ತುಮಕೂರು: ಅಯೋಧ್ಯೆಯ ರಾಮಮಂದಿರ ಉದ್ಘಾಟನೆಗೆ ಕ್ಷಣಗಣನೆ ಶುರುವಾಗಿದೆ. 22ರಂದು ಅದ್ದೂರಿ ಕಾರ್ಯಕ್ರಮ ನಡೆಯಲಿದೆ. ಪ್ರಧಾನಿ ಮೋದಿ ಅವರು ಈಗಾಗಲೇ ಉಪವಾಸ ಕೈಗೊಂಡಿದ್ದಾರೆ. ಇದೀಗ ಸಹಕಾರಿ ಸಚಿವ ಕೆ ಎನ್ ರಾಜಣ್ಣ ಅಯೋಧ್ಯೆಯ ಬಗ್ಗೆ ಮಾತನಾಡಿದ್ದು, ಅಂದು ಯಾವ ರೀತಿಯ ಫೀಲ್ ಇತ್ತು ಎಂಬುದನ್ನು ತಿಳಿಸಿದ್ದಾರೆ.
ತುಮಕೂರಿನಲ್ಲಿ ಮಾತನಾಡಿದ ಸಚಿವ ರಾಜಣ್ಣ, ನಾವೂ ನಮ್ಮೂರಿನ ದೇವಸ್ಥಾನಕ್ಕೆ ಹೋದರೆ ಅಲ್ಲೊಂದು ವೈಬ್ರೇಷನ್ ಇರುತ್ತದೆ. ಭಕ್ತಿ ತುಂಬಿ ಬರುತ್ತದೆ. ಆದರೆ ಅಲ್ಲಿ ನನಗೇನು ಅನ್ನಿಸಲೇ ಇಲ್ಲ. ಟೂರಿಂಗ್ ಟಾಕೀಸ್ ನಲ್ಲಿ ಗೊಂಬೆ ಇಟ್ಟಿದ್ದಾರೆ ಎಂಬ ಫೀಲ್ ಬಂತು. ಬಾಬ್ರಿ ಮಸೀದಿ ಬೀಳಿಸಿದ್ದಾಗ ಅಲ್ಲಿಗೆ ಹೋಗಿದ್ದೆ. ಎರಡು ಗೊಂಬೆಯಿಟ್ಟು ಇದೇ ರಾಮ ಎಂದು ಹೇಳಿದ್ದರು. ಈಗ ಏನು ಮಾಡಿದ್ದಾರೋ ಗೊತ್ತಿಲ್ಲ. ಹೋದಾಗ ನೋಡಬೇಕು ಎಂದಿದ್ದಾರೆ.
ಈಗೆಲ್ಲಾ ಶ್ರೀರಾಮನ ದೇವಸ್ಥಾನ ಕಟ್ಟಿಸುತ್ತಿದ್ದಾರೆ ಅಲ್ಲಿ. ಶ್ರೀರಾಮ ಎಲ್ಲಾ ದೇವರನ್ನು ಆಶೀರ್ವದಿಸುವ ದೇವರು. ಅದಕ್ಕೋಸ್ಕರನೇ ರಾಮರಾಜ್ಯದ ಕಲ್ಪನೆ ಬಂದಿದ್ದು. ಈಗ ಬಿಜೆಪಿ ರಾಮನೋ, ಮೋದಿ ಶ್ರೀರಾಮನೋ ಎಂಬುದನ್ನು ಮುಂದೆ ನೋಡೋಣಾ. ನಮ್ಮೂರಲ್ಲೂ ನೂರಾರು ವರ್ಷ ಇತಿಹಾಸವಿರುವ ಪಾವಿತ್ರ್ಯವಾಗಿರುವ ಶ್ರೀರಾಮನ ದೇವಸ್ಥಾಗಳಿವೆ. ಆದರೆ ಅದನ್ನೆಲ್ಲಾ ಬಿಟ್ಟು ಈಗ ಅದನ್ನೆಲ್ಲಾ ಬಿಟ್ಟು ಚುನಾವಣೆಗೋಸ್ಕರ ದೇವಸ್ಥಾನಗಳನ್ನು ಕಟ್ಟಿಸಿ, ಜನರಿಗೆ ಮೋಸ ಮಾಡುತ್ತಿದ್ದಾರೆ. ಜನರ ಭಾವನೆಗಳನ್ನು, ಎಲ್ಲವನ್ನು ಕೇಳುತ್ತಾರೆಂದು ಕೆಟ್ಟ ದಾರಿಗೆ ತೆಗೆದುಕೊಂಡು ಹೋಗಬಾರದು ಎಂದಿದ್ದಾರೆ.