ವಿಜಯಪುರ: ಸರ್ಕಾರಿ ಶಾಲೆಗಳು ಮಕ್ಕಳು ಬಾರದೆ ಎಷ್ಟೋ ಕಡೆ ಮುಚ್ಚಿ ಹೋಗುತ್ತಿವೆ. ಇಂಥ ಸಂದರ್ಭದಲ್ಲಿ ಇರುವಷ್ಟು ಶಾಲೆಗಳಿಗಾದರೂ ಮೂಲಭೂತ ಸೌಕರ್ಯ ಒದಗಿಸಿಕೊಡುವತ್ತ ಸರ್ಕಾರ ಗಮನ ಹರಿಸದೆ ಇರುವುದು ಬೇಸರದ ಸಂಗತಿಯಾಗಿದೆ. ವಿಜಯಪುರ ಜಿಲ್ಲೆಯಲ್ಲೂ ಶಾಲೆಯೊಂದರಲ್ಲಿ ಮೇಲ್ಛಾವಣಿಯೇ ಇಲ್ಲದಂತಾಗಿದೆ. ಅದರಲ್ಲಿಯೇ ಮಕ್ಕಳು ಪಾಠ ಕೇಳುತ್ತಿದ್ದಾರೆ.
ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಗುಂಡಕರಜಗಿ ಗ್ರಾಮದಲ್ಲಿ ಪಾಳು ಬಿದ್ದ ಶಾಲೆಯಲ್ಲಿ ಪಾಠ ನಡೆಯುತ್ತಿದೆ. ಜಿಲ್ಲೆಯಾದ್ಯಂತ ಜಿಟಿಜಿಟಿ ಮಳೆಯೂ ಇದರ. ಮಳೆಯಿಂದಾಗಿ ಶಾಲೆ ಸೋರುತ್ತಿದೆ. ಆ ಮಳೆ ಹನಿಯಲ್ಲಿಯೇ ಸೋರುವ ಕೊಠಡಿಯಲ್ಲಿಯೇ ಕುಳಿತು ಮಕ್ಕಳಿಗೆ ಪಾಠ ಮಾಡಲಾಗುತ್ತಿದೆ.
ಸೋರುತ್ತಿರುವ ಶಾಲೆಯಲ್ಲೇ ಪಾಠ ಕೇಳಬೇಕಾದ ಅನಿವಾರ್ಯತೆ ಇದೆ. ಅಧಿಕಾರುಗಳು ಕನಿಷ್ಠ ಪಕ್ಷ ಮೇಲ್ಚಾವಣಿಯೂ ರಿಪೇರಿ ಮಾಡಿಸಿಲ್ಲ. ಮಕ್ಕಳು ಕೂಡ ಮಳೆಯ ನೀರಿನಲ್ಲೇ ಕುಳಿತು ಪಾಠ ಕೇಳುತ್ತಿದ್ದಾರೆ. ಗ್ರಾಮದ ಸರ್ಕಾರಿ ಕನ್ನಡ ಗಂಡು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯ ದುಸ್ಥಿತಿ ಇದಾಗಿದೆ. ಕಳೆದ ಹಲವು ವರ್ಷಗಳಿಂದ ಈ ಶಾಲಾ ಕಟ್ಟಡ ಹಾಗೂ ಮೆಲ್ಚಾವಣಿ ಹಾಳಾಗಿದೆ. ಮಕ್ಕಳು ಜೀವ ಭಯದಲ್ಲಿ, ನಿಂತ ನೀರಲ್ಲೇ ಪಾಠ ಕೇಳುವಂತಾಗಿದೆ. ಈ ಶಾಲೆಯಲ್ಲಿ ಮಕ್ಕಳೇನು ಕಡಿಮೆ ಇಲ್ಲ 250 ಮಕ್ಕಳಿದ್ದಾರೆ. ಆದರೂ ಶಾಲೆಯ ದುಸ್ಥಿತಿ ಈ ರೀತಿಯಾಗಿದೆ