Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಜ್ಞಾನ ಸಂಪತ್ತಿಗಿಂತ ಮಿಗಿಲಾದುದು ಮತ್ತೊಂದಿಲ್ಲ : ಉಪ ಕುಲಪತಿ ಡಾ.ಬಿ.ಡಿ.ಕುಂಬಾರ

Facebook
Twitter
Telegram
WhatsApp

 

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಡಿಸೆಂಬರ್.21 : ವಿಜ್ಞಾನ ತಂತ್ರಜ್ಞಾನದಲ್ಲಿ ಜಗತ್ತು ಬೆಳೆಯುತ್ತಿರುವುದರಿಂದ ಮಾಹಿತಿ, ಸಂವಹನ ಕೌಶಲ್ಯ, ತಂತ್ರಜ್ಞಾನ ಕಂಡುಕೊಳ್ಳದಿದ್ದರೆ ಉತ್ತಮ ಶಿಕ್ಷಕರುಗಳಾಗಲು ಸಾಧ್ಯವಿಲ್ಲ ಎಂದು ದಾವಣಗೆರೆ ವಿಶ್ವವಿದ್ಯಾನಿಲಯದ ಉಪ ಕುಲಪತಿ ಡಾ.ಬಿ.ಡಿ.ಕುಂಬಾರ ಹೇಳಿದರು.

ಪಿಳ್ಳೆಕೆರನಹಳ್ಳಿಯಲ್ಲಿರುವ ಬಾಪೂಜಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಗುರುವಾರ  ದಾವಣಗೆರೆ ವಿಶ್ವವಿದ್ಯಾನಿಲಯದ ನಾಲ್ಕನೆ ಸೆಮಿಸ್ಟರ್‍ನ ಬಿಇಡಿ. ಪ್ರಶಿಕ್ಷಣಾರ್ಥಿಗಳಿಗೆ ಹಮ್ಮಿಕೊಳ್ಳಲಾಗಿದ್ದ ಬೀಳ್ಕೊಡುಗೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಮುಂದೆ ನೀವು ಶಿಕ್ಷಕರುಗಳಾಗುವವರು ಹಾಗಾಗಿ ಆಂಗ್ಲ ಭಾಷೆಗೆ ಪ್ರಾಶಸ್ತ್ಯ ಕೊಡಬೇಕು. ಇಲ್ಲದಿದ್ದರೆ ಮಕ್ಕಳು ನಿಮ್ಮ ತಿರಸ್ಕಾರ ಮಾಡಬಹುದು. ಜಗತ್ತಿನ ಯಾವುದೆ ಮೂಲೆಗೆ ಹೋಗಿ ಕರ್ನಾಟಕ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಎಂದರೆ ನಿಮ್ಮ ಕಡೆ ತಿರುಗಿ ನೋಡುತ್ತದೆ. ಶಿಕ್ಷಣ ರಂಗದಲ್ಲಿ ಆರೋಗ್ಯಕರ ಪೈಪೋಟಿ ಇರಬೇಕು. ಜ್ಞಾನ ಸಂಪತ್ತಿಗಿಂತ ಮಿಗಿಲಾದುದು ಮತ್ತೊಂದಿಲ್ಲ. ಇತಿಹಾಸ ಓದಿ ಜ್ಞಾನ ಸಂಪತ್ತು ಗಳಿಸಿದವರಿಂದ ಮಾತ್ರ ಇತಿಹಾಸ ಸೃಷ್ಟಿಸಬಹುದು. ಬಿಇಡಿ. ಪಡೆದವರೆಲ್ಲಾ ಶಿಕ್ಷಕರುಗಳಾಗಿಯೇ ಕೆಲಸ ಮಾಡಬೇಕೆಂದೇನಿಲ್ಲ. ಬೇರೆ ಬೇರೆ ವಿಭಾಗಗಳಲ್ಲಿ ವಿಪುಲ ಅವಕಾಶಗಳಿವೆ ಅದನ್ನು ಬಳಸಿಕೊಳ್ಳಬೇಕಷ್ಟೆ ಎಂದು ಪ್ರಶಿಕ್ಷಣಾರ್ಥಿಗಳಿಗೆ ತಿಳಿಸಿದರು.

ಪ್ರಾಧ್ಯಾಪಕರಾಗಿದ್ದ ಡಾ.ಸರ್ವಪಲ್ಲಿ ರಾಧಾಕೃಷ್ಣನ್‍ರವರು ಅತ್ಯುನ್ನತ ರಾಷ್ಟ್ರಪತಿ ಹುದ್ದೆಗೇರಿದರು. ಅದಕ್ಕಾಗಿ ಶಿಕ್ಷಕರುಗಳು ದಿನನಿತ್ಯವೂ ಅವರನ್ನು ನಮಸ್ಕರಿಸಬೇಕು. ಜೀವನದಲ್ಲಿ ಎಷ್ಟೆ ಉನ್ನತ ಸ್ಥಾನಕ್ಕೇರಿದರು ನೀವುಗಳು ಶಿಕ್ಷಣ ಪಡೆದ ಸಂಸ್ಥೆಯನ್ನು ಮರೆಯಬೇಡಿ. ಸರ್ಕಾರಿ ಕೆಲಸಕ್ಕಾಗಿಯೇ ಕಾಯುತ್ತ ಕುಳಿತರೆ ದಿನಗಳು ಕಳೆದು ಹೋಗುತ್ತದೆ. ಖಾಸಗಿಯಾಗಿ ಸಾಕಷ್ಟು ಅವಕಾಶಗಳಿವೆ. ವಿದೇಶಗಳಿಗೆ ಹೋದರೆ ಉತ್ತಮ ಭವಿಷ್ಯ ಕಂಡುಕೊಳ್ಳಬಹುದು ಎಂದು ಸಲಹೆ ನೀಡಿದರು.

ಬಾಪೂಜಿ ಸಮೂಹ ಸಂಸ್ಥೆಗಳ ಕಾರ್ಯದರ್ಶಿ ಹಾಗೂ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಂ.ವೀರೇಶ್ ಅಧ್ಯಕ್ಷತೆ ವಹಿಸಿ ಮಾತನಾಡುತ್ತ ಧರ್ಮದ ತಳಹದಿಯಲ್ಲಿ ಶಿಕ್ಷಣ ಕೊಟ್ಟು ಸಂಸ್ಥೆಯನ್ನು ಬೆಳೆಸುತ್ತಿದ್ದೇವೆ. ಶಿಕ್ಷಕರುಗಳು ಸಾಂಸ್ಕøತಿಕ ವಾತಾವರಣದಲ್ಲಿ ಬೆಳೆಯಬೇಕು. ಶ್ರೇಷ್ಠ ಶಿಕ್ಷಕರಾದವರು ಮಾತ್ರ ಸಮಾಜದಲ್ಲಿ ಬದಲಾವಣೆ ತರಬಹುದು. ಸಮಾಜ ಕಲುಷಿತವಾಗಿ ಹೀನಾಯ ಸ್ಥಿತಿಯಲ್ಲಿದೆ. ರೋಗಗ್ರಸ್ಥ ಸಂಸ್ಥೆಗಳು ಬಹಳಷ್ಠಾಗಿವೆ ಎಂದು ವಿಷಾಧಿಸಿದರು.

ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡುವುದು ಸಂಸ್ಥೆಯ ಉದ್ದೇಶ. ಒಳ್ಳೆಯ ಅಂಕಗಳನ್ನು ಪಡೆದು ಜೀವನದಲ್ಲಿ ಭವಿಷ್ಯ ರೂಪಿಸಿಕೊಳ್ಳಿ ಎಂದು ಪ್ರಶಿಕ್ಷಣಾರ್ಥಿಗಳಿಗೆ ಕಿವಿಮಾತು ಹೇಳಿದರು.

ವಿಜಯಪುರ ವನಶ್ರೀ ಮಠದ ಬಸವಕುಮಾರ ಮಹಾಸ್ವಾಮಿಗಳು ಸಾನಿಧ್ಯ ವಹಿಸಿ ಆಶೀರ್ವಚನ ನೀಡುತ್ತ ಶಿಕ್ಷಕರುಗಳಾಗಲು ಪುಸ್ತಕವನ್ನೆ ಓದಬೇಕೆಂದೇನಿಲ್ಲ. ಸನ್ನಿವೇಶ, ಸಂದರ್ಭವನ್ನು ಓದಬೇಕು. ಮನಸ್ಸನ್ನು ರಕ್ಷಣೆಯಲ್ಲಿಡುವುದು ನಿಜವಾದ ಮಂತ್ರ. ಮತ್ತೊಬ್ಬರನ್ನು ಕುಹಕ ಮಾಡಬಾರದು. ಕೃತಜ್ಞತೆಗಿಂತ ಮಿಗಿಲಾದುದು ಮತ್ತೊಂದಿಲ್ಲ. ಕರ್ನಾಟಕ ವಿಶ್ವವಿದ್ಯಾನಿಲಯ ಮಕ್ಕಳನ್ನು ಜಾಗೃತಿಗೊಳಿಸುತ್ತಿದೆ. ಶಿಕ್ಷಕರುಗಳಲ್ಲಿ ಆದರ್ಶ, ಮೌಲ್ಯಗಳು ಮಾದರಿಯಾಗಿರಬೇಕು. ಮಹಾತ್ಮರು ಅನುಭವಗಳನ್ನು ಸಾಹಿತ್ಯದ ಮೂಲಕ ಅಭಿವ್ಯಕ್ತಿಗೊಳಿಸಿದ್ದಾರೆಂದು ಸ್ಮರಿಸಿದರು.

ಬಾಪೂಜಿ ಸಮೂಹ ಸಂಸ್ಥೆಗಳ ನಿರ್ದೇಶಕ ಕೆ.ಎಂ.ಚೇತನ್ ಮಾತನಾಡಿ ನೀವು ಕಲಿತಿರುವ ಜ್ಞಾನವನ್ನು ಮಕ್ಕಳ ಮನಸ್ಸಿಗೆ ತಲುಪುವ ರೀತಿಯಲ್ಲಿ ಕಲಿಸಿ. ಕಾಟಾಚಾರಕ್ಕಾಗಿ ಪಾಠ ಹೇಳುವಂತಾಗಬಾರದು. ಬೆಳಕು ಎಂದರೆ ಜ್ಞಾನ. ಮಕ್ಕಳಿಂದ, ಬೇರೆಯವರಿಂದ ಕಲಿಯುವುದು ಸಾಕಷ್ಟಿದೆ. ಪದವಿ ಪಡೆದಾಕ್ಷಣ ಅಹಂ ಪಟ್ಟುಕೊಳ್ಳಬಾರದು. ಕಂಪ್ಯೂಟರ್ ಜ್ಞಾನ ಅತ್ಯವಶ್ಯಕ. ನೀವುಗಳು ಶಿಕ್ಷಣ ಪಡೆದ ಸಂಸ್ಥೆಗೆ ಕೀರ್ತಿ ತನ್ನಿ ಎಂದು ಪ್ರಶಿಕ್ಷಣಾರ್ಥಿಗಳಿಗೆ ಹಾರೈಸಿದರು.

ಎಸ್.ಆರ್.ಎಸ್. ಬಿಇಡಿ. ಕಾಲೇಜಿನ ಪ್ರಾಂಶುಪಾಲರಾದ ರವಿ ಮಾತನಾಡುತ್ತ ಜಾಗತೀಕರಣ, ಉದಾರೀಕರಣ, ಖಾಸಗೀಕರಣದ ಸಮಸ್ಯೆಯನ್ನು ಎದುರಿಸಬೇಕಾಗಿದೆ. ಅಂಕಗಳ ಆಧಾರಿತ ಪದವಿ ಜೊತೆ ಉತ್ತಮ ಸಂಸ್ಕಾರವಿರಬೇಕು. ಸಾಮಾಜಿಕ ಹೊಣೆಗಾರಿಕೆ, ಜವಾಬ್ದಾರಿಯನ್ನು ಪ್ರಾಮಾಣಿಕ, ನಿಷ್ಠೆಯಿಂದ ನಿಭಾಯಿಸಿ ಎಂದು ಪ್ರಶಿಕ್ಷಣಾರ್ಥಿಗಳಿಗೆ ತಿಳಿಸಿದರು.

ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ತಿಪ್ಪೇಸ್ವಾಮಿ ಸನ್ಮಾನ ಸ್ವೀಕರಿಸಿ ಮಾತನಾಡಿ ಶಿಕ್ಷಕ ವೃತ್ತಿ ಪವಿತ್ರವಾದುದು. ಪೂರ್ವಸಿದ್ದತೆಯಿಲ್ಲದೆ ತರಗತಿಗೆ ಹೋಗಬೇಡಿ. ಏಕೆಂದರೆ ಈಗಿನ ಪೀಳಿಗೆಯ ಮಕ್ಕಳು ಅಷ್ಟೊಂದು ಬುದ್ದಿವಂತರಾಗಿರುತ್ತಾರೆ. ಬಾಪೂಜಿ ಶಿಕ್ಷಣ ಸಂಸ್ಥೆ ಮಕ್ಕಳಿಗೆ ಶಿಕ್ಷಣ ನೀಡುವುದರ ಜೊತೆ ರಂಗಕಲೆಯನ್ನು ಪ್ರೋತ್ಸಾಹಿಸುತ್ತ ಬರುತ್ತಿದೆ. ಸರ್ವತೋಮುಖ ಅಭಿವೃದ್ದಿಗೆ ಶಿಕ್ಷಕರು ಮಾರ್ಗದರ್ಶಕರಾಗಿರಬೇಕು ಎಂದರು.

ಬಾಪೂಜಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲರು ಹಾಗೂ ದಾವಣಗೆರೆ ವಿಶ್ವವಿದ್ಯಾನಿಲಯ ಸಿಂಡಿಕೇಟ್ ಸದಸ್ಯರಾದ ಶ್ರೀಮತಿ ಎಂ.ಆರ್.ಜಯಲಕ್ಷ್ಮಿ, ಉಪ ಪ್ರಾಚಾರ್ಯರಾದ ಶಿವಕುಮಾರ್ ಎಚ್.ಎನ್. ವೇದಿಕೆಯಲ್ಲಿದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಮಲಗುವ ಮುನ್ನ ಬಾಳೆಹಣ್ಣು ತಿಂದರೆ ಏನಾಗುತ್ತೆ ಗೊತ್ತಾ..?

  ಸುದ್ದಿಒನ್ : ಬಾಳೆಹಣ್ಣಿನಲ್ಲಿ ಅನೇಕ ಪೋಷಕಾಂಶಗಳು ಅಡಗಿವೆ. ಇವು ದೇಹಕ್ಕೆ ತುಂಬಾ ಒಳ್ಳೆಯದು. ಅದಕ್ಕಾಗಿಯೇ ಸದಾ ಲಭ್ಯವಿರುವ ಬಾಳೆಹಣ್ಣನ್ನು ತಿನ್ನಲು ತಜ್ಞರು ಸಲಹೆ ನೀಡುತ್ತಾರೆ. ಬಾಳೆ ಹಣ್ಣಿನಲ್ಲಿ ಪೊಟ್ಯಾಸಿಯಮ್, ವಿಟಮಿನ್ ಸಿ, ವಿಟಮಿನ್

ಈ ರಾಶಿಯವರು ಏಕಾಂಗಿ ಬದುಕಲು ಇಷ್ಟಪಡುವರು!

ಈ ರಾಶಿಯವರು ಏಕಾಂಗಿ ಬದುಕಲು ಇಷ್ಟಪಡುವರು! ಈ ರಾಶಿಯವರು ದೊಡ್ಡ ಮಹಾತ್ಮಾಕಾಂಕ್ಷೆ ಹೊಂದಿರುವರು, ಸೋಮವಾರ- ರಾಶಿ ಭವಿಷ್ಯ ಮೇ-20,2024 ಸೂರ್ಯೋದಯ: 05:46, ಸೂರ್ಯಾಸಸ್ತ : 06:38 ಶಾಲಿವಾಹನ ಶಕೆ1945, ಶ್ರೀ ಕ್ರೋಧಿ ನಾಮ ಸಂವತ್ಸರ

ಶಿಕ್ಷಕರ ಹಿತರಕ್ಷಣೆಗೆ ಕೈ ಸರ್ಕಾರ ಬದ್ಧ | ಕೊಟ್ಟ ಮಾತು ತಪ್ಪದ ಸಿಎಂ ಸಿದ್ದು :  ಮಾಜಿ ಶಾಸಕಿ ಕೆ.ಪೂರ್ಣಿಮಾ ಶ್ರೀನಿವಾಸ್

ಚಿತ್ರದುರ್ಗ, ಮೇ 19 :  ಶಿಕ್ಷಕರ ಹಿತ ಕಾಯುವಲ್ಲಿ ಕಾಂಗ್ರೆಸ್ ಸರ್ಕಾರದ ಬದ್ಧತೆ, ದೃಢ ನಿರ್ಧಾರ ಪ್ರಶ್ನಾತೀತ ಎಂದು ಮಾಜಿ ಶಾಸಕಿ ಕೆ.ಪೂರ್ಣಿಮಾ ಶ್ರೀನಿವಾಸ್ ಹೇಳಿದರು. ತಾಲೂಕಿನ ಸೀಬಾರದಲ್ಲಿ ಆಗ್ನೇಯ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್

error: Content is protected !!