ ಮಾಹಿತಿ ಇಲ್ಲಿದೆ.
ಈಗಾಗಲೇ ಬಿಜೆಪಿ ಶಾಸಕ ಎಸ್ ಟಿ ಸೋಮಶೇಕರ್ ಬೆಂಬಲಿಗರು ಕಾಂಗ್ರೆಸ್ ಗೆ ಸೇರ್ಪಡೆಯಾಗಿದ್ದಾರೆ. ಎಸ್ ಟಿ ಸೋಮಶೇಖರ್ ಕೂಡ ಬರುವ ಸಾಧ್ಯತೆ ಇದೆ ಎನ್ನಲಾಗಿದೆ. ಯಾಕಂದ್ರೆ ಎಸ್ ಟಿ ಸೋಮಶೇಖರ್ ಇತ್ತಿಚಿನ ನಡವಳಿಕೆ ಅದೇ ರೀತಿ ಇದೆ.
ಭೈರತಿ ಬಸವರಾಜ್, ಇವರು ಸಿಎಂ ಸಿದ್ದರಾಮಯ್ಯ ಆಪ್ತರಾಗಿದ್ದವರು. ಆದ್ರೆ 2019ರಲ್ಲಿ ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿ ಸೇರಿದ್ದರು. ಈಗ ಮತ್ತೆ ವಾಪಾಸ್ ಆಗುವ ಸಾಧ್ಯತೆ ಇದೆ.
ಶಿವರಾಮ್ ಹೆಬ್ಬಾರ್ ಕೂಡ ಬಹುತೇಕ ಕಾಂಗ್ರೆಸ್ ಗೆ ಸೇರುವುದು ಖಚಿತವಾಗಿದೆ. ಈಗಾಗಲೇ ಒಂದು ಸುತ್ತಿನ ಮಾತುಕತೆಯೂ ನಡೆದಿದೆ ಎನ್ನಲಾಗಿದೆ. ಶಿವರಾಮ್ ಹೆಬ್ಬಾರ್ ಕೂಡ 2019ರಲ್ಲಿ ಬಿಜೆಪಿ ಪಕ್ಷ ಸೇರಿದ್ದರು.
ಸೇರಿದಂತೆ ಕೆ ಸುಧಾಕರ್, ನೆಹರು ಓಲೇಕಾರ್, ದಾಸರಹಳ್ಳಿ ಮಂಜುನಾಥ್, ಸಿ ಎಸ್ ಪುಟ್ಟರಾಜು, ಸೇರ್ಪಡೆಯಾಗಲಿದ್ದಾರೆ ಎಂಬ ವಿಚಾರ ರಾಜಕೀಯ ವಲಯದಲ್ಲಿ ಚರ್ಚೆಯಾಗ್ತಾ ಇದೆ.