ಪರಿಸರದ ಬಗ್ಗೆ ಜನತೆಯಲ್ಲಿ ಇನ್ನೂ ಜಾಗೃತಿ ಮೂಡಿಲ್ಲ : ಬಿ.ಕೆ.ರಹಮತ್‍ವುಲ್ಲಾ ವಿಷಾದ

Facebook
Twitter
Telegram
WhatsApp

 

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, (ಜೂ.04) : ಮರ-ಗಿಡಗಳನ್ನು ಕಡಿಯುವುದರಿಂದ ಉಸಿರಾಟಕ್ಕೆ ಶುದ್ದ ಗಾಳಿ ಸಿಗುವುದಿಲ್ಲ. ಮುಂದಿನ ಪೀಳಿಗೆಗೆ ಹಸಿರನ್ನು ಉಳಿಸಿ ಬೆಳೆಸಬೇಕಿದೆ ಎಂದು ಹಿರಿಯ ನ್ಯಾಯವಾದಿ ಹಾಗೂ ಚಿನ್ಮೂಲಾದ್ರಿ ಸಾಹಿತ್ಯ ವೇದಿಕೆ ಗೌರವಾಧ್ಯಕ್ಷ ಬಿ.ಕೆ.ರಹಮತ್‍ವುಲ್ಲಾ ಮನವಿ ಮಾಡಿದರು.

ಚಿನ್ಮೂಲಾದ್ರಿ ಸಾಹಿತ್ಯ ವೇದಿಕೆ ಮತ್ತು ಶರಣ ಸಾಹಿತ್ಯ ಪರಿಷತ್ ಸಹಯೋಗದೊಂದಿಗೆ ಪತ್ರಕರ್ತರ ಭವನದಲ್ಲಿ ಭಾನುವಾರ ನಡೆದ ಪರಿಸರ ದಿನಾಚರಣೆ, ತಿಂಗಳ ವಿಶೇಷ ವ್ಯಕ್ತಿಯ ಪರಿಚಯ, ಲಾಂಛನ ಲೋಕಾರ್ಪಣೆ, ನೂತನ ಪದಾಧಿಕಾರಿಗಳ ಪ್ರತಿಜ್ಞಾನ ವಿಧಿ ಸ್ವೀಕಾರ, ಕವಿಗೋಷ್ಟಿಯನ್ನು ಉದ್ಗಾಟಿಸಿ ಮಾತನಾಡಿದರು.

ವಾಹನ, ಪ್ಲಾಸ್ಟಿಕ್ ಬಳಕೆ ಹಾಗೂ ಜನಸಂಖ್ಯೆ ಹೆಚ್ಚಾದಂತೆಲ್ಲಾ ಪರಿಸರಕ್ಕೆ ಧಕ್ಕೆಯಾಗುತ್ತದೆ. 1973 ರಿಂದ ಪ್ರತಿ ವರ್ಷವೂ ಪರಿಸರ ದಿನಾಚರಣೆಯನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಆದರೆ ಪರಿಸರದ ಬಗ್ಗೆ ಜನತೆಯಲ್ಲಿ ಜಾಗೃತಿ ಇನ್ನು ಮೂಡಿಲ್ಲ ಎಂದು ವಿಷಾಧಿಸಿದರು.

ಕನ್ನಡ ಸಾಹಿತ್ಯದ ಕುರಿತು ಎಲ್ಲರೂ ಆಸಕ್ತಿ ವಹಿಸಬೇಕು. ಗಣಿಗಾರಿಕೆಯಿಂದ ಪರಿಸರಕ್ಕೆ ಹಾನಿಯಾಗುತ್ತದೆ ಎನ್ನುವುದನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿದೆಯಾದರೂ ಗಣಿಗಾರಿಕೆ ಇನ್ನು ನಿರಂತರವಾಗಿ ನಡೆಯುತ್ತಿದೆ ಎಂದರು.

ಪರಿಸರವಾದಿ ಡಾ.ಹೆಚ್.ಕೆ.ಸ್ವಾಮಿ ತಾವೇ ತಯಾರಿಸಿದ ಕೆಲವು ಸ್ವದೇಶಿ ವಸ್ತುಗಳನ್ನು ಪ್ರದರ್ಶಿಸಿ ಮಾತನಾಡುತ್ತ ರಾಷ್ಟ್ರಪಿತ ಮಹಾತ್ಮಾಗಾಂಧಿಜಿಯ ಸರಳತೆಯನ್ನು ಎಲ್ಲರೂ ಮೈಗೂಡಿಸಿಕೊಳ್ಳಬೇಕು. ಚರಕ ಮತ್ತು ಖಾದಿ ಎಂದರೆ ಅವರಿಗೆ ಅಚ್ಚುಮೆಚ್ಚು. ಚರಕದಿಂದ ಮನೆಯಲ್ಲಿಯೇ ಕುಳಿತು ಹತ್ತಿಯಿಂದ ನೂಲು ತೆಗೆಯಬಹುದು.

ಮಕ್ಕಳಿಗೆ ಕೈಗೆ ಚರಕವನ್ನು ಕೊಡುವ ಬದಲು ಮೊಬೈಲ್‍ಗಳನ್ನು ನೀಡಲಾಗುತ್ತಿದೆ. ಟೈಲರಿಂಗ್, ಕಸೂತಿ ಕೈಕೆಲಸ ಕಲಿತರೆ ಜೀವನದಲ್ಲಿ ಸ್ವಾವಲಂಭಿಗಳಾಗಬಹುದು. ಜಂಕ್ ಫುಡ್‍ನಿಂದ ಮಕ್ಕಳನ್ನು ಸಾಧ್ಯವಾದಷ್ಟು ದೂರವಿರಿಸಿ ಪರಿಸರ ಉಳಿಸುವ ಕುರಿತು ಅರಿವು ಮೂಡಿಸಬೇಕಿದೆ ಎಂದು ಹೇಳಿದರು.

ರೈತ ಕೃಷಿಗೆ ಬಳಸುವ ನೇಗಿಲು ಪರಿಸರ ಸ್ನೇಹಿ. ಹಣ ಮತ್ತು ಸಮಯಕ್ಕೆ ಬೆಲೆ ಕೊಡುವುದನ್ನು ಪ್ರತಿಯೊಬ್ಬರು ಕಲಿಯಬೇಕು. ಮಕ್ಕಳಿಗೆ ದುಬಾರಿ ವಸ್ತುಗಳನ್ನು ಕೊಡಿಸುವ ಬದಲು ಪೋಷಕರು ಪರಿಸರ ಸ್ನೇಹಿ ಆಟಿಕೆಗಳನ್ನು ನೀಡಬೇಕು. ಪರಿಸರ ಗೀತೆ, ಗಾಯನಗಳು ಹೆಚ್ಚಾಗಬೇಕು ಎಂದು ಸಲಹೆ ನೀಡಿದರು.

ಟಾರ್ಗೆಟ್ ಟೆನ್ ಥೌಸೆಂಡ್ ಸಂಸ್ಥಾಪಕ, ಪರಿಸರ ವಾದಿ ಸಿದ್ದರಾಜು ಮಾತನಾಡಿ ಯಾಂತ್ರಿಕ ಜೀವನದಲ್ಲಿ ಪ್ರತಿಯೊಬ್ಬರಿಗೂ ರಕ್ತದೊತ್ತಡ, ಸಕ್ಕರೆ ಕಾಯಿದೆ ಸರ್ವೆ ಸಾಮಾನ್ಯವಾಗಿದೆ. ಮಾನಸಿಕ ಒತ್ತಡ ಜಾಸ್ತಿಯಾಗಿ ದೈಹಿಕ ಶ್ರಮ ಕಡಿಮೆಯಾಗುತ್ತಿರುವುದು ಇದಕ್ಕೆ ಕಾರಣ. ಐಷಾರಾಮಿ ಜೀವನಕ್ಕೆ ಆಸೆ ಪಟ್ಟರೆ ಒತ್ತಡಕ್ಕೆ ಒಳಗಾಗಬೇಕಾಗುತ್ತದೆ. ರಕ್ತ ಹಾಗೂ ಆರೋಗ್ಯ ಶುದ್ದವಾಗಿರಬೇಕಾದರೆ ಶುದ್ದ ಗಾಳಿ ಮುಖ್ಯ. ಅದಕ್ಕಾಗಿ ಪ್ರತಿಯೊಬ್ಬರು ತಮ್ಮ ತಮ್ಮ ಮನೆಗಳ ಮುಂದೆ ಒಂದೊಂದು ಗಿಡ ನೆಟ್ಟು ನೀರುಣಿಸಿ ಪೋಷಿಸಿ ದೊಡ್ಡ ಮರವನ್ನಾಗಿ ಬೆಳೆಸುವುದೇ ಪರಿಸರಕ್ಕೆ ನೀಡುವ ಬಹುದೊಡ್ಡ ಕೊಡುಗೆ ಎಂದು ತಿಳಿಸಿದರು.

ಅರಳಿ, ಆಲದ ಮರಗಳನ್ನು ನೆಡುವುದಕ್ಕಿಂತ ಮನೆಗಳ ಮುಂದೆ ಹೊಂಗೆ ಮರವನ್ನು ಬೆಳಿಸಿ ಶುದ್ದವಾದ ಗಾಳಿ ದೊರಕುತ್ತದೆ. ಆಸ್ಪತ್ರೆ, ಮೆಡಿಕಲ್ ಸ್ಟೋರ್‍ಗಳಿಂದ ದೂರವಿರಬೇಕಾದರೆ ಗಿಡ-ಮರಗಳನ್ನು ಹೆಚ್ಚು ಬೆಳೆಸಬೇಕು. ಗಾಳಿ, ಬೆಳಕು, ನೀರು ಶುದ್ದವಾಗಿರಬೇಕಾದರೆ ಮಕ್ಕಳಲ್ಲಿ ಪರಿಸರದ ಮಹತ್ವವನ್ನು ತಿಳಿಸಿ. ಟಾರ್ಗೆಟ್ ಟೆನ್‍ಥೌಸೆಂಡ್ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಕಳೆದ ಏಳು ವರ್ಷಗಳಿಂದಲೂ ನಗರ ಹಾಗೂ ಸುತ್ತಮುತ್ತಲಿನಲ್ಲಿ ಪ್ರತಿ ವರ್ಷವೂ ಹತ್ತು ಸಾವಿರ ಗಿಡಗಳನ್ನು ನೆಟ್ಟು ಪೋಷಿಸುತ್ತಿದ್ದೇವೆಂದು ಹೇಳಿದರು.

ಚಿನ್ಮೂಲಾದ್ರಿ ಸಾಹಿತ್ಯ ವೇದಿಕೆ ನೂತನ ಅಧ್ಯಕ್ಷ ಡಾ.ಎಸ್.ಹೆಚ್.ಶಫಿವುಲ್ಲಾ(ಕುಟೀಶ) ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಡಾ.ರಾಜ್‍ಕುಮಾರ್ ವೇದಿಕೆ ಅಧ್ಯಕ್ಷ ಪರಶುರಾಮ್ ಗೊರಪ್ಪರ್ ವೇದಿಕೆಯಲ್ಲಿದ್ದರು. ರೇಣುಕಾ ಪ್ರಕಾಶನ ಪ್ರಾಸ್ತಾವಿಕವಾಗಿ ಮಾತನಾಡಿದರು.

ತಿಂಗಳ ವಿಶೇಷ ವ್ಯಕ್ತಿ ನ್ಯಾಯವಾದಿ ಬಿ.ಕೆ.ರಹಮತ್‍ವುಲ್ಲಾರವರ ಕುರಿತು ಅನೇಕು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
ಸತ್ಯಪ್ರಭ ವಸಂತಕುಮಾರ್, ಸುಮ ರಾಜಶೇಖರ್, ಶಿವರುದ್ರಪ್ಪ ಪಂಡರಹಳ್ಳಿ, ಮಹಮದ್ ಸಾದತ್, ತಿಪ್ಪೀರಮ್ಮ ಸಕಲಾಪುರದಹಟ್ಟಿ, ಮೆಹಬೂಬಿ, ಶೋಭ ಮಲ್ಲಿಕಾರ್ಜುನ್, ಜಯಪ್ರಕಾಶ್ ಇನ್ನು ಅನೇಕರು ಕವನಗಳನ್ನು ವಾಚಿಸಿದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಮೇಕದಾಟು ಅಣೆಕಟ್ಟು ನಿರ್ಮಾಣ ಕಾವೇರಿ ನದಿ ನೀರು ಸಮಸ್ಯೆಗೆ ಪರಿಹಾರ : ಸಚಿವ ಕೆ.ಹೆಚ್.ಮುನಿಯಪ್ಪ

  ಚಿತ್ರದುರ್ಗ, ಸೆಪ್ಟೆಂಬರ್, 23 : ರಾಜ್ಯ ಸರ್ಕಾರ ಕಾವೇರಿ ಪ್ರಾಧಿಕಾರದ ಆದೇಶದಂತೆ ಪ್ರತಿ ವರ್ಷ 177  ಟಿಎಂಸಿ ನೀರು ತಮಿಳುನಾಡಿಗೆ ನೀಡಬೇಕು. ಆದರೆ ಕಳೆದ ವರ್ಷ 600 ಟಿಎಂಸಿ ನೀರು ವೃಥಾ ಹರಿದು

ಕಾವೇರಿ ಕಿಚ್ಚು : ಚಿತ್ರದುರ್ಗದಲ್ಲಿ ಕರವೇ ಪ್ರವೀಣ್‍ಕುಮಾರ್ ಶೆಟ್ಟಿ ಬಣ ಪ್ರತಿಭಟನೆ

  ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್.23  : ತಮಿಳುನಾಡಿಗೆ ಕಾವೇರಿ ನೀರು ಬಿಡುವ ಹಾಗೂ ಕಾವೇರಿ ನದಿ ಪ್ರಾಧಿಕಾರದ ಸಭೆಯಲ್ಲಿ ತೆಗೆದುಕೊಂಡಿರುವ ನಿರ್ಣಯದ ವಿರುದ್ದ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್‍ಕುಮಾರ್ ಶೆಟ್ಟಿ ಬಣದ ಕಾರ್ಯಕರ್ತರು ಶನಿವಾರ

ಗೃಹರಕ್ಷಕ ದಳದ ಜಿಲ್ಲಾ ಕಮಾಂಡೆಂಟ್ ಶ್ರೀಮತಿ ಸಿ.ಕೆ. ಸಂಧ್ಯಾರವರಿಗೆ ಮುಖ್ಯಮಂತ್ರಿಗಳ ಚಿನ್ನದ ಪದಕ ಪ್ರಧಾನ

ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್.23 : ಉತ್ತಮ ಸೇವೆಗಾಗಿ ಜಿಲ್ಲಾ ಗೃಹ ರಕ್ಷಕ ದಳದ ಕಮಾಂಡೆಂಟ್ ಸಿ.ಕೆ ಸಂದ್ಯಾರವರಿಗೆ ಬೆಂಗಳೂರಿನ ಜಯನಗರದ  ಮುಂಢ್ಕರ್ ಅಗ್ನಿಶಾಮಕ  ಅಕಾಡೆಮಿ ಸಂಭಾಗಣದಲ್ಲಿ ಗೃಹ ಸಚಿವರಾದ ಪರಮೇಶ್ವರ್‍ರವರು ಮುಖ್ಯ ಮಂತ್ರಿಗಳ ಚಿನ್ನದ

error: Content is protected !!