ಚಿತ್ರದುರ್ಗ: ಈಗಿನ ಮಕ್ಕಳ ಬುದ್ದಿವಂತಿಕೆ ಎಷ್ಡಿರುತ್ತೆ ಅಂದ್ರೆ ಪೊಲೀಸರಿಗೂ ಶಾಕ್ ಆಗಬೇಕು ಆ ರೀತಿ ಕೆಲವೊಂದು ಸಲ ಐಡಿಯಾಗಳನ್ನ ಮಾಡುತ್ತಾರೆ. ಈಗ ಚಿತ್ರದುರ್ಗದಲ್ಲೂ ಆಗಿದ್ದು ಅದೆ. ಇತ್ತೀಚೆಗಷ್ಟೇ ಇಬ್ಬರು ವಿದ್ಯಾರ್ಥಿಗಳು ಕಿಡ್ನ್ಯಾಪ್ ಆಗಿದ್ದ ಕಥೆಗೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಪೊಲೀಸರೇ ಶಾಕ್ ಆಗಿದ್ದಾರೆ.
ಇಬ್ಬರು ವಿದ್ಯಾರ್ಥಿಗಳು ಎಸ್ ಎಲ್ ವಿ ಶಾಲೆಯಲ್ಲಿ 5ನೇ ತರಗತಿ ಓದುತ್ತಿದ್ದರು. ಇದ್ದಕ್ಕಿದ್ದ ಹಾಗೇ ಶಾಲೆಗೆ ಹೋಗದೆ ಕಥೆಯೊಂದನ್ನ ಕಟ್ಟಿದ್ದರು. ಆ ಕಥೆ ಹೇಗಿತ್ತು ಎಂದರೆ ಯಾವ ಸಿನಿನಾಗೂ ಕಡಿಮೆ ಇರಲಿಲ್ಲ. ಓಮಿನಿ ಕಾರಿನಲ್ಲಿ ಬಂದವರು ನಮ್ಮಿಬ್ಬರನ್ನ ಕಿಡ್ನ್ಯಾಪ್ ಮಾಡಿದರು. ಮುಖಕ್ಕೆ ಸ್ಪ್ರೇ ಮಾಡಿ ಊರಿನ ಕ್ರಾಸ್ ಬಳಿ ಬಿಟ್ಟು ಹೋದರು ಎಂದು ಹೇಳಿದರು.
ಐದನೇ ತರಗತಿ ಮಕ್ಕಳು ಬೇರೆ. ಮಕ್ಕಳ ಕಳ್ಳರೇನಾದರೂ ಚಿತ್ರದುರ್ಗಕ್ಕೆ ಬಂದರಾ ಎಂದು ಎಲ್ಲರು ಗಾಬರಿಯಾದರು. ಶಾಲಾ ಶಿಕ್ಷಕರು, ಪೊಲೀಸರು ಗಾಬರಿಯಾದರು. ಬಳಿಕ ಅಪಹರಣವಾದ ಮಕ್ಕಳಿಂದಾನೇ ತನಿಖೆಯನ್ನು ಶುರು ಮಾಡಿದರು. ತನಿಖೆಯ ವೇಳೆ ಹೊರ ಬಂದ ಸತ್ಯ ಕೇಳಿ ಪೊಲೀಸರಿಗೆ ನಗು ತಡೆಯೋದಕ್ಕೆ ಆಗಿಲ್ಲ. ತಮ್ಮ ಬಾಲ್ಯದಲ್ಲಿ ಹೀಗೆಲ್ಲಾ ಯಾರೂ ಮಾಡಲಿಲ್ಲ ಅಂತ ಅವರಿಗೆ ಅನ್ನಿಸಿರಬೇಕು. ಅಷ್ಟು ಸೀರಿಯಸ್ ಆದ ಕಾರಣವಾಗಿತ್ತು ಮಕ್ಕಳ ಕಿಡ್ನ್ಯಾಪ್ ಪ್ರಕರಣ. ತನಿಖೆ ನಡೆಸಿದ ಡಿವೈಎಸ್ಪಿ ಶಿವಕುಮಾರ್, ಸಿಪಿಐ ಗುಡ್ಡಪ್ಪ, ಪಿಎಸ್ಐ ಬಾಹುಬಲಿ ಶಾಕ್ ಆಗಿದ್ದಾರೆ.
ಶಾಲೆಯಲ್ಲಿ ಟೀಚರ್ಸ್ ಇಡೀ ಕ್ಲಾಸ್ ಗೆ ಹೋಂ ವರ್ಕ್ ಕೊಟ್ಟಿದ್ದರು. ಆದರೆ ಈ ಕಿಡ್ನ್ಯಾಪ್ ಎಂದು ನಾಟಕವಾಡಿದ ಮಕ್ಕಳು ಹೋಂ ವರ್ಕ್ ಮಾಡಿರಲಿಲ್ಲ. ಶಾಲೆಯಲ್ಲಿ ಶಿಕ್ಷಕರು ಹೊಡೆಯುತ್ತಾರೆಂದು ಹೆದರಿ ಕಿಡ್ನ್ಯಾಪ್ ಆದ ಕಥೆ ಕಟ್ಟಿದ್ದರು. ಈ ಕಿಡ್ನ್ಯಾಪ್ ಕೇಸ್ ಸಂಬಂಧ ಅಬ್ಬಿನಹೊಳೆ ಠಾಣಾ ವ್ಯಾಪ್ತಿಯಲ್ಲಿ ದೂರು ಕೂಡ ದಾಖಲಾಗಿತ್ತು.